Latest

ಸಿದ್ದಗಂಗಾ ಮಠಕ್ಕೆ ಕಿಚ್ಚ ಸುದೀಪ್, ಇಂದ್ರಜಿತ್ ಲಂಕೇಶ್ ಭೇಟಿ

ಪ್ರಗತಿವಾಹಿನಿ ಸುದ್ದಿ; ತುಮಕೂರು: ನಟ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ಇಂದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ. ಲಿಂಗಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಗೆ ಪೂಜೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸುದೀಪ್, ನಾಳೆ ತಮ್ಮ ಹುಟ್ಟುಹಬ್ಬ ಹಿನ್ನಲೆಯಲ್ಲಿ ಹಾಗೂ ಇಂದ್ರಜಿತ್ ಲಂಕೇಶ್ ಅವರ ಜತೆಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುವ ಬಗ್ಗೆ ಕಳೆದ ನಾಲ್ಕು ತಿಂಗಳ ಹಿಂದೆಯೇ ಮಾತನಾಡಿದ್ದೆ. ಈಗ ಚಿತ್ರೀಕರಣದಿಂದ ಬಿಡುವಿರುವ ಕಾರಣಕ್ಕೆ ಬೆಂಗಳೂರಿಗೆ ಬರುವುದಾಗಿ ತಿಳಿಸಿದ್ದೆ. ಹೀಗಾಗಿ ಇಬ್ಬರು ಇಂದು ಮಠಕ್ಕೆ ಭೇಟಿ ನೀಡಿದ್ದೇವೆ ಎಂದರು.

ಇನ್ನು ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ನಂಟು ಆರೋಪ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಹಾಗಾಗಿ ನನಗೆ ಗೊತ್ತಿರದ ವಿಚಾರವನ್ನು ಮಾತನಾಡುವುದು ತಪ್ಪಾಗುತ್ತದೆ. ಚಿತ್ರರಂಗವನ್ನು ಹಲವರು ಸೇರಿ ಕಟ್ಟಿದ್ದಾರೆ. ಯಾವುದೋ ಒಂದು ವಿಚಾರಕ್ಕೆ ಚಿತ್ರರಂಗವನ್ನು ದೂಷಿಸುವುದು ಬೇಡ ಎಂದು ಹೇಳಿದರು.

ಇದೇ ವೇಳೆ ಕರೋನಾ ಸೋಂಕಿನ ಬಗ್ಗೆ ಹಿಂದೆ ಇದ್ದ ಭಯ ಈಗ ಇಲ್ಲ. ಅಂದರೆ ಕೊರೊನಾ ಕಡಿಮೆಯಾಗಿದೆ ಎಂದು ಅರ್ಥವಲ್ಲ. ಹಲವು ದಿನಗಳಿಂದ ಒಂದು ವಿಷಯಕ್ಕೆ ಭಯಪಟ್ಟು ಕುಳಿತಾಗ ಒಂದು ಸಂದರ್ಭದಲ್ಲಿ ಏನಾಗುತ್ತೋ ಆಗಲಿ ಎಲ್ಲವನ್ನು ಎದುರಿಸಿ ಬಿಡೋಣ ಎಂದು ಅದರಿಂದ ಹೊರ ಬರುತ್ತೇವೆ. ಅಂತ ಸಂದರ್ಭ ಬಂದೇ ಬರುತ್ತದೆ. ಅದು ಯಾವುದೇ ವಿಚಾರವಾಗಿರಲಿ. ಹಾಗೇ ಕೊರೊನಾ ಭಯದಿಂದ ಜನ ಹೊರ ಬರುತ್ತಿದ್ದಾರೆ ಎಂದು ಹೇಳಿದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button