*ಕಾಂಗ್ರೆಸ್ ಯುವ ನಾಯಕ ಕೇತನ್ ಭಾಟಿಕರ್ ಹಾವು ಕಡಿತದಿಂದ ಸಾವು*

ಪ್ರಗತಿವಾಹಿನಿ ಸುದ್ದಿ: ಗೋವಾ ಕಾಂಗ್ರೆಸ್ ನ ಯುವ ನಾಯಕ ಕೇತನ್ ಭಾಟಿಕರ್ ಹಾವು ಕಚ್ಚಿದ ಪರಿಣಾಮ ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ. ಗೋವಾದಿಂದ ಉತ್ತರ ಕನ್ನಡ ಜಿಲೆಯ ದಾಂಡೇಲಿಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಹಾವು ಕಡಿದು ಕೇತನ್ ಭಾಟಿಕರ್ ಸಾವನ್ನಪ್ಪಿದ್ದಾರೆ. ಅವರಿಗೆ ಕೇವಲ 38 ವರ್ಷ. ಗೋವಾ ಕಾಂಗ್ರೆಸ್ ನ ಭರವಸೆಯ ನಾಯಕನಾಗಿದ್ದರು. ಫೋಂಡಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಆದರೆ, ಹೈಕೋರ್ಟ್ ತೀರ್ಪಿನಿಂದಾಗಿ ಉಪಚುನಾವಣೆ ರದ್ದಾಗಿತ್ತು. ಹೈಕೋರ್ಟ್ ಆದೇಶದ ವಿರುದ್ಧ ಕೇತನ್ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. … Continue reading *ಕಾಂಗ್ರೆಸ್ ಯುವ ನಾಯಕ ಕೇತನ್ ಭಾಟಿಕರ್ ಹಾವು ಕಡಿತದಿಂದ ಸಾವು*