Wanted Tailor2
Cancer Hospital 2
Bottom Add. 3

*ರಾಷ್ಟ್ರೀಯ ಸಾಧಕರಿಗೆ ಡಾ.ಪ್ರಭಾಕರ ಕೋರೆಯವರಿಂದ ಗೌರವ ಸತ್ಕಾರ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪ್ರಸಕ್ತ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪುರಸ್ಕೃತರಾಗಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಪಡೆದುಕೊಂಡ ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕಿ ಸಪ್ನಾ ಅನಿಗೋಳ ಅವರಿಗೆ ಹಾಗೂ ಇತ್ತೀಚಿಗೆ ನವದೆಹಲಿಯಲ್ಲಿ ಜರುಗಿದ ರಾಷ್ಟ್ರಮಟ್ಟದ ಸೈನಿಕ ಶಿಬಿರ(ಟಿಎಸ್‌ಸಿ)ದಲ್ಲಿ ಕರ್ನಾಟಕ ಗೋವಾ ಎನ್‌ಸಿಸಿ ಡೈರೆಕ್ಟೋರೆಟ್‌ದಿಂದ ಆಯ್ಕೆಯಾಗಿ ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದು ಇತಿಹಾಸ ನಿರ್ಮಿಸಿದ ಜಿ.ಎ.ಪ್ರೌಢಶಾಲೆಯ ವಿದ್ಯಾರ್ಥಿ ಸಂದೀಪ ಶಿರೋಳ್ಕರ ಅವರಿಗೆ, ಹಾಗೂ ಮಧ್ಯಪ್ರದೇಶದ ಮಾವೋದಲ್ಲಿ ಜರುಗಿದ ೩೨ನೇ ಜಿವಿ ಮ್ವೌಲಂಕರ್ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ದಲ್ಲಿ ಬೆಳ್ಳಿ ಪದಕವನ್ನು ಪಡೆದು ದಾಖಲೆ ನಿರ್ಮಿಸಿದ ಪ್ರೀತಿ ಚಂದ್ರಶೇಖರಯ್ಯ ಸವಡಿ, ಗುರುನಾಥ ಲಕ್ಷ್ಮಣ ರಾಜೋಳಿ – ಇವರಿಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸತ್ಕರಿಸಿ ಅಭಿನಂದನೆಯನ್ನು ಸಲ್ಲಿಸಿದರು.

ಕೆಎಲ್‌ಇ ಸಂಸ್ಥೆಯು ಅಸಂಖ್ಯ ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಅವಿರತ ಶ್ರಮದಿಂದ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದುನಿಂತಿದೆ. ಸಾಧನೆ ಎನ್ನುವುದು ಒಂದೆರಡು ದಿನಗಳಲ್ಲಿ ಬರುವುದಿಲ್ಲ ನಿರಂತರವಾದ ಪ್ರಯತ್ನ ಹಾಗೂ ಹೋರಾಟ ಪ್ರತಿಫಲದಿಂದ ಬರಲು ಸಾಧ್ಯ. ವಿಜ್ಞಾನ ಶಿಕ್ಷಕಿ ಸಪ್ನಾ ಅನಿಗೋಳ ಇವರು ವಿಜ್ಞಾನ ಕ್ರಿಯಾಶೀಲ ಶಿಕ್ಷಕರಾಗಿ ಕಳೆದು ೨೦ ವರ್ಷಗಳಿಂದ ವಿಜ್ಞಾನದ ಬೋಧನೆಯ ಮೂಲಕ ಮಕ್ಕಳ ಹೃದಯವನ್ನು ಗೆದ್ದಿದ್ದಾರೆ. ಈ ಎನ್‌ಸಿಸಿ ಕೆಡೆಟ್‌ಗಳು ಉತ್ತಮ ತರಬೇತಿಯನ್ನು ಪಡೆದು ರಾಷ್ಟ್ರೀಯ ಮಟ್ಟದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿದ್ದಾರೆ. ಮಾತ್ರವಲ್ಲ ಕೆಎಲ್‌ಇ ಸಂಸ್ಥೆಯ ಕೀರ್ತಿಯನ್ನು ಬಾನೆತ್ತರಕ್ಕೆ ವಿಸ್ತರಿಸಿ. ಈ ಎಲ್ಲ ಸಾಧಕರು ಸಮಾಜಕ್ಕೆ ಪ್ರೇರಕರಾಗಿ ನಿಂತಿದ್ದಾರೆ. ಮುಂಬರುವ ದಿನಗಳಲ್ಲಿ ಅವರು ಇನ್ನಷ್ಟು ಸಾಧನೆಯನ್ನು ಮಾಡಲೆಂದು ಶುಭಕೋರಿದರು.

Bottom Add3
Bottom Ad 2

You cannot copy content of this page