Wanted Tailor2
Cancer Hospital 2
Bottom Add. 3

ಖಾನಾಪುರ ತಾಲೂಕು, ಮರಾಠಾ ಸಮಾಜ ಅಭಿವೃದ್ಧಿ: ಹಲವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಡಾ.ಸೋನಾಲಿ ಸರ್ನೋಬತ್

Khanapur Taluk, Maratha community Development: Dr. Sonali Sarnobat met many leaders and submitted a request

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಖಾನಾಪುರ ತಾಲೂಕಿನ ಸರ್ವತೋಮುಖ ಅಭಿವೃದ್ಧಿ ಹಾಗೂ ಮರಾಠ ಸಮಾಜದ ಅಭಿವೃದ್ಧಿಗಾಗಿ ಪಕ್ಷದ ಹಲವಾರು ವರಿಷ್ಠರನ್ನು ಭೇಟಿ ಮಾಡಿರುವ ಬೆಳಗಾವಿ ಗ್ರಾಮೀಣ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ, ಖಾನಾಪುರ ತಾಲೂಕು ಉಸ್ತುವಾರಿ ಡಾ: ಸೋನಾಲಿ ಸರ್ನೋಬತ್, ಈ ಸಂಬಂಧ ಮನವಿಗಳನ್ನು ಸಲ್ಲಿಸಿದ್ದಾರೆ.
ಖಾನಾಪುರ ತಾಲೂಕಿನ ಕೆಲವು ಗ್ರಾಮಗಳ ರಸ್ತೆ ಸಂಪರ್ಕ ಹಾಗೂ ಸೇತುವೆ ನಿರ್ಮಾಣ ಕುರಿತು ಮತ್ತು ಮರಾಠ ಅಭಿವೃದ್ಧಿ ನಿಗಮದ ಯೋಜನೆಗಳ ಸೌಲಭ್ಯಗಳನ್ನು ಒದಗಿಸುವ ಕುರಿತು ಮಾಜಿ ಮುಖ್ಯಮಂತ್ರಿ  ಬಿ . ಎಸ್ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ನಂತರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಜೊತೆ ಕ್ಷೇತ್ರದ ರಾಜಕೀಯ ಬೆಳವಣಿಗೆಯ ಬಗ್ಗೆ ಹಾಗೂ ಮಹಿಳಾ ಮೋರ್ಚಾ ಸಂಘಟನೆಯ  ಬಗ್ಗೆ ಚರ್ಚಿಸಿದರು.
  ಪಕ್ಷದ ವರಿಷ್ಠರನ್ನು ಈ ಸಂದರ್ಭದಲ್ಲಿ ಸತ್ಕರಿಸಿ,  ಖಾನಾಪುರ ತಾಲೂಕಿನ ಅಭಿವೃದ್ಧಿ ಕುರಿತು ಮತ್ತು ಮರಾಠ ಸಮಾಜದ ಅಭಿವೃದ್ಧಿ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕೆಂದು ವರಿಷ್ಠರಿಗೆ ಮನವಿ ಸಲ್ಲಿಸಿದರು.
  ಈ ಸಂದರ್ಭದಲ್ಲಿ ತಾಲೂಕಿನ ಬಿಜೆಪಿ ಮುಖಂಡರು ಬಸವರಾಜ ಈಶ್ವರ ಸಾಣೀಕೊಪ್ಪ ಕಡೇಮನಿ, ಅರ್ಜುನ್ ಗಾವಡೆ, ಅನಂತ ಗಾವಡೆ, ಜ್ಞಾನೇಶ್ವರ ಗಾವಡೆ, ಭಾರತಿ ತಕ್ಕಡೆ, ನಾಗೇಶ್ ರಾಮಜಿ,  ವಿನಾಯಕ್ ನಾಯಕ್ ಮುಂತಾದವರು ಉಪಸ್ಥಿದ್ದರು.

 

https://pragati.taskdun.com/latest/memorandum-solve-problems-khanapur-sonalisarnobat/

https://pragati.taskdun.com/belagavi-news/after-75-years-these-villagers-got-freedom-thanks-to-dr-sonali-sarnobat/

 

Bottom Add3
Bottom Ad 2

You cannot copy content of this page