*ಖಾನಾಪುರದ ಆಮಂತ್ರಣ ಲಾಡ್ಜ್ ಮೇಲೆ ಪೊಲೀಸರ ದಾಳಿ: ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದ 16 ಜನ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯ ಸ್ಟೇಟ್ ಬ್ಯಾಂಕ್ ಎದುರಿನ ಆಮಂತ್ರಣ ಲಾಡ್ಜ್ ಮೇಲೆ ದಾಳಿ ನಡೆಸಿದ ಖಾನಾಪುರ ಠಾಣೆಯ ಪೊಲೀಸರು ಲಾಡ್ಜ್ ನಲ್ಲಿಲ್ಲಿ ನಡೆಯುತ್ತಿದ್ದ ವೇಶ್ಯಾವಟಿಕೆ ದಂಧೆಯನ್ನು ಪತ್ತೆ ಹಚ್ಚಿದದರೆ. ಈ ದಂಧೆಯಲ್ಲಿ ಭಾಗಿಯಾಗಿದ್ದ 16 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ನಡೆದ ದಾಳಿಯಲ್ಲಿ ಲಾಡ್ಜ್ ನ ವಿವಿಧ ರೂಮುಗಳಲ್ಲಿ ವೇಶ್ಯಾವಾಟಿಕೆಯಲ್ಲಿ ನಿರತರಾಗಿದ್ದ 11 ಗ್ರಾಹಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಐವರು ಮಹಿಳೆಯರನ್ನು ರಕ್ಷಿಸಿ ಬೆಳಗಾವಿಯ ಸಾಂತ್ವನ ಕೇಂದ್ರಕ್ಕೆ ರವಾನಿಸಲಾಗಿದೆ.
ಲಾಡ್ಜ್ ಮಾಲೀಕ ವಿನಾಯಕ ಲಕ್ಷ್ಮಣ ಮಾಂಜರೇಕರ ವಿರುದ್ಧ ಇಮ್ಮಾರಲ್ ಟ್ರಾಫಿಕ್ ಪ್ರಿವೆಂಷನ್ ಆಕ್ಟ್ (ಐಟಿಪಿಎ) ಅಡಿ ದೂರು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎಸ್.ಪಿ ಡಾ.ಭೀಮಾಶಂಕರ ಗುಳೇದ ಅವರ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಖಾನಾಪುರ ಠಾಣೆಯ ಇನ್ಸಪೆಕ್ಟರ್ ಮಂಜುನಾಥ ನಾಯ್ಕ, ಎಸ್ಐ ಚನ್ನಬಸವ ಬಬಲಿ, ಮುಖ್ಯ ಪೇದೆ ಜಯರಾಮ ಹಮ್ಮಣ್ಣವರ, ಸಿಬ್ಬಂದಿ ಅನಸೂಯಾ ಬಸಪ್ಪನವರ, ಓಂಕಾರ ವಾಳವೆ, ಮಂಜುನಾಥ ಮುಸಳಿ, ವಾಸುದೇವ ಪಾರಸೇಕರ, ಈಶ್ವರ ಜಿನ್ನವ್ವಗೋಳ ಹಾಗೂ ಇತರರು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ