Kannada NewsLatestPolitics

ಸ್ಪರ್ಧಾತ್ಮಕ ಯುಗಕ್ಕೆ ಮಕ್ಕಳನ್ನು ಈಗಿಂದಲೇ ಸಜ್ಜುಗೊಳಿಸಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮುಂದಿನ ಸ್ಪರ್ಧಾತ್ಮಕ ಯುಗಕ್ಕೆ ಮಕ್ಕಳನ್ನು ಸಧೃಢರನ್ನಾಗಿಸಿ ಸನ್ನದ್ದರಾಗಿಸಲು ಇಂದಿನಿಂದಲೇ ಆರಂಭಿಸಿ ಎಂದು ಕೆಎಲ್ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಸಿ ಧಾರವಾಡ ಕರೆ ನೀಡಿದ್ದಾರೆ.

ಕೆಎಲ್ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ದಿನಾಚರಣೆ ಅಂಗವಾಗಿ ಮಾತನಾಡಿದ ಅವರು, ಕುಟುಂಬ ಯೋಜನೆ ಸದ್ಭವಿಷ್ಯದ ನಾಂದಿ. ಚಿಕ್ಕ ಕುಟುಂಬ ಚೊಕ್ಕ ಕುಟುಂಬವಾಗಿರುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ, ಸದೃಢ ಆರೋಗ್ಯ, ಉತ್ತಮ ವಾತಾವರಣ ನಿರ್ಮಿಸಿಕೊಡಲು ಸೂಕ್ತವಾಗುತ್ತದೆ ಎಂದರು.

ಮುಂದಿನ ದಿನಗಳು ಇಂದಿನಂತೆ ಇರುವುದಿಲ್ಲ. ಕಲಿಕೆ, ಕಲಿಕೆ ವಿಧಾನಗಳು, ಸಂಶೋಧನೆಗಳು, ಆಟ-ಪಾಠಗಳು ದಿನದಿಂದ ದಿನಕ್ಕೆ ಬದಲಾಗುತ್ತದೆ. ಇವಿಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ತಮ್ಮ ಉಜ್ವಲ ಭವಿಷ್ಯ ರೂಪಿಸಲು ಪಾಲಕರು, ಶಿಕ್ಷಕರು ಮಕ್ಕಳನ್ನು ಇಂದಿನಿಂದ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಕೆ ಎಲ್ ಇ ಹೋಮಿಯೋಪಥಿಕ್ ಕಾಲೇಜಿನ ಪ್ರಾಂಶುಪಾಲ ಡಾ ಎಮ್ ಎ ಉಡಚನಕರ, ಡಾ.ಸೌಮ್ಯ ವೆರ್ಣೇಕರ್, ಡಾ.ಸಂತೋಶ್ ಕುಮಾರ್ ಕರಮಸಿ, ಡಾ.ಬಸವರಾಜ್ ಕುಡಸೋಮಣ್ಣವರ್ ಮೊದಲಾದವರು ಉಪಸ್ಥಿತರಿದ್ದರು.

Home add -Advt

Related Articles

Back to top button