Kannada NewsLatest

ಹಿಂಡಲಗಾ ಜೈಲು ಪಾಲಾದ ಕಿತ್ತೂರು ತಹಶೀಲ್ದಾರ್, ಗುಮಾಸ್ತ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಕಿತ್ತೂರು ತಹಶೀಲ್ದಾರ್ ಹಾಗೂ ಗುಮಾಸ್ತ ಇಬ್ಬರೂ ಜೈಲುಪಾಲಾದ ಘಟನೆ ನಡೆದಿದೆ.

ಜಮೀನು ಖಾತಾ ಮಾಡಿಕೊಡಲು 2 ಲಕ್ಷ ರೂಪಾಯಿ ಲಂಚ ಪಡೆಯುವಾಗ ಕಿತ್ತೂರು ತಹಶೀಲ್ದಾರ್ ಸೋಮಲಿಂಗ ಹಾಗೂ ಗುಮಾಸ್ತ ಜಿ.ಪ್ರಸನ್ನ ಇಬ್ಬರೂ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದರು. ಆರೋಪಿಗಳಿಬ್ಬರನ್ನೂ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಸೋಮವಾರದವರೆಗೂ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ವಹಿಸಿ ಆದೇಶ ಹೊರಡಿಸಿದೆ.

ನ.28ರವರೆಗೂ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದ್ದು, ತಹಶೀಲ್ದಾರ್ ಸೋಮಲಿಂಗ ಹಾಗೂ ಗುಮಾಸ್ತ ಜಿ.ಪ್ರಸನ್ನ ಇಬ್ಬರನ್ನೂ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ವಿವಾಹಿತ ಮಹಿಳೆಗೆ ಮದುವೆಯ ಭರವಸೆ ನೀಡಿ ನಂತರ ಲೈಂಗಿಕ ಸಂಬಂಧ ಹೊಂದುವುದು ಅತ್ಯಾಚಾರವಲ್ಲ: ಹೈಕೋರ್ಟ್

Home add -Advt

https://pragati.taskdun.com/promising-marriage-to-married-woman-and-then-having-sex-is-not-rape-high-court/

ಕಿತ್ತೂರು ತಹಸಿಲ್ದಾರ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ

https://pragati.taskdun.com/lokayukta-trapped-kittur-tahasildar/

Related Articles

Back to top button