
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ನಗರದಲ್ಲಿ ಗಾಳಿಪಟಕ್ಕೆ ಉಪಯೋಗಿಸುವ ಅಪಾಯಕಾರಿ ಮಾಂಜಾ ದಾರ ಮಾರಾಟ ಮಾಡುವ ಅಮ್ಗಡುಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಗಾಳಿಪಟಕ್ಕೆ ಕಟ್ಟಿ ಹಾರಿಸಲು ಉಪಯೋಗಿಸುವ ಮಾಂಜಾ ದಾರ ಅತೀ ಅಪಾಯಕಾರಿಯಾಗಿದ್ದು, ವಾಹನ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಕುತ್ತಿಗೆಗೆ ಅಥವಾ ದೇಹದ ಇತರೆ ಭಾಗಗಳಿಗೆ ತಾಗಿ ಗಂಭೀರ ಗಾಯಗಳಾಗುವ ಸಾಧ್ಯತೆ ಹೆಚ್ಚು. ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಮಾಂಜಾ ದಾರ ಮಾರಾಟ ಮಾಡುವ ಅಮ್ಗಡಿಗಳ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಬೆಳಗಾವಿ ಮಾರ್ಕೇಟ್ ಹಾಗೂ ಎಪಿಎಂಸಿ ಠಾಣೆ ಪೊಲೀಸರು ಅಂಗಡಿಗಳ ಮೇಲೆ ದಾಳಿ ನಡೆಸಿದ್ದು, ಮಾರ್ಕೆಟ್ ಠಾಣೆ ವ್ಯಾಪ್ತಿಯಲ್ಲಿ ಕೊತ್ವಾಲ ಗಲ್ಲಿಯಲ್ಲಿರುವ ಅಂಗಡಿ ಮಾಲೀಕ ಫಾರುಖ್ ಮೊಹಮ್ಮದ್ ಹಾಗೂ ಎಪಿಎಂಸಿ ಠಾಣೆ ವ್ಯಾಪ್ತಿಯ ವೈಭವನಗರದಲ್ಲಿರುವ ಅಂಗಡಿ ಮಾಲೀಕ ಜಮೀರ್ ಕುತ್ಬುದ್ದೀನ್ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರ ಅಂಗಡಿಯಲ್ಲಿದ್ದ ಮಾಂಜಾ ದಾರದ ರೋಲ್ ಗಳನ್ನು ಜಪ್ತಿ ಮಾಡಲಾಗಿದೆ.