Kannada NewsLatest

*ಪುಣೆಯಲ್ಲಿ ಕೆಎಲ್ಇ ಸಂಸ್ಥೆಯ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಪ್ರಯತ್ನ – ಶರದ್ ಪವಾರ್*

ಪ್ರಗತಿವಾಹಿನಿ ಸುದ್ದಿ; ಪುಣೆ  : ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಬೆಳಗಾವಿಯ ಕೆಎಲ್ಇ ಶಿಕ್ಷಣ ಸಂಸ್ಥೆಯ ಹುಟ್ಟು ಹಾಕಿದ ಸಪ್ತರ್ಷಿಗಳ ಕನಸು ನನಸಾಗಬೇಕಾದರೆ ಅದಕ್ಕಾಗಿ ನಾನು  ಕಲಿತ ಶಿಕ್ಷಣ ಕಾಶಿಯಾದ ಪುಣೆ ಪಟ್ಟಣದಲ್ಲಿ ಕೆಎಲ್ಇ ಶಿಕ್ಷಣ ಸಂಸ್ಥೆಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ನಿರ್ಮಾಣ ಮಾಡಲಿಕ್ಕೆ  ಜಾತ್ಯತೀತವಾಗಿ ಶ್ರಮಿಸುತ್ತೇನೆ. ಅದಕ್ಕಾಗಿ ಕೆಎಲ್ಇ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿವು ಮಹಾರಾಷ್ಟ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಅದಕ್ಕಾಗಿ ನಾನು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಕೇಂದ್ರದ ಮಾಜಿ ಕೃಷಿ ಸಚಿವ ಹಾಗೂ ಎನ್ ಸಿ ಪಿ ಅಧ್ಯಕ್ಷ ಶರದ ಪವಾರ್ ಭರವಸೆ ನೀಡಿದರು.

ಅವರು ಇಂದು ಮಹಾರಾಷ್ಟ್ರ ರಾಜ್ಯದ ಶಿಕ್ಷಣ ಕಾಶಿಯಾದ ಪುಣೆ ಪಟ್ಟಣದಲ್ಲಿ ಬೆಳಗಾವಿಯ ಕೆಎಲ್ಇ  ಶಿಕ್ಷಣ ಸಂಸ್ಥೆ ಹಾಗೂ ಮೆಡಿಕೋರ್ ಇವರ ಸಯುಕ್ತ ಆಶ್ರಯದಲ್ಲಿ ಸುಮಾರು 350 ಹಾಸಿಗೆಗಳ ಆಸ್ಪತ್ರೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು ಈ ಸಮಾರಂಭದ ಅಧ್ಯಕ್ಷತೆಯನ್ನು ಕೆಎಲ್ಇ  ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ವಹಿಸಿದ್ದರು ಅತಿಥಿಯಾಗಿ ಸಂಸದರಾದ ಶ್ರೀರಂಗ ಬಾರ್ನೆ ಶಾಸಕ ಮಹೇಶ್ ಲಾಂಡಗಿ ಹಾಗೂ ಮಿಡಿಕೋರ್ ಮುಖ್ಯಸ್ಥರು ಹಾಜರಿದ್ದರು.

ಪ್ರಾಸ್ತಾವಿಕವಾಗಿ ಡಾ. ಪ್ರಭಾಕರ್ ಕೋರೆ ಮಾತನಾಡಿ, ಸರ್ವಸಾಮಾನ್ಯ ಬಡ ಜನರ ಮತ್ತು ರೈತಾಪಿಯವರ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗಬೇಕು ಎಂದು ಹೇಳಿದರು.

ಸುಮಾರು ನೂರುವರ್ಷಗಳ ಹಿಂದೆ ಸಪ್ತರ್ಷಿಗಳು ಕೇಳಿ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿದರು ಅವರು ಮಹಾರಾಷ್ಟ್ರದಲ್ಲಿ ತಮ್ಮ ಶಿಕ್ಷಣವನ್ನು ಪುಣೆ ಪಟ್ಟಣ ಫರ್ಗುಸನ್  ಮಹಾವಿದ್ಯಾಲಯದಲ್ಲಿ ಪೂರ್ಣಗೊಳಿಸಿ ಬೆಳಗಾವಿಯಲ್ಲಿ ಕೆಎಲ್ಇ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿದರು ಇಂದು ಕೆಎಲ್ಇ  ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಎಲ್ಲಾ ವಿದ್ಯಾರ್ಥಿಗಳು ದೇಶದ ಮೂಲೆ ಮೂಲೆಗಳಲ್ಲಿ ಕಾಣುತ್ತಿದ್ದಾರೆ ಇದಕ್ಕೆ ನಮ್ಮ ಸಂಸ್ಥೆಯ ಪಾತ್ರ ಬಹಳ ಮುಖ್ಯವಾಗಿದೆ ಎಂದು ಪ್ರಭಾಕರ್ ಕೋರೆ ಹೇಳಿದರು.

ವೈದ್ಯಕೀಯ ಶಿಕ್ಷಣದಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಹಲವಾರು ಸಂಶೋಧನೆಗಳನ್ನು ಹುಟ್ಟು ಹಾಕಲಾಗಿದೆ ಆದರೆ ಅದು ಸರ್ವಸಾಮಾನ್ಯ ಜನರಿಗೆ ತಲುಪುತ್ತಿಲ್ಲ ಇಂದಿನ ವೈದ್ಯಕೀಯ ವೆಚ್ಚ ಸರ್ವಸಾಮಾನ್ಯ ಜನರಿಗೆ ಅನುಕೂಲವಾಗುವಂಥ ಕೆಲಸ ನಿರ್ವಹಿಸಬೇಕು ಶರದ ಪವಾರ್ ಹೇಳಿದರು ಈ ವೇಳೆ ಹಲವಾರು ಗಣ್ಯರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಈ ಉದ್ಘಾಟನಾ ಸಮಾರಂಭಕ್ಕೆ ತೇಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಾಸಕ ಮಹಾಂತೇಶ್ ಕೌಜಲಗಿ ನಿರ್ದೇಶಕ ಮಾಜಿ ವಿಧಾನ ಪರಿಷತ್ತಿನ ಸದಸ್ಯ ಮಹಾಂತೇಶ್ ಕವಟಗಿಮಠ ಮಾಜಿ ಶಾಸಕ ನಿರ್ದೇಶಕ ವಿಶ್ವನಾಥ್ ಪಾಟೀಲ್ ಡಾ.ಸಾದುನ್ನವರ್ ಬಿ ಆರ್ ಪಾಟೀಲ್ ಅಮಿತ್ ಕೋರೆ ಹಾಗೂ  ನಿರ್ದೇಶಕರು ಹಾಜರಿದ್ದರು.

 

*ರಾಜ್ಯ ಹಾಗೂ ಜಿಲ್ಲಾ ಮಟ್ಟದ ಬಿಜೆಪಿ ಚುನಾವಣಾ ಪ್ರಣಾಳಿಕೆಗೆ ಸಿದ್ಧತೆ: ಮಿಸ್ ಕಾಲ್ ಮೂಲಕ ಸದಸ್ಯತ್ವ ನೋಂದಣಿ*

https://pragati.taskdun.com/bjpvijaya-sankalpa-yatrecm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button