Latest

ನೂರಾರು ಪ್ರಯಾಣಿಕರ ಪ್ರಾಣ ಉಳಿಸಿ ತಮ್ಮ ಪ್ರಾಣ ಬಿಟ್ಟ ಪೈಲಟ್ ಗಳು

ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ಕೇರಳದ ಕೊಯಿಕ್ಕೋಡ್​ನಲ್ಲಿ ಸಂಭವಿಸಿದ ಎರ್ ಇಂಡಿಯಾ ವಿಮಾನ ಅಪಘಾತದಲ್ಲಿ ಇಬ್ಬರು ಪೈಲಟ್ ಸೇರಿ 18 ಜನರು ಮೃತಪಟ್ಟಿದ್ದಾರೆ. ಇಬ್ಬರು ಪೈಲಟ್​ಗಳು ನೂರಾರು ಜನರ ಪ್ರಾಣ ಉಳಿಸಿ ತಾವು ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಪ್ರಯಾಣಿಕರು ಕೂಡ ಮಾತನಾಡಿದ್ದು, ಶುಕ್ರವಾರ ರಾತ್ರಿ ನಡೆದ ಈ ದುರ್ಘಟನೆಯಲ್ಲಿ ಪೈಲಟ್ ಸಮಯ ಪ್ರಜ್ಞೆಯಿಂದ ನಮ್ಮ ಜೀವಗಳನ್ನು ಕಾಪಾಡಿದರು. ವಿಮಾನ ಅಪಘಾತಕ್ಕೀಡಾಗುತ್ತಿದ್ದಂತೆಯೇ ಆಗುವ ಅನಾಹುತ ತಪ್ಪಿಸಿ ನಮ್ಮನ್ನು ಉಳಿಸುವ ಮೂಲಕ ತಮ್ಮ ಪ್ರಾಣ ತ್ಯಾಗ ಮಾಡಿದರು ಎಂದು ಹೇಳಿದ್ದಾರೆ.

ಕೊಯಿಕ್ಕೋಡ್ ನಲ್ಲಿ ಭಾರೀ ಮಳೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಹವಾಮಾನ ಕೆಟ್ಟದಾಗಿದೆ ಎಂದು ಪೈಲಟ್ ವಿಮಾನವನ್ನು ಇಳಿಸುವ ಮೊದಲೇ ಎಚ್ಚರಿಕೆ ನೀಡಿದ್ದರು. ಅಲ್ಲದೆ ಎರಡು ಬಾರಿ ಸುರಕ್ಷಿತವಾಗಿ ವಿಮಾನವನ್ನು ಇಳಿಸಲು ಪ್ರಯತ್ನಿಸಿದರೂ ನಿಯಂತ್ರಣ ಕಳೆದುಕೊಂಡರು. ಪರಿಣಾಮ ರನ್ ವೇ ಯಿಂದ ಜಾರಿ 33 ಅಡಿ ಕಂದಕಕ್ಕೆ ಜಾರಿ ಎರಡು ಭಾಗವಾಯಿತು ಎಂದು ದುರಂತದಲ್ಲಿ ಸಣ್ಣಪುಟ್ಟ ಗಾಯಗೊಂಡವರು ತಿಳಿಸಿದರು.

ಆದಾಗ್ಯೂ ಸಾವು-ನೋವು ಕಡಿಮೆ ಆಗಲು ದೀಪಕ್​ ಅವರ ಚಾಣಾಕ್ಷತೆಯೇ ಕಾರಣ ಎನ್ನುವ ಮಾತು ಕೇಳಿ ಬಂದಿದೆ. ಕೋಯಿಕ್ಕೋಡ್​ನ ವಿಮಾನ ನಿಲ್ದಾಣ ತುಂಬಾನೇ ಅಪಾಯಕಾರಿಯಾಗಿದೆ. ಅಲ್ಲದೆ, ನಿನ್ನೆ ಭಾರೀ ಪ್ರಮಾಣದ ಮಳೆ ಕೂಡ ಸುರಿಯುತ್ತಿತ್ತು. ವಿಮಾನ ಬಿದ್ದ ರಭಸಕ್ಕೆ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಯೂ ಇತ್ತು. ಆದರೆ, ದೀಪಕ್​ ಹೀಗಾಗಂದಂತೆ ತಡೆದಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ದುರಂತದಲ್ಲಿ ಮೃತಪಟ್ಟ ಮತ್ತೋರ್ವ ಪೈಲಟ್​ ಅಖಿಲೇಶ್ ಅವರಿಗೆ​ ಕಳೆದ ವರ್ಷವಷ್ಟೇ ಮದುವೆಯಾಗಿತ್ತು.

Home add -Advt

ವಿಂಗ್​ ಕಮಾಂಡರ್​ ದೀಪಕ್​ ಸಾಥೆ ಈ ಮೊದಲು ಇಂಡಿಯನ್​ ಏರ್​ಫೋರ್ಸ್​ನಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಏರ್​ ಇಂಡಿಯಾ ವಿಮಾನ ಚಾಲನೆ ಮಾಡಲು ಆರಂಭಿಸಿದ್ದರು. ಅವರ ಕಾರ್ಯ ವೈಖರಿ ನೋಡಿ ಅವರನ್ನು ಏರ್​ ಇಂಡಿಯಾ ಎಕ್ಸ್​ಪ್ರೆಸ್​ ವಿಮಾನದ ಪೈಲಟ್​ ಆಗಿ ಬಡ್ತಿ ನೀಡಲಾಗಿತ್ತು. ದೀಪಕ್​ ಬೋಯಿಂಗ್​ 737 ವಿಮಾನ ಚಾಲನೆ ಮಾಡುವಲ್ಲಿ ತುಂಬಾನೇ ಅನುಭವ ಹೊಂದಿದ್ದರು. ಹೈದರಾಬಾದ್​ನಲ್ಲಿ ಏರ್​ಫೋರ್ಸ್​ ಅಕಾಡೆಮಿಯಿಂದ ಸ್ವಾರ್ಡ್​ ಆಫ್​ ಹಾನರ್​ ಗೌರವ ಕೂಡ ಅವರಿಗೆ ದೊರೆತಿತ್ತು.

Related Articles

Back to top button