Kannada NewsKarnataka News

*ಮುರುಘಾ ಶ್ರೀಗಳ ಬೆಳ್ಳಿ ಮೂರ್ತಿ ಕದ್ದು ಪರಾರಿಯಾದ ಖದೀಮರು* 

ಪ್ರಗತಿವಾಹಿನಿ ಸುದ್ದಿ: ಚಿತ್ರದುರ್ಗದ ಮುರುಘಾ ಮಠದ ದರ್ಬಾರ್ ಹಾಲ್‌ನಲ್ಲಿಟ್ಟಿದ್ದ 22 ಕೆಜಿ ತೂಕದ ಮುರುಘಾ ಶ್ರೀಗಳ ಬೆಳ್ಳಿ ಮೂರ್ತಿಯನ್ನು ಖದೀಮರು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. 

ಈ ಕುರಿತು ಮಠದ ಬಸವಪ್ರಭು ಶ್ರೀ ಮಾತನಾಡಿ, ಈ ಮೂರ್ತಿಯು ಅಂದಾಜು 20 ಲಕ್ಷ ರೂಪಾಯಿ ಮೌಲ್ಯದ್ದು, ಕಳೆದ ಜೂ.26 ರಿಂದ ದರ್ಬಾರ ಹಾಲ್ ನ ಸಿಸಿಟಿವಿ ಕ್ಯಾಮೆರಾ ಕೂಡ ಬಂದ್ ಆಗಿದೆ. ಆಗ ಅಲ್ಲಿದ್ದ ಬೆಳ್ಳಿ ಪುತ್ಥಳಿ ಕದ್ದಿದ್ದಾರೆ ಎಂಬ ಶಂಕೆ ಇದೆ. ಕಳ್ಳತನದ ಬಗ್ಗೆ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಶ್ರೀ ದೂರು ನೀಡುತ್ತಾರೆ ಎಂದು ಹೇಳಿದರು.

ಇನ್ನು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿ ಮುರುಘಾ ಶ್ರೀ ವಿರುದ್ಧ ಫೋಕೋ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಚಿತ್ರದುರ್ಗದ ಮುರುಘಾ ಮಠದ ಮುರುಘಾಶ್ರೀ ಷರತ್ತು ಬದ್ಧ ಜಾಮೀನಿನ ಮೇಲೆ ಸದ್ಯ ಜೈಲಿನಿಂದ ಹೊರಗಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button