ಸಂತ್ರಸ್ತರ ನೆರವಿಗಾಗಿ ಸ್ಪಂದಿಸಿದ ಕೆ.ಎಲ್.ಇ. ಸಂಸ್ಥೆ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಪ್ರಕೃತಿಯ ಅಟ್ಟಹಾಸಕ್ಕೊಳಗಾಗಿ ಆಪತ್ತಿನಲ್ಲಿ ಸಿಲುಕಿದ ಉತ್ತರ ಕರ್ನಾಟಕದ ಬಂಧುಗಳ ದು:ಖದಲ್ಲಿ ಪಾಲ್ಗೊಂಡು ಸಂತ್ರಸ್ತರ ನೆರವಿಗಾಗಿ ಸ್ಪಂದಿಸಿದ ಕೆ.ಎಲ್.ಇ. ಸಂಸ್ಥೆಯ ಪ್ರತಿಷ್ಟಿತ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ, ಬೆಳಗಾವಿಯ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಸಹಾಯದಿಂದ ನೆರೆ ಸಂತ್ರಸ್ಥರಿಗಾಗಿ ಸ್ಪಂದಿಸಿದ್ದಾರೆ.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ವ್ಹಿ.ಡಿ. ಯಳಮಲಿ, ಪದವಿ ಪೂರ್ವ ಪ್ರಾಚಾರ್ಯರಾದ ಪ್ರೊ. ಎಸ್.ಜಿ. ನಂಜಪ್ಪನವರ ಅವರು, ಪ್ರೊ. ಆರ್.ಆರ್. ವಡಗಾವಿ, ಡಾ.(ಶ್ರೀಮತಿ), ಎಸ್.ಎನ್. ಬನಸೋಡೆ, ಪ್ರೊ. ಎನ್.ಬಿ. ಗೋಕಾವಿ, ಡಾ.ಆರ್.ಎಸ್. ಹಿರೇಮಠ ಪ್ರೊ. ಎ.ಆಯ್. ಪಾಟೀಲ, ಪ್ರೊ. ಎಸ್.ಎಸ್. ಜೋಷಿ, ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಪ್ರೊ. ಎಸ್.ಎಸ್. ಅಬ್ಬಾಯಿ, ಪ್ರೊ.ಆರ್.ಎಸ್. ಮಾಬೆನ್, ಮತ್ತಿತರು ಭಾನುವಾರ ದಿನಾಂಕ 11-08-2019 ರಂದು ಬೆಳಗಾವಿ ತಾಲೂಕಿನ ಕರಡಿಗುದ್ದಿ ಗ್ರಾಮಕ್ಕೆ ತೆರಳಿ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದವರನ್ನು ಬೇಟಿಯಾಗಿ ಸಾಂತ್ವನ ಹೇಳಿದರು. ಸುಮಾರು 68 ಜನರಿಗೆ ಬೇಕಾಗುವ ಹೊದೆಯಲು ಕಂಬಳಿ, ಕುಡಿಯುವ ನೀರಿನ ಬಾಟಲಿಗಳು ಹಾಗೂ ಬಿಸ್ಕೆಟ್‍ಗಳನ್ನು ವಿತರಿಸಿದರು.
ಈ ರೀತಿಯಾಗಿ ಮಹಾವಿದ್ಯಾಲಯದ ಸಿಬ್ಬಂದಿ ಮತ್ತು ವಿದ್ಯಾರ್ಥಿವೃಂದ ತಮ್ಮ ಅಳಿಲು ಸೇವೆಯನ್ನು ನೆರೆ ಸಂತ್ರಸ್ಥರಿಗೆ ಸಲ್ಲಿಸಿದರು.///
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ