Kannada NewsKarnataka NewsLatest

ಖಡೇಬಜಾರ್ ಸೀಲ್ ಡೌನ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಗರದಲ್ಲಿ ದಿನದಿಂದ ದಿನಕ್ಕೆ ಸೀಲ್ ಡೌನ್ ಪ್ರದೇಶಗಳ ಸಂಖ್ಯೆ ಏರುತ್ತಲೇ ಇದೆ. ಕೊರೋನಾ ರೋಗಿಗಳ ಸಂಖ್ಯೆ ಮಿತಿ ಮೀರುತ್ತಿರುವುದರಿಂದ ಇಡೀ ನಗರ ತತ್ತರಿಸಿ ಹೋಗುತ್ತಿದೆ.

ಬೆಳಗಾವಿ ನಗರದಲ್ಲಿ ಸಂಚರಿಸುವವರು ಎಲ್ಲಿಂದ ಹೋಗಬೇಕು, ಯಾವ ರಸ್ತೆ ಸಂಚಾರ ಮುಕ್ತವಾಗಿದೆ ಎನ್ನುವುದನ್ನು ತಿಳಿದುಕೊಳ್ಳುವುದೇ ಕಷ್ಟವಾಗಿದೆ.

Home add -Advt

ಇಂದು ಬೆಳಗಾವಿಯ ಪ್ರಮುಖ ಮಾರುಕಟ್ಟೆ ಪ್ರದೇಶ ಖಡೇಬಜಾರ್ ಸೀಲ್ ಡೌನ್ ಆಗಿದೆ. ಕೆಲವು ದಿನದ ಹಿಂದೆ ಇಲ್ಲಿಯ ಒಂದು ಭಾಗ ಮಾತ್ರ ಸೀಲ್ ಡೌನ್ ಆಗಿತ್ತು. ಇದೀಗ ಈ ಪ್ರದೇಶದಲ್ಲಿ ಮನೆ ಹೊಂದಿರುವ ವೃದ್ದ ದಂಪತಿಗಳಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಸೀಲ್ ಡೌನ್ ಮಾಡಲಾಗಿದೆ.

ಇದರಿಂದಾಗಿ ಈ ಭಾಗದಲ್ಲಿ ಸಂಚಾರ, ವ್ಯಾಪಾರ ವಹಿವಾಟು ಎಲ್ಲವೂ ಸ್ಥಘಿತವಾಗಿದೆ.

Related Articles

Back to top button