Kannada NewsKarnataka NewsLatest

*ಅಣ್ಣನಿಗೆ ಕಿಡ್ನಿ ದಾನ ಮಾಡಿದ ತಮ್ಮ*

ಪ್ರಗತಿವಾಹಿನಿ ಸುದ್ದಿ: ಕೆಲ ವರ್ಷಗಳಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಅಣ್ಣನಿಗೆ ತಮ್ಮನೇ ಕಿಡ್ನಿ ದಾನ ಮಾಡಿರುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

ಕೆಪಿಸಿಸಿ ಸದಸ್ಯರಾಗಿರುವ ಅರವಿಂದ್ ದಳವಾಯಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಅವರ ಸಹೋದರ ಅನಿಲ್ ಕುಮಾರ್ ದಳವಾಯಿ ತಮ್ಮ ಒಂದು ಕಿಡ್ನಿ ದಾನ ಮಾಡುವ ಮೂಲಕ ಅಣ್ಣನಿಗೆ ಮೂತ್ರಪಿಂಡ ಕಸಿ ಮಾಡಿಸಲು ನೆರವಾಗಿದ್ದಾರೆ. ಅರವಿಂದ್ ದಳವಾಯಿ ಅವರಿಗೆ ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಮೂತ್ರಪಿಂಡ ಕಸಿ ಮಾಡಿಸಲಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ.

Home add -Advt

ಈ ಬಗ್ಗೆ ಸಂತಸ ಹಂಚಿಕೊಂಡಿರುವ ಅರವಿಂದ್ ದಳವಾಯಿ, ತನಗೆ ಕಿಡ್ನಿ ದಾನ ಮಾಡಿ ಜೀವ ಉಳಿಸಿದ ಸಹೋದರನಿಗೆ ಧನ್ಯವಾದ ತಿಳಿಸಿದ್ದಾರೆ. ಕಿಡ್ನಿ ಕಸಿ ಯಶಸ್ವಿಯಾಗಿದ್ದು, ತಾವಿಬ್ಬರೂ ಡಿಸ್ಚಾರ್ಗ್ ಆಗಿ ಮನೆಗೆ ಹಿಂದಿರುಗಿದ್ದೇವೆ. ವೈದ್ಯರ ಸಲಹೆ ಮೇರೆಗೆ ಕನಿಷ್ಟ 6 ತಿಂಗಳು ಸೋಂಕಿನಿಂದ ರಕ್ಷಿಸಿಕೊಳ್ಳಬೇಕಿದ್ದು, ವಿಶ್ರಾಂತಿಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

Related Articles

Back to top button