Kannada NewsLatestUncategorized

*ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ೫೭೦೧.೩೮ ಕೋಟಿ ವೆಚ್ಚದ ನೀರಾವರಿ ಯೋಜನೆಗಳಿಗೆ ಅನುಮೋದನೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಒಟ್ಟು ೧೩ ಅತ್ಯಂತ ಪ್ರಮುಖ ನೀರಾವರಿ ಯೋಜನೆಗಳಿಗೆ ಇಂದಿನ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಇದರಿಂದ ಒಟ್ಟು ೫೭೦೧.೩೮ ಕೋಟಿ ರೂಪಾಯಿಗಳ ವೆಚ್ಚದ ಮಹತ್ವದ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಸುವರ್ಣಸೌಧದದಲ್ಲಿ ಇಂದು ನಡೆದ ನಡೆಸ ಸಚಿವ ಸಂಪುಟ ಸಭೆಯ ಕುರಿತು ಅವರು ಈ ಮಾಹಿತಿ ನೀಡಿದ್ದಾರೆ. ಮೆಳ್ಳಿಗೇರಿ-ಹಲಗಲಿ ಏತ ನೀರಾವರಿ:ಬಾಗಲಕೋಟೆ ಜಿಲ್ಲೆಯ ಮುಧೋಳ ಮತ್ತು ಬೀಳಗಿ ತಾಲ್ಲೂಕಿನ ವ್ಯಾಪ್ತಿಯಡಿ ಬರುವ ಗಲಗಲಿ ಗ್ರಾಮದ ಹತ್ತಿರ ಕೃಷ್ಣ ನದಿಯಿಂದ ನೀರನ್ನೆತ್ತಿ ೩೫೩೫ ಹೆಕ್ಟೇರ್ ಭೂಮಿಗೆ ಮುಂಗಾರು ಹಂಗಾಮಿನ ಅಚ್ಚುಕಟ್ಟು ಪ್ರದೇಶಗಳಿಗೆ ಸಮರ್ಪಕವಾಗಿ ನೀರನ್ನು ಹರಿಸಲು ಹಾಗೂ ೫ ಕೆರೆಗಳನ್ನು ತುಂಬಿಸುವ ಮೆಳ್ಳಿಗೇರಿ-ಹಲಗಲಿ ಏತ ನೀರಾವರಿ ಯೋಜನೆಯನ್ನು ರೂ. ೧೯೭ ಕೋಟಿಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಸಚಿವಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

 

ಈ ಯೋಜನೆಯನ್ನು ೨ ಹಂತಗಳಲ್ಲಿ ಅಂದರೆ ಮೊದಲನೇ ಹಂತದಲ್ಲಿ ೧೨೦.೦೦ ಕೋಟಿ ರೂ.ಗಳಲ್ಲಿ ಮತ್ತು ಎರಡನೇ ಹಂತದಲ್ಲಿ ೭೭.೦೦ ಕೋಟಿ ರೂ. ಗಳಲ್ಲಿ ಕೈಗೊಳ್ಳಲು ಮತ್ತು ಮೊದಲನೇ ಹಂತದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಧೋಳ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಮೆಳ್ಳಿಗೇರಿ ಮತ್ತು ಹಲಗಲಿಯಲ್ಲಿಯ ೫ ಕೆರೆಗಳಾದ ಕರಿಯಪ್ಪನಕೆರೆ, ಮೆಳ್ಳಿಗೇರಿ ಕೆರೆ, ಹುಣಸಿಕಟ್ಟಿ ಕೆರೆ, ಸಿದ್ದಾಪುರ ಕೆರೆ ಮತ್ತು ಜಮಖಂಡಿ ಕಟ್ಟೆ ಕೆರೆಗಳಿಗೆ ಈ ಯೋಜನೆಯಿಂದ ನೀರು ತುಂಬಿಸಲಾಗುವುದು ಎಂದು ಮಾನ್ಯ ಜಲಸಂಪನ್ಮೂಲ ಸಚಿವರು ತಿಳಿಸಿದ್ದಾರೆ.

ಅಮ್ಮಾಜೇಶ್ವರಿ (ಕೊಟ್ಟಲಗಿ) ಏತ ನೀರಾವರಿ:

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ನೀರಾವರಿ ವಂಚಿತ ೯೯೫೦ ಹೆ. ಪ್ರದೇಶಕ್ಕೆ ಸಮುದಾಯ ನೀರಾವರಿ ಸೌಲಭ್ಯ ಕಲ್ಪಿಸುವ ಮತ್ತು ೧೭ ಕೆರೆಗಳನ್ನು ತುಂಬಿಸುವ ಅಮ್ಮಾಜೇಶ್ವರಿ (ಕೊಟ್ಟಲಗಿ) ಏತ ನೀರಾವರಿ ಯೋಜನೆಯನ್ನು ರೂ.೧೪೮೬.೪೧ ಕೋಟಿಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಸಚಿವಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಯೋಜನೆಯನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲು ಮತ್ತು ಮೊದಲನೇ ಹಂತದ ೩೨೫.೩೧ ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಅನುಮೋದಿಸಲಾಗಿದೆ.

ಅರಭಾವಿ ಕ್ಷೇತ್ರದ ೨೦ ಕೆರೆಗಳ ನೀರು ತುಂಬುವ ಯೋಜನೆ:

ಬೆಳಗಾವಿ ಜಿಲ್ಲೆಯ ಅರಭಾವಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ೨೦ ಕೆರೆಗಳನ್ನು ಘಟಪ್ರಭಾ ನದಿಯಿಂದ ನೀರು ತುಂಬಿಸುವ ಯೋಜನೆಗೆ ರೂ.೩೨೩.೮೭ ಕೋಟಿಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಸಚಿವಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಸದರಿ ಯೋಜನೆಯನ್ನು ಎರಡು ಹಂತಗಳಲ್ಲಿ ಅಂದರೆ ಮೊದಲನೇ ಹಂತದಲ್ಲಿ ರೂ.೧೯೨.೩೦ ಕೋಟಿ ಹಾಗೂ ೨ನೇ ಹಂತದಲ್ಲಿ ರೂ.೧೩೧.೫೭ ಕೋಟಿಗಳಲ್ಲಿ ಕೈಗೊಳ್ಳಲು ಮತ್ತು ಮೊದಲನೇ ಹಂತದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ.

ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ:

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಗ್ರಾಮದ ಬಳಿ ಹಾಲಿಯಿರುವ ಕಲ್ಲೋಳ-ಯಡೂರ್ ಬ್ಯಾರೇಜಿನ ಮೇಲ್ಭಾಗದಲ್ಲಿ ದೂಧಗಂಗಾ ನದಿಯಿಂದ ನೀರನ್ನೆತ್ತಿ ಸುಮಾರು ೬೪೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಯನ್ನು ರೂ.೩೮೨.೩೦ ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಸಚಿವಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಸದರಿ ಯೋಜನೆಯನ್ನು ಎರಡು ಹಂತಗಳಲ್ಲಿ ಅಂದರೆ ಮೊದಲನೇ ಹಂತದಲ್ಲಿ ರೂ.೨೦೩.೦೦ ಕೋಟಿ ಹಾಗೂ ೨ನೇ ಹಂತದಲ್ಲಿ ರೂ.೧೭೯.೩೦ ಕೋಟಿಗಳಲ್ಲಿ ಕೈಗೊಳ್ಳಲು ಮತ್ತು ಮೊದಲನೇ ಹಂತದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ.

ಶ್ರೀ ಚನ್ನವೃಷಬೇಂದ್ರ ಏತ ನೀರಾವರಿ ಯೋಜನೆ:

ಬೆಳಗಾವಿ ಜಿಲ್ಲೆಯ ಕಿತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಬೈಲಹೊಂಗಲ ಮತ್ತು ಸವದತ್ತಿ ತಾಲ್ಲೂಕಿನ ೩೧ ಗ್ರಾಮಗಳಿಗೆ ಸುಮಾರು ೧೧,೬೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಶ್ರೀ ಚನ್ನವೃಷಬೇಂದ್ರ ಏತ ನೀರಾವರಿ ಯೋಜನೆಯನ್ನು ರೂ.೫೨೦.೦೦ ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಸಚಿವಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಯೋಜನೆಯನ್ನು ಎರಡು ಹಂತಗಳಲ್ಲಿ ಅಂದರೆ ಮೊದಲನೇ ಹಂತದಲ್ಲಿ ರೂ.೨೦೦.೦೦ ಕೋಟಿ ಹಾಗೂ ೨ನೇ ಹಂತದಲ್ಲಿ ರೂ.೩೨೦.೦೦ ಕೋಟಿಗಳಲ್ಲಿ ಕೈಗೊಳ್ಳಲು ಮತ್ತು ಮೊದಲನೇ ಹಂತದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ.

ಶ್ರೀ ಸತ್ತೀಗೇರಿ ಏತ ನೀರಾವರಿ ಯೋಜನೆ:

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ೬,೬೭೮ ಹೆಕ್ಟೇರ್ ಕ್ಷೇತ್ರಕ್ಕೆ ಘಟಪ್ರಭಾ ನದಿ ಪಾತ್ರದಿಂದ ೦.೯೮ ಟಿ.ಎಂ.ಸಿ ನೀರನ್ನು ಎತ್ತಿ ನೀರಾವರಿ ಸೌಲಭ್ಯಕ್ಕೆ ಒಳಗಪಡಿಸುವ ಶ್ರೀ ಸತ್ತೀಗೇರಿ ಏತ ನೀರಾವರಿ ಯೋಜನೆಯನ್ನು ರೂ.೫೪೬.೦೦ ಕೋಟಿ ಅಂದಾಜು ಮೊತ್ತದ ವಿವರವಾದ ಯೋಜನಾ ವರದಿಗೆ ಸಚಿವಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.ಈ ಯೋಜನೆಯನ್ನು ಎರಡು ಹಂತಗಳಲ್ಲಿ ಅಂದರೆ ಮೊದಲನೇ ಹಂತದಲ್ಲಿ ರೂ.೨೦೪.೭೦.೦೦ ಕೋಟಿ ಹಾಗೂ ೨ನೇ ಹಂತದಲ್ಲಿ ರೂ೩೪೧.೩೦.೦೦ ಕೋಟಿಗಳಲ್ಲಿ ಕೈಗೊಳ್ಳಲು ಮತ್ತು ಮೊದಲನೇ ಹಂತದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ.

ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ೩೬ ಕೆರೆಗಳನ್ನು ತುಂಬಿಸುವ ಯೋಜನೆ:

ಬೀದರ್ ಜಿಲ್ಲೆಯ ಔರಾದ ತಾಲ್ಲೂಕಿನ ಬಳತ (ಬಿ) ಹತ್ತಿರ ಹಾಲಹಳ್ಳಿ ಬ್ಯಾರೇಜ್ ಮೇಲ್ಬಾಗದಲ್ಲಿ ಮಾಂಜ್ರಾ ನದಿಯಿಂದ ೦.೯೫ ಟಿ.ಎಂ.ಸಿ ನೀರನ್ನೆತ್ತಿ ಒಟ್ಟು ೩೬ ಕೆರೆಗಳನ್ನು ತುಂಬಿಸುವ ರೂ.೫೬೦.೭೦ ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಸಚಿವಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಸದರಿ ಯೋಜನೆಯನ್ನು ಎರಡು ಹಂತಗಳಲ್ಲಿ ಅಂದರೆ ಮೊದಲನೇ ಹಂತದಲ್ಲಿ ರೂ.೩೦೦.೦೦ ಕೋಟಿ ಹಾಗೂ ೨ನೇ ಹಂತದಲ್ಲಿ ರೂ.೨೬೦.೭೦ ಕೋಟಿಗಳಲ್ಲಿ ಕೈಗೊಳ್ಳಲು ಮತ್ತು ಮೊದಲನೇ ಹಂತದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ.

ಮೆಹಕರ್ ಏತ ನೀರಾವರಿ ಯೋಜನೆ:

ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಜೀರಗ್ಯಾಳ ಬ್ಯಾರೇಜ್ ಮೇಲ್ಭಾಗದಲ್ಲಿ ಮಾಂಜ್ರಾ ನದಿಯಿಂದ ೦.೯೫ ಟಿ.ಎಂ.ಸಿ ನೀರನ್ನೆತ್ತಿ ೧೨ ಗ್ರಾಮಗಳ ಸುಮಾರು ೧೦,೦೦೦ ಹೆ. ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ರೂ.೭೬೨.೦೦ ಕೋಟಿ ಮೊತ್ತದ ಮೆಹಕರ್ ಏತ ನೀರಾವರಿ ಯೋಜನೆಗೆ ಸಚಿವಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಸದರಿ ಯೋಜನೆಯನ್ನು ಎರಡು ಹಂತಗಳಲ್ಲಿ ಅಂದರೆ ಮೊದಲನೇ ಹಂತದಲ್ಲಿ ರೂ.೨೫೦.೦೦ ಕೋಟಿ ಹಾಗೂ ೨ನೇ ಹಂತದಲ್ಲಿ ರೂ.೫೧೨.೦೦ ಕೋಟಿಗಳಲ್ಲಿ ಕೈಗೊಳ್ಳಲು ಮತ್ತು ಮೊದಲನೇ ಹಂತದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ. ಕಲಬುರಗಿ ನಗರಕ್ಕೆ ಕುಡಿಯುವ ನೀರು ಸರಬರಾಜು ಯೋಜನೆ: ಕಲಬುರಗಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಭೀಮಾ ಮತ್ತು ಕಾಗಿಣಾ ನದಿಗಳ ಸಂಗಮದ ಬಳಿ ಹುನಗುಂಟಾ ಗ್ರಾಮದ ಹತ್ತಿರ ಕಾಗಿಣಾ ನದಿಯ ಬಲದಂಡೆಯಲ್ಲಿ ಜಾಕ್ವೆಲ್ ಕಂ ಪಂಪ್ ಹೌಸ್ ನಿರ್ಮಿಸಿ, ೧.೬೨೪ ಟಿ.ಎಂ.ಸಿ ನೀರನ್ನೆತ್ತಿ ಬೆಣ್ಣೆತೋರಾ ಜಲಾಶಯಕ್ಕೆ ತುಂಬಿಸುವ ರೂ.೩೬೫.೦೦ ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಸಚಿವಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಸದರಿ ಯೋಜನೆಯನ್ನು ಎರಡು ಹಂತಗಳಲ್ಲಿ ಅಂದರೆ ಮೊದಲನೇ ಹಂತದಲ್ಲಿ ರೂ.೮೮.೬೯ ಕೋಟಿ ಹಾಗೂ ೨ನೇ ಹಂತದಲ್ಲಿ ರೂ.೨೭೬.೩೧ ಕೋಟಿಗಳಲ್ಲಿ ಕೈಗೊಳ್ಳಲು ಮತ್ತು ಮೊದಲನೇ ಹಂತದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ.

ಅಮೃತ ಸರೋವರ ನಿರ್ಮಾಣ ಯೋಜನೆ:

ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಅಣ್ಣಿಗೇರಿ, ನವಲಗುಂದ, ಕುಂದಗೋಳ, ಹುಬ್ಬಳ್ಳಿ, ಧಾರವಾಡ, ಅಳ್ನಾವರ ಮತ್ತು ಕಲಘಟಗಿ ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಪುನರುಜ್ಜೀವನ ಮತ್ತು ಸಮಗ್ರ ಅಭಿವೃದ್ಧಿಗೊಳಿಸುವ ?ಅಮೃತ ಸರೋವರ ನಿರ್ಮಾಣ ಯೋಜನೆಯ ರೂ.೩೦.೦೦ ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಸಚಿವಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಉತ್ತರಕನ್ನಡ ಜಿಲ್ಲೆಯ ಯಲ್ಲಾಪೂರ ತಾಲ್ಲೂಕಿನ ವ್ಯಾಫ್ತಿಯ ೧೦೦ ಕೆರೆಗಳನ್ನು ತುಂಬಿಸುವ ಯೋಜನೆ:

ಉತ್ತರಕನ್ನಡ ಜಿಲ್ಲೆಯ ಯಲ್ಲಾಪೂರ ತಾಲ್ಲೂಕಿನ ಕಿರವತ್ತಿ ಮತ್ತು ಮದನೂರು ಗ್ರಾಮ ಪಂಚಾಯಿತಿ ಹಾಗೂ ಮುಂಡಗೋಡ ತಾಲ್ಲೂಕಿನ ಗುಂಜಾವತಿ ಮತ್ತು ಮೈನಳ್ಳಿ ಪಂಚಾಯಿತಿಗಳ ವ್ಯಾಪ್ತಿಯಡಿ ಬೇಡ್ತಿ ನದಿ ಪಾತ್ರದಿಂದ ನೀರನ್ನು ಲಿಫ್ಟ್ ಮಾಡಿ ಒಟ್ಟು ೧೦೦ ಕೆರೆಗಳನ್ನು ತುಂಬಿಸುವ ರೂ.೨೭೪.೫೦ ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಸಚಿವಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಸದರಿ ಯೋಜನೆಯನ್ನು ಎರಡು ಹಂತಗಳಲ್ಲಿ ಅಂದರೆ ಮೊದಲನೇ ಹಂತದಲ್ಲಿ ರೂ.೧೬೬.೨೮ ಕೋಟಿ ಹಾಗೂ ೨ನೇ ಹಂತದಲ್ಲಿ ರೂ.೧೦೮.೨೨ ಕೋಟಿಗಳಲ್ಲಿ ಕೈಗೊಳ್ಳಲು ಮತ್ತು ಮೊದಲನೇ ಹಂತದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ.

ಆಳಂದ ತಾಲ್ಲೂಕಿನ ವ್ಯಾಫ್ತಿಯ ೮ ಕೆರೆಗಳಿಗೆ ನೀರು ತುಂಬಿಸುವ ಯೋಜನೆ:

ಭೋರಿ ನದಿಯಿಂದ ಆಳಂದ ತಾಲ್ಲೂಕಿನ ೦೮ ಕೆರಗಳಿಗೆ ಪೈಪ್ಲೈನ್ ಮೂಲಕ ನೀರು ತುಂಬಿಸುವ ರೂ.೪೯.೫೦ ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಸಚಿವಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಐನಾಪುರ ಏತ ನೀರಾವರಿ ಯೋಜನೆ: ಕಲಬುರಗಿ ಜಿಲ್ಲೆ, ಚಿಂಚೋಳಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಐನಾಪುರ ಮತ್ತು ಇತರೆ ೧೭ ಗ್ರಾಮಗಳ ಸುಮಾರು ೩,೭೧೦ ಹೆ. ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಐನಾಪೂರ ಏತ ನೀರಾವರಿ ಯೋಜನೆಯ ರೂ.೨೦೪.೧೦ ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಸಚಿವಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಸದರಿ ಯೋಜನೆಯನ್ನು ಎರಡು ಹಂತಗಳಲ್ಲಿ ಅಂದರೆ ಮೊದಲನೇ ಹಂತದಲ್ಲಿ ರೂ.೧೨೫.೨೫ ಕೋಟಿ ಹಾಗೂ ೨ನೇ ಹಂತದಲ್ಲಿ ರೂ.೭೮.೮೫ ಕೋಟಿಗಳಲ್ಲಿ ಕೈಗೊಳ್ಳಲು ಮತ್ತು ಮೊದಲನೇ ಹಂತದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ.

ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗೆ 382 ಕೋಟಿ ರೂ. ಮಂಜೂರು: ಪ್ರಕಾಶ ಹುಕ್ಕೇರಿ, ಗಣೇಶ ಹುಕ್ಕೇರಿ ಹರ್ಷ

https://pragati.taskdun.com/382-crores-sanctioned-for-mahalakshmi-lift-irrigation-project-prakash-hukkeri-ganesh-hukkeri-happy/

ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಕ್ಷೇತ್ರಕ್ಕೆ ಬಂಪರ್ ಕೊಡುಗೆ ನೀಡಿದ ಸರ್ಕಾರ

https://pragati.taskdun.com/the-government-has-given-a-bumper-contribution-to-mla-balachandra-jarakiholis-constituency/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button