*ಕೆಎಲ್ಇ ವಿದ್ಯಾರ್ಥಿ ಸ್ಕಾಲರ್ಶಿಪ್ ಪರೀಕ್ಷೆ, ಶುಲ್ಕ ರಿಯಾಯಿತಿ : ಕವಟಗಿಮಠ ಮಾಹಿತಿ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಪ್ರತಿಷ್ಠಿತ ಕೆಎಲ್ಇ ಸಂಸ್ಥೆ ವಿದ್ಯಾರ್ಥಿ ಸ್ಕಾಲರ್ಶಿಪ್ ಮತ್ತು ಶುಲ್ಕ ರಿಯಾಯಿತಿ ಯೋಜನೆ ಪ್ರಕಟಿಸಿದೆ.
ಈ ಕುರಿತು ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, 2025ನೇ ಸಾಲಿನ ಸ್ಕಾಲರ್ಶಿಪ್ ಪರೀಕ್ಷೆಗಳು ಜನೆವರಿ 5, ಜನವರಿ 19 ಮತ್ತು ಏಪ್ರಿಲ್ 6ರಂದು ವಿವಿಧ ಹಂತಗಳಲ್ಲಿ ನಡೆಯಲಿವೆ ಎಂದು ತಿಳಿಸಿದರು.
ಕಳೆದ ವರ್ಷ 80 ಲಕ್ಷ ರೂ. ಸ್ಕಾಲರ್ ಶಿಪ್ ನೀಡಲಾಗಿದ್ದು, ಈ ವರ್ಷ ಒಂದು ಕೋಟಿ ರೂ. ನೀಡಲಾಗುವುದು. ಸ್ಕಾಲರ್ಶಿಪ್ ಪರೀಕ್ಷೆಗಳು ಉಚಿತವಾಗಿದ್ದು, ನೊಂದಣಿ ಮಾಡದೆ ನೇರವಾಗಿ ಬಂದರೂ ಬರೆಯಲು ಅವಕಾಶ ನೀಡಲಾಗುವುದು ಎಂದರು.
ದೊಡ್ಡ ನಗರಗಳಲ್ಲಿ ಹೆಚ್ಚಿನ ಫೀ ಕೊಟ್ಟು ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಆದರೆ ಕೆಎಲ್ಇ ಕಾಲೇಜುಗಳಲ್ಲಿ ಅತ್ಯಂತ ಕಡಿಮೆ ಫೀ ಪಡೆಯಲಾಗುತ್ತಿದೆ. ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಬೆಂಗಳೂರು, ಬೆಳಗಾವಿ ಮತ್ತು ಹುಬ್ಬಳ್ಳಿ ಇಂಟಿಗ್ರೇಟೆಡ್ ಕಾಲೇಜುಗಳಿಗೆ ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ಶೇ.70ರಷ್ಟು ಮತ್ತು10ನೇ ತರಗತಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು. ಗೋಕಾಕ, ಚಿಕ್ಕೋಡಿ, ನಿಪ್ಪಾಣಿ ಮತ್ತು ಅಥಣಿ ಕಾಲೇಜುಗಳಿಗೆ ಶೇ.85ಕ್ಕಿಮನತ ಹೆಚ್ಚು ಅಂಕ ಪಡೆದು 10ನೇ ತರಗತಿ ಉತ್ತೀರ್ಣರಾಗಿರಬೇಕು.
10ನೇ ತರಗತಿಯಲ್ಲಿ ಶೇ.97ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ 25 ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ. 50% ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಶೇ.95ರಿಂದ 96.99ರಷ್ಟು ಅಂಕ ಪಡೆದು ಉತ್ತೀರ್ಣರಾದವರಿಗೆ ಮತ್ತು ಶೇ.90ಕ್ಕಿಂತ ಹೆಚ್ಚಿನ ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದವರಿಗೆ ಶೇ.25ರಷ್ಟು ರಿಯಾಯಿತಿ ನೀಡಲಾಗುವುದು.
‘ಕೆಎಲ್‌ಇ ವಿದ್ಯಾರ್ಥಿ ಸ್ಕಾಲರ್ಶಿಪ್–2025’ ಪರೀಕ್ಷೆ ಜ.5ರಂದು
ಬೆಳಗಾವಿ: ‘ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೆಎಲ್‌ಇ ಸಂಸ್ಥೆಯ ಸ್ವತಂತ್ರ ಪದವಿಪೂರ್ವ ಕಾಲೇಜುಗಳಲ್ಲಿ ಪ್ರಥಮ ವರ್ಷದ ತರಗತಿಗೆ ಉಚಿತವಾಗಿ ಪ್ರವೇಶ ಕಲ್ಪಿಸುವ ದೃಷ್ಟಿಯಿಂದ ‘ಕೆಎಲ್‌ಇ ವಿದ್ಯಾರ್ಥಿ ಸ್ಕಾಲರ್ಶಿಪ್–2025’ ಪರೀಕ್ಷೆ ಆಯೋಜಿಸಿದ್ದೇವೆ’ ಎಂದು ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಹೇಳಿದರು.
ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶತಮಾನದ ಇತಿಹಾಸವುಳ್ಳ ಕೆಎಲ್‌ಇ ಸಂಸ್ಥೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದೆ. ವಿಶ್ವದ ಮಾರುಕಟ್ಟೆಯಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಈ ಭಾಗದ ಮಕ್ಕಳೂ ಪೈಪೋಟಿ ನೀಡುವ ಮಟ್ಟಿಗೆ ಬೆಳೆಸುವ ದೃಷ್ಟಿಯಿಂದ ಈ ಪರೀಕ್ಷೆ ಸಂಘಟಿಸಲಾಗುತ್ತಿದೆ’ ಎಂದರು.
‘2024ನೇ ಸಾಲಿನ ಪರೀಕ್ಷೆಗೆ 4,450 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 357 ವಿದ್ಯಾರ್ಥಿಗಳಿಗೆ ₹80 ಲಕ್ಷ ವಿದ್ಯಾರ್ಥಿವೇತನ ಕೊಡಲಾಗಿತ್ತು. ಈ ಬಾರಿ ₹1 ಕೋಟಿಯವರೆಗೆ ವಿದ್ಯಾರ್ಥಿವೇತನ ಕೊಡುವ ಗುರಿ ಹೊಂದಿದ್ದೇವೆ’ ಎಂದು ತಿಳಿಸಿದರು.
‘ಸ್ಕಾಲರ್‌ಶಿಪ್ ಪರೀಕ್ಷೆಯಲ್ಲಿ ಶೇ.70 ಮತ್ತು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.90 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ ಮತ್ತು ಮುಂಬೈನ ಕಾಲೇಜುಗಳಲ್ಲಿ ಉಚಿತವಾಗಿ ಪ್ರವೇಶ ಕಲ್ಪಿಸುತ್ತೇವೆ. ಸ್ಕಾಲರ್‌ಶಿಪ್ ಪರೀಕ್ಷೆಯಲ್ಲಿ ಶೇ.70 ಅಂಕದೊಂದಿಗೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.85 ಅಂಕ ಪಡೆದವರಿಗೆ ಗೋಕಾಕ, ಚಿಕ್ಕೋಡಿ, ನಿಪ್ಪಾಣಿ ಮತ್ತು ಅಥಣಿಯ ಕಾಲೇಜುಗಳಲ್ಲಿ ಉಚಿತವಾಗಿ ಪ್ರವೇಶ ನೀಡುತ್ತೇವೆ’ ಎಂದರು.
‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.97ಕ್ಕಿಂತ ಅಧಿಕ ಅಂಕ ಪಡೆದ 25 ವಿದ್ಯಾರ್ಥಿಗಳು, ಶೇ.95ಕ್ಕಿಂತ ಅಧಿಕ ಅಂಕ ಪಡೆದ 25 ವಿದ್ಯಾರ್ಥಿಗಳು ಮತ್ತು ಶೇ.90ಕ್ಕಿಂತ ಅಧಿಕ ಅಂಕ ಪಡೆದು ಪ್ರೌಢಶಾಲೆಗೆ ಪ್ರಥಮ ಸ್ಥಾನ ಗಳಿಸಿದ 25 ವಿದ್ಯಾರ್ಥಿಗಳಿಗೆ ಸ್ವತಂತ್ರ ಪಿಯು ಕಾಲೇಜುಗಳ ಶುಲ್ಕದಲ್ಲಿ ಶೇ.25 ರಿಯಾಯಿತಿ ಕಲ್ಪಿಸುತ್ತೇವೆ’ ಎಂದು ತಿಳಿಸಿದರು.
‘ಸ್ಕಾಲರ್‌ಶಿಪ್ ಪರೀಕ್ಷೆ 50 ಪ್ರಶ್ನೆ ಒಳಗೊಂಡಿರುತ್ತದೆ. ಗಣಿತದ 15, ಭೌತ ವಿಜ್ಞಾನದ 10, ರಸಾಯನ ವಿಜ್ಞಾನದ 10, ಜೀವ ವಿಜ್ಞಾನದ 10 ಮತ್ತು ಜನರಲ್ ಅರ್ಥಮೇಟಿಕ್ ಅಂಡ್ ರೀಸನಿಂಗ್ ವಿಷಯದ 5 ಪ್ರಶ್ನೆಗಳಿರುತ್ತವೆ. ಬೆಂಗಳೂರಿನ ನಾಗರಭಾವಿಯ ಸ್ವತಂತ್ರ ಪದವಿಪೂರ್ವ ಕಾಲೇಜು ಮತ್ತು ಅಥಣಿಯ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ 2025ರ ಜ.5ರಂದು ಪರೀಕ್ಷೆ ನಡೆಯಲಿದೆ. ಇದಲ್ಲದೆ, 2025ರ ಜ.19 ಮತ್ತು ಏ.6ರಂದು ಬೆಳಗಾವಿ, ಹುಬ್ಬಳ್ಳಿ, ಚಿಕ್ಕೋಡಿ, ನಿಪ್ಪಾಣಿ, ಗೋಕಾಕ, ಬೆಂಗಳೂರು ಮತ್ತು ಅಥಣಿ ಕಾಲೇಜುಗಳಲ್ಲಿ ಪರೀಕ್ಷೆ ಸಂಘಟಿಸಲಿದ್ದೇವೆ’ ಎಂದು ತಿಳಿಸಿದರು.
ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ, ಆಜೀವ ಸದಸ್ಯರಾದ ಎಸ್.ಜಿ.ನಂಜಪ್ಪನವರ, ಸತೀಶ ಎಂ.ಪಿ., ಟಿ.ಮಲ್ಲಿಕಾರ್ಜುನ, ವೇಣುಗೋಪಾಲ ರೆಡ್ಡಿ ಇದ್ದರು.
‘27 ಕಾಲೇಜುಗಳಲ್ಲಿ ಸ್ಕಾಲರ್‌ಶಿಪ್’
‘ಸ್ವತಂತ್ರ ಪದವಿಪೂರ್ವ ಕಾಲೇಜು ಹೊರತುಪಡಿಸಿ ಇರುವ ಕೆಎಲ್‌ಇ ಸಂಸ್ಥೆಯ 27 ಪದವಿಪೂರ್ವ ಕಾಲೇಜುಗಳಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆಯುವವರಿಗೂ ವಿದ್ಯಾರ್ಥಿವೇತನ ಕೊಡುತ್ತೇವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.97ಕ್ಕಿಂತ ಅಧಿಕ ಅಂಕ ಪಡೆದವರಿಗೆ ₹15 ಸಾವಿರದವರೆಗೆ, ಶೇ.95ಕ್ಕಿಂತ ಅಧಿಕ ಅಂಕ ಪಡೆದವರಿಗೆ ₹10 ಸಾವಿರದವರೆಗೆ ಮತ್ತು ಶೇ.90ಕ್ಕಿಂತ ಅಧಿಕ ಅಂಕದೊಂದಿಗೆ ಪ್ರೌಢಶಾಲೆಗೆ ಪ್ರಥಮ ಸ್ಥಾನ ಗಳಿಸಿದವರಿಗೆ ₹10 ಸಾವಿರದವರೆಗೆ ನೀಡಲಾಗುವುದು. ಸ್ಕಾಲರ್‌ಶಿಪ್ ಪರೀಕ್ಷೆಗೆ ಹಾಜರಾಗದವರೂ ವಿದ್ಯಾರ್ಥಿವೇತನ ಪಡೆಯಬಹುದಾಗಿದೆ’ ಎಂದು ಮಹಾಂತೇಶ ಕವಟಗಿಮಠ ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ
‘ಕೆಎಲ್‌ಇ ಸಂಸ್ಥೆಯ ಪಿಯು ಕಾಲೇಜುಗಳಲ್ಲಿ ಪಠ್ಯಕ್ರಮ ಬೋಧನೆ ಜತೆಗೆ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನೂ ಕೊಡಲಾಗುತ್ತಿದೆ. 2023–24ನೇ ಸಾಲಿನಲ್ಲಿ ಕೆಎಲ್‌ಇ ಸಂಸ್ಥೆಯ 74 ವಿದ್ಯಾರ್ಥಿಗಳು ನೀಟ್‌ನಲ್ಲಿ 500ಕ್ಕಿಂತ ಅಧಿಕ ಅಂಕ, 29 ವಿದ್ಯಾರ್ಥಿಗಳು ಜೆಇಇನಲ್ಲಿ ಶೇ.95ಕ್ಕಿಂತ ಅಧಿಕ ಅಂಕ, 80 ವಿದ್ಯಾರ್ಥಿಗಳು ಸಿಇಟಿಯಲ್ಲಿ 10 ಸಾವಿರಕ್ಕಿಂತ ಕಡಿಮೆ ರ್‍ಯಾಂಕ್ ಗಳಿಸಿದ್ದಾರೆ. 148 ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ, 17 ವಿದ್ಯಾರ್ಥಿಗಳು ಐಐಟಿ, ಎನ್‌ಐಟಿ, ಐಐಐಟಿನಲ್ಲಿ ಪ್ರವೇಶ, 1,657 ವಿದ್ಯಾರ್ಥಿಗಳು ಎಂಜಿನಿಯರಿಂಗ್ ವಿಭಾಗಕ್ಕೆ ಪ್ರವೇಶ ಮತ್ತು 113 ವಿದ್ಯಾರ್ಥಿಗಳು ಬಿ.ಎಸ್ಸಿ ಕೃಷಿ ವಿಭಾಗಕ್ಕೆ ಪ್ರವೇಶ ಪಡೆದಿದ್ದಾರೆ’ ಎಂದು ಕವಟಗಿಮಠ ಹೇಳಿದರು.
ಗುಣಮಟ್ಟದ ಶಿಕ್ಷಣ
310 ಶಿಕ್ಷಣ ಸಂಸ್ಥೆ, 1.40 ಲಕ್ಷ ವಿದ್ಯಾರ್ಥಿಗಳು ಕೆಎಲ್ಇ ಸಂಸ್ಥೆಯಲ್ಲಿ ಕಲಿಯುತ್ತಿದ್ದಾರೆ.
9 ಇಂಟಿಗ್ರೇಟೆಡ್ ಪಿಯು ಕಾಲೇಜುಗಳನ್ನು ನಡೆಸುತ್ತಿದೆ. ಪಿಯು ಕಾಲೇಜುಗಳಲ್ಲಿ 25 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದು ಕವಟಗಿಮಠ ತಿಳಿಸಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ಕೆಎಲ್ಇ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಕಳೆದ ವರ್ಷ ನೀಟ್ ಮತ್ತು ಜೆಇ ಅಕಾಡೆಮಿ ಆರಂಭಿಸಿದೆ. ಇದರ ಮೂಲಕ ಅತ್ಯುತ್ತಮ ಕಾಲೇಜುಗಳಲ್ಲಿ ಪ್ರವೇಶ ಪಡೆಯುವಂತೆ ಸಿದ್ಧಪಡಿಸಲಾಗುತ್ತಿದೆ ಎಂದರು.
ಪರೀಕ್ಷೆಗಳು ಜನೆವರಿ 5, ಜನವರಿ 19 ಮತ್ತು ಏಪ್ರಿಲ್ 6ರಂದು ವಿವಿಧ ಹಂತಗಳಲ್ಲಿ ನಡೆಯಲಿವೆ. ಸ್ಕಾಲರ್ಶಿಪ್ ಪರೀಕ್ಷೆಗಳು ಉಚಿತವಾಗಿದ್ದು, ನೊಂದಣಿ ಮಾಡದೆ ನೇರವಾಗಿ ಬಂದರೂ ಬರೆಯಲು ಅವಕಾಶ ನೀಡಲಾಗುವುದು.
ಕಳೆದ ವರ್ಷ 4450 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 357 ವಿದ್ಯಾರ್ಥಿಗಳು ಸ್ಕಾಲರ್ ಶಿಪ್ ಪಡೆದಿದ್ದಾರೆ. ಒಟ್ಟೂ 80 ಲಕ್ಷ ರೂ. ವಿದ್ಯಾರ್ಥಿ ವೇತನ ನೀಡಲಾಗಿತ್ತು. ಈ ಬಾರಿ ಒಂದು ಕೋಟಿ ರೂ. ಗೆ ಹೆಚ್ಚಿಸಲಾಗುವುದು ಎಂದು ಅವರು ವಿವರಿಸಿದರು.
ಜಯಾನಂದ ಮುನವಳ್ಳಿ, ಎಸ್.ಜಿ.ನಂಜಪ್ಪನವರ್, ಸತೀಶ್, ಎಂ.ಮಲ್ಲಿಕಾರ್ಜುನ, ವೇಣುಗೋಪಾಲ ರಡ್ಡಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ