Kannada NewsKarnataka News

ಖಾನಾಪುರ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಬಿಜೆಪಿ ಮಹಿಳಾ ಮೋರ್ಚಾ ಬೆಳಗಾವಿ ಗ್ರಾಮಂತರ ಜಿಲ್ಲೆಯ ವತಿಯಿಂದ ಖಾನಾಪುರ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆ ನಡೆಸಲಾಯಿತು.

ಖಾನಾಪುರದ ರಾವಲನಾಥ ಮಂದಿರದಲ್ಲಿ ಸಭೆ ನಡೆಯಿತು. ಮಹಿಳಾ ಮೋರ್ಚಾ ಖಾನಾಪುರ ಇನ್‌ಚಾರ್ಜ್, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್,  ಖಾನಾಪುರ ಅಧ್ಯಕ್ಷ ಸಂಜಯ್ ಕುಬಲ್, ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ಕೋಚೇರಿ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪ್ರೇಮಾ ಭಂಡಾರಿ, ಮಹಿಳಾ ಮೋರ್ಚಾ ಖಾನಾಪುರ ಅಧ್ಯಕ್ಷೆ ರಾಜಶ್ರೀ ದೇಸಾಯಿ, ಜಿಲ್ಲಾ ಕಾರ್ಯಕಾರಿಣಿ ಕಾರ್ಯದರ್ಶಿ ವಾಸಂತಿ ಬಡಿಗೇರ್ ಮೊದಲಾದವರು ಇದ್ದರು.

ಈವರೆಗಿನ ಕಾರ್ಯ ಚಟುವಟಿಕಗಳ ಅವಲೋಕನ ನಡೆಸಿದ ಸಭೆ, ಮುಂದೆ ನಡೆಸಬೇಕಾದ ಚಟುವಟಿಕೆಗಳ ಕುರಿತು ಚರ್ಚೆ ನಡೆಸಿತು.

ಖಾನಾಪುರ ಅರಣ್ಯ ಪ್ರದೇಶದಲ್ಲಿರುವ ಕುಗ್ರಾಮಗಳಲ್ಲಿ ಸೇವೆ ಸಲ್ಲಿಸುವ ಆಶಾ ಕಾರ್ಯಕರ್ತೆಯರನ್ನು ಈ ಸಂದರ್ಭದಲ್ಲಿ ಡಾ ಸೋನಾಲಿ ಸರ್ನೋಬತ್ ಸನ್ಮಾನಿಸಿದರು.

Home add -Advt

ವೈದ್ಯರ ದಿನ ಮತ್ತು ಗುರು ಪೂರ್ಣಿಮೆ ನಿಮಿತ್ತ ಡಾ.ಸೋನಾಲಿ ಸರ್ನೋಬತ್ ಸನ್ಮಾನ

 

ವಿಡೀಯೋ ಕಾನ್ಫರೆನ್ಸ್ ಮೂಲಕ ಸಿಎಂ ಬೊಮ್ಮಾಯಿ ಅಧಿಕಾರಿಗಳಿಗೆ ನೀಡಿದ ಸೂಚನೆಗಳು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button