ಪ್ರಗತಿವಾಹಿನಿ ಸುದ್ದಿ; ಮುಂಬೈ: ಕೊರೊನಾ ಮೂರನೇ ಅಲೆ ಭೀತಿ ನಡುವೆಯೇ ಝೀಕಾ ವೈರಸ್ ಆತಂಕ ಆರಂಭವಾಗಿದ್ದು, ಕೇರಳದ ಬಳಿಕ ಇದೀಗ ಮಹಾರಾಷ್ಟ್ರಕ್ಕೂ ಝೀಕಾ ಕಾಲಿಟ್ಟಿದೆ. ಈ ನಡುವೆ ರಾಜ್ಯದಲ್ಲೂ ಆತಂಕ ಆರಂಭವಾಗಿದೆ.
ಪುಣೆ ಜಿಲ್ಲೆಯ ಪುರಂದರ್ ತಾಲೂಕಿನ ಬೆಲ್ಸರ್ ಗ್ರಾಮದ 50 ವರ್ಷದ ಮಹಿಳೆಯಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ. ಕಳೆದ ಒಂದು ತಿಂಗಳಿಂದ ಜ್ವರದಿಂದ ಬಳಲುತ್ತಿದ್ದ ಮಹಿಳೆಯ ಸ್ಯಾಂಪಲ್ ಅನ್ನು ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದ್ದು, ಪರೀಕ್ಷೆಯಲ್ಲಿ ಝೀಕಾ ವೈರಸ್ ದೃಢಪಟ್ಟಿದೆ.
ಈ ನಡುವೆ ಕೇರಳದಲ್ಲಿ ಇನ್ನಿಬ್ಬರಲ್ಲಿ ಝೀಕಾ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಕೇರಳದಲ್ಲಿ ಕೊರೊನಾ ಸೋಂಕು ಮಿತಿ ಮೀರುತ್ತಿರುವ ನಡುವೆಯೇ ಝೀಕಾ ಅಟ್ಟಹಾಸ ಕೂಡ ಆರಂಭವಾಗಿದ್ದು, ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಬೆಳಗಾವಿ ಬಸ್, ರೈಲು ನಿಲ್ದಾಣಗಳಲ್ಲಿ ಕಟ್ಟೆಚ್ಚರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ