
ಪ್ರಗತಿವಾಹಿನಿ ಸುದ್ದಿ: ಮಂಗನ ಕಾಯಿಲೆ (ಕೆ ಎಫ್ ಡಿ)ಗೆ 11 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ನಡೆದಿದೆ.
ಆರವ್ (11) ಮೃತ ಬಾಲಕ. ಕಳೆದ ಏಪ್ರಿಲ್ ನಲ್ಲಿ ಆರವ್ ಗೆ ಮಂಗನ ಕಾಯಿಲೆ ದೃಢಪಟ್ಟಿತ್ತು. ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನ್ನು ಬೆಂಗಳೂರಿನ ನಿಮ್ಹಾನ್ಸ್ ಗೆ ದಾಖಲಿಸಿದ್ದರು. ಬಳಿಕ ಅಲ್ಲಿಂದ ಇಂದಿರಾಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.
ನಿರಂತರ ಚಿಕಿತ್ಸೆ ಪಡೆಯುತ್ತಿದ್ದರೂ ಬಾಲಕ ಚೇತರಿಸಿಕೊಂಡಿಲ್ಲ. ಚಿಕಿತ್ಸೆ ಫಲಕಾರಿಯಗದೇ ಕೊನೆಯುಸಿರೆಳೆದಿದ್ದಾನೆ.