Belagavi NewsBelgaum NewsKannada NewsKarnataka News

*ಅಡುಗೆ ಮನೆ ಆಸ್ಪತ್ರೆ; ಆಹಾರವೇ ಔಷಧ ಎಲ್ಲರ ಬದುಕಿಗೂ ಆಗಬೇಕು*

ಪ್ರಗತಿವಾಹಿನಿ ಸುದ್ದಿ: ಪ್ರತಿಯೊಬ್ಬರ ಬದುಕಿನಲ್ಲೂ ಅಡುಗೆ ಮನೆಯೇ ಆಸ್ಪತ್ರೆ, ಆಹಾರವೇ ಔಷಧ ಆದರೆ ಎಲ್ಲರ ಬದುಕಿಗೂ ದೀರ್ಘ ಕಾಲದ ನೆಮ್ಮದಿ ಸಿಗಲಿದೆ ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ  ಶ್ರೀಚಂದ್ರಶೇಖರ ಶಿವಾಚಾರ‍್ಯ ಸ್ವಾಮೀಜಿ ನುಡಿದರು.

ಅವರು ನಗರದ ಹೊರ ವಲಯದ ಗಣೇಶ ನಗರದ ವೇದ ಆರೋಗ್ಯ ಕೇಂದ್ರ ನಿಸರ್ಗ ಮನೆಯಲ್ಲಿ ಪ್ರಸಿದ್ಧ ವೈದ್ಯ ಸಾಹಿತಿ, ಡಾ. ವೆಂಕಟ್ರಮಣ ಹೆಗಡೆ ಅವರ ನೇತೃತ್ವದಲ್ಲಿ ಪ್ರಕಟಿಸಲಾದ ಅಡುಗೆ ಮನೆಯೇ ಆಸ್ಪತ್ರೆ, ಆಹಾರವೇ ಔಷಧ ಕೃತಿಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ನುಡಿದರು.

ಅಡುಗೆ ಮನೆ ಆಸ್ಪತ್ರೆ ಆದಾಗ ಆರೋಗ್ಯ ಚೆನ್ನಾಗಿರಲು ಸಾಧ್ಯ. ಈ ಕೃತಿಯನ್ನು ಎಲ್ಲರೂ ಓದಿ, ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಆರೋಗ್ಯ ಇದ್ದರೆ ಯಾವ ಸಾಧನೆ ಆದರೂ ಮಾಡಲು ಸಾಧ್ಯವಿದೆ. ನಿಸರ್ಗ ಮನೆ ಎಂದರೆ ನಮಗೆ ತವರು ಮನೆ ಆದಂತೆ ಆಗಿದೆ. ವರ್ಷದಲ್ಲಿ ಎರಡು ಸಲವಾದರೂ ಬರುತ್ತೇವೆ ಎಂದರು. 

ಹುಕ್ಕೇರಿ ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಮಹಾವೀರ ನಿಲಜಗಿ ಮಾತನಾಡಿ, ಇಂಥ ಕೃತಿಗಳು ಆರೋಗ್ಯ ಸಂವರ್ಧನೆಗೆ ಅನುಕೂಲ ಆಗಲಿವೆ ಎಂದರು. 

Home add -Advt

ಹುಕ್ಕೇರಿ ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಶೋಕ ಪಾಟೀಲ, ಡಾ. ವೆಂಕಟರಮಣ ಹೆಗಡೆ ಅವರ ನಿಸರ್ಗ ಮನೆ ಹೆಸರುವಾಸಿಯಾಗಲು ಅವರ ಬದ್ಧತೆ ಕಾರಣ ಎಂದರು.

ಲೇಖಕ ಡಾ. ಹೆಗಡೆ ಮಾತನಾಡಿ, ಬಹಳಷ್ಟು ಕೃತಿ ಬರೆದರೂ ಈ ಕೃತಿ ಎಲ್ಲರಿಗೂ ಇನ್ನಷ್ಟು ಪೂರಕವಾಗಿದೆ. ಮನೆ ಕಟ್ಟುವ ಜೊತೆ ಎಲ್ಲರೂ ಆರೋಗ್ಯ ಸೌಧ ಕಟ್ಟಿಕೊಳ್ಳಬೇಕು ಎಂದರು.

ಈ ವೇಳೆ ನಾರಾಯಣ ಹೆಗಡೆ, ಸಂಗೀತಾ ಹೆಗಡೆ ಇತರರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button