ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಖಚಿತ ಮಾಹಿತಿ ಮೇರೆಗೆ ಸ್ಥಳೀಯ ಅಬಕಾರಿ ಅಧಿಕಾರಿಗಳು ತಾಲ್ಲೂಕಿನ ಕಣಕುಂಬಿ ಬಳಿಯ ಅಬಕಾರಿ ಚೆಕ್ ಪೋಸ್ಟ್ ನಲ್ಲಿ ಗೋವಾದಿಂದ ರಾಜ್ಯದತ್ತ ಬರುತ್ತಿದ್ದ ಗೂಡ್ಸ್ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಅದರಲ್ಲಿ ಗೋವಾದಿಂದ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ರಾಜ್ಯದ 450 ಲೀ.ಮದ್ಯ ಪತ್ತೆಯಾದ ಘಟನೆ ಶುಕ್ರವಾರ ವರದಿಯಾಗಿದೆ.
ತಪಾಸಣೆ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ನೊಂದಣಿಯಾಗಿರುವ ಕೆಂಪು ಬಣ್ಣದ ಸ್ವರಾಜ ಮಜಡಾ ವಾಹನದಲ್ಲಿ ಗೋವಾ ರಾಜ್ಯದ 750.ಮಿ.ಲೀ ಅಳತೆಯ ಬಾಂಬೆ ರಾಯಲ್ ವಿಸ್ಕಿಯ 600 ಬಾಟಲಿಗಳಲ್ಲಿ ಒಟ್ಟು 450 ಲೀಟರ್ ಮದ್ಯ ದೊರೆತಿದೆ. ವಾಹನದ ಚಾಲಕ ಬೆಂಗಳೂರಿನ ಟಿ.ಜಯರಾಮ ಎಂಬ ವ್ಯಕ್ತಿಯನ್ನು ವಾಹನದ ಸಮೇತ ವಶಪಡಿಸಿಕೊಳ್ಳಲಾಗಿದೆ. ವಾಹನದ ಮಾಲೀಕನನ್ನು ಪತ್ತೆ ಹಚ್ಚಬೇಕಿದೆ. ಈ ಪ್ರಕರಣದಲ್ಲಿ ವಶಕ್ಕೆ ಪಡೆದ ಮದ್ಯದ ಮೌಲ್ಯ ರೂ.66 ಸಾವಿರ ಮತ್ತು ವಾಹನದ ಮೌಲ್ಯ ರೂ.7.50 ಲಕ್ಷ ಎಂದು ಅಬಕಾರಿ ಇಲಾಖೆಯ ಮೂಲಗಳು ತಿಳಿಸಿವೆ. ಖಾನಾಪುರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಅಬಕಾರಿ ಇಲಾಖೆಯ ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಅಬಕಾರಿ ನಿರೀಕ್ಷಕ ಮಂಜುನಾಥ ಗಲಗಲಿ, ಉಪ ನಿರೀಕ್ಷಕಿ ಪುಷ್ಪಾ ಗದಾಡಿ, ಸಿಬ್ಬಂದಿ ವಿಠ್ಠಲ ಕ್ವಾರಿ, ರಾಯಪ್ಪ ಮಣ್ಣಿಕೇರಿ, ಗುಂಡುರಾವ್ ಪೂಜೇರಿ, ಬಿ.ಎಸ್ ಅಟಗಲ್, ಪ್ರವೀಣ ಬೆಳಕೂಡ, ಎಸ್.ಎಸ್ ಪಾಟೀಲ, ಸಯ್ಯದ ಜಲಾನಿ ಭಾಗವಹಿಸಿದ್ದರು.
ಪ್ರಧಾನಿ ಮೋದಿ ಜನ್ಮದಿನ: KLES ಆಸ್ಪತ್ರೆಯಿಂದ 15 ದಿನ ಹಲವು ವಿದಾಯಕ ಕಾರ್ಯಕ್ರಮ
https://pragati.taskdun.com/latest/prime-minister-modis-birthday-many-programs-by-kles-hospital/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ