ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ : ಸ್ವಾತಂತ್ಯಕ್ಕಾಗಿ ಹೋರಾಡಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ದೇಶಕ್ಕೆಲ್ಲ ಪರಿಚಿತರು ಆದರೆ ವೀರ ರಾಣಿ ಕಿತ್ತೂರ ಚೆನ್ನಮ್ಮ ಕನಾಟಕಕ್ಕೆ ಮಾತ್ರ ಚಿರಪರಿಚಿತರಾಗಿದ್ದಾರೆಂದು ಶ್ರೀ ರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.
ಅವರು ಸ್ಥಳೀಯ ನೂತನ ಬಸ್ ನಿಲ್ದಾಣ ಬಳಿಯ ವೃತ್ತದಲ್ಲಿ ಬುಧವಾರದಂದು ವಿಜಯ ರವದಿ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ರೈತ ಹಿತ ರಕ್ಷಣಾ ಸಮಿತಿ, ಶ್ರೀ ರಾಮ ಸೇನೆ, ಶ್ರೀ ಗುರು ಶಾಂತೇಶ್ವರ ಕಲಾ ಪೋಷಕ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ವೀರ ರಾಣಿ ಕಿತ್ತೂರ ಚೆನ್ನಮ್ಮ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ನಾಮ ಫಲಕವನ್ನು ಉದ್ಘಾಟಿಸಿ ಮಾತನಾಡಿದರು.
ಸುಭಾಷ ನಾಯಿಕ ಅವರು ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದರು. ದೇಶದ ಸ್ವಾತಂತ್ಯಕ್ಕಾಗಿ ಯಾವದೇ ಆಮಿಷೆಗಳಿಗೆ ಒಳಗಾಗದೆ ಬ್ರಿಟಿಷರ ವಿರುದ್ಧ ಹೋರಾಡಿದ ಏಕೈಕ ವೀರ ಮಹಿಳೆ. ಅವರ ಸವಿ ನೆನಪಿಗಾಗಿ ಸ್ಥಳೀಯ ನೂತನ ಬಸ್ ನಿಲ್ದಾಣ ಬಳಿಯ ವೃತ್ತಕ್ಕೆ ಕಿತ್ತೂರ ಚೆನ್ನಮ್ಮನ ನಾಮಕರಣ ಮಾಡಿರುವ ಸಂತೋಷ ವ್ಯಕ್ತ ಪಡಿಸಿದರು. ಮುಂಬರುವ ದಿನಗಳಲ್ಲಿ ವೀರ ರಾಣಿ ಕಿತ್ತೂರ ಚೆನ್ನಮ್ಮನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂಕಲ್ಪ ಮಾಡುವುದಾಗಿ ತಿಳಿಸಿದರು.
ಶಿವಾನಂದ ಝಿರ್ಲಿ, ಬಸವರಾಜ ಪಾಟೀಲ, ಪ್ರಕಾಶ ಪಟ್ಟಣಶೆಟ್ಟಿ, ಚೇತನ ಪವಾರ, ಶಿವರಾಜ ಅಂಬಾರಿ, ತಮ್ಮಣ್ಣಾ ಪಾಟೀಲ, ಎಲ್.ಎಸ್.ಕಾಳಿ, ಬಾಪುಸಾಹೇಬ ನಾಯಿಕ, ಎ.ಬಿ.ಪಾಟೀಲ, ಸಂಜು ಖೋತ, ಅಣ್ಣಪ್ಪ ಪಾಟೀಲ, ಪತ್ರಕರ್ತರಾದ ರಾಮಣ್ಣಾ ನಾಯಿಕ, ಸಂಜೀವ ಮುತಾಲಿಕ, ಬಸವರಾಜ ಕೊಂಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ