Kannada NewsLatestPolitics

ಪ್ರಭಾಕರ ಕೋರೆ ರಾಜ್ಯಪಾಲರಾಗಲಿದ್ದಾರೆ; ಕವಟಗಿಮಠ ಭವಿಷ್ಯ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ದೇಶದ ಅತಿ ದೊಡ್ಡ ಶಿಕ್ಷಣ ಸಂಸ್ಥೆ ಕೆಎಲ್ಇ ಮುಖಾಂತರ ಆರೋಗ್ಯ ಶಿಕ್ಷಣ ಸಮಾಜಸೇವೆ ರಾಜಕಾರಣ ಮತ್ತು ಸಹಕಾರಿ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ನಮ್ಮ ಹೆಮ್ಮೆಯ ನೇತಾರರಾದ ಡಾ ಪ್ರಭಾಕರ್ ಕೋರೆ ಇವರಿಗೆ ಭಾರತೀಯ ಜನತಾ ಪಕ್ಷ ಮುಂದಿನ ದಿನಮಾನಗಳಲ್ಲಿ ದೇಶದ ಒಂದು ರಾಜ್ಯಕ್ಕಾಗಿ ರಾಜ್ಯಪಾಲರನ್ನಾಗಿ ನೇಮಕ ಮಾಡಲಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರ ಮಹಾಮಂಡಳಿಯ ಉಪಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಸಂಸ್ಥೆಯ ನಿರ್ದೇಶಕರಾದ ಜಗದೀಶ್ ಕವಟಗಿಮಠ ಅವರು ಭವಿಷ್ಯ ನುಡಿದರು.

ಚಿಕ್ಕೋಡಿ ತಾಲೂಕಿನ ಅಂಗಡಿ ಗ್ರಾಮದಲ್ಲಿರುವ ಡಾ ಪ್ರಭಾಕರ್ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ವತಿಯಿಂದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಉಪಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಸಂಸ್ಥೆಗೆ ನಿರ್ದೇಶಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ಅಂಕಲಿ ಗ್ರಾಮದಲ್ಲಿ ಆಯೋಜಿಸಲಾದ ಸತ್ಕಾರ ಸಮಾರಂಭ ಸ್ವೀಕರಿಸಿ ಮಾತನಾಡುತ್ತಿದ್ದರು.

ಉತ್ತರ ಕರ್ನಾಟಕದ ಕಣ್ಮಣಿಯಾದ ಡಾ ಪ್ರಭಾಕರ್ ಕೋರೆ ಇವರು ಸತತ ಮೂರು ಬಾರಿ ರಾಜ್ಯಸಭಾ ಸದಸ್ಯ ವಿಧಾನಪರಿಷತ್ತಿನ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದು ಮತ್ತು ಕೆಎಲ್ಇ ಶಿಕ್ಷಣ ಸಂಸ್ಥೆಯ ಮುಖಾಂತರ ಮಾಡಿರುವ ಕಾರ್ಯ ಶ್ಲಾಘನೀಯವಾದದ್ದು ಅವರಿಗೆ ಮುಂದಿನ ದಿನಮಾನಗಳಲ್ಲಿ ಭಾರತೀಯ ಜನತಾ ಪಕ್ಷ ಮುಂದಿನ ದಿನಮಾನಗಳಲ್ಲಿ ದೇಶದಲ್ಲಿರುವ ಒಂದು ರಾಜ್ಯಕ್ಕಾಗಿ ರಾಜ್ಯಪಾಲರನ್ನಾಗಿ ನೇಮಕ ಮಾಡಲಿದ್ದಾರೆ ಪ್ರಭಾಕರ್ ಕರೆಯುವರು ಸಹಕಾರಿ ರಂಗದ ಮುಖಾಂತರ ಹಲವಾರು ಕುಟುಂಬಗಳ ಅನ್ನದಾತ ಹಾಗೂ ರೈತರ ಪರವಾಗಿ ಕಾರ್ಯ ಮಾಡಿದ್ದಾರೆ ಗ್ರಾಮೀಣ ಭಾಗದಲ್ಲಿ ಸ್ಥಾಪಿಸಿರುವ ಸಂಸ್ಥೆ ಯನ್ನು ಉನ್ನತ ಮಟ್ಟಕ್ಕೆ ಪ್ರಗತಿ ಸಾಧಿಸಲು ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು ಈ ವೇಳೆ ಸಹಕಾರಿ ವತಿಯಿಂದ ಜಗದೀಶ್ ಕವಟಗಿಮಠ ಇವರ ಸನ್ಮಾನವನ್ನು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಭರತೇಶ್ ಬನವನೆ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಹಕಾರಿ ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ಪಾಟೀಲ್ ಅಂಕಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶೈಲಜಾ ಪಾಟೀಲ್ ಹಾಗೂ ನಿರ್ದೇಶಕ ಮಂಡಳಿಯ ವತಿಯಿಂದ ಮಾಡಲಾಯಿತು.

ಈ ಕಾರ್ಯಕ್ರಮಕ್ಕೆ ಡಾ ಪ್ರಭಾಕರ್ ಕೊರೆ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಉಪಾಧ್ಯಕ್ಷರಾದ ಶೊಭಾ ಜಕಾತೆ ನಿರ್ದೇಶಕರಾದ ಪಿಂಟು ಹಿರೇಕುರುಬರ್ ಸಿದಾಗೌಡ ಮಗದುಮ್ ಅಣ್ಣಾಸಾಹೇಬ್ ಸಂಕೇಶ್ವರಿ ಮಹಾದೇವ ಪೊಳ ಜ್ಯೋತಿ ಗೌಡ ಪಾಟೀಲ್ ಜ್ಯೋತಿ ಕಮತೆ ಸಚಿನ್ ಕುಟೊಳ ನೆಹರು ಚಿಕ್ಕಲಿ ಸುಕುಮಾರ್ ಚೊಗಲಾ ಬಸಗೌಡ ಆಸಂಗಿ ಜಯಶ್ರೀ ಮೇದಾರ ಪಾರ್ವತಿ ಧರ, ಸುರೇಶ್ ಪಾಟೀಲ್, ವಿವೇಕ ಕಮತೆ ಹಾಗೂ ಇನ್ನುಳಿದ ನಿರ್ದೇಶಕರು ಸದಸ್ಯರು ಕಾರ್ಮಿಕರು ಹಾಜರಿದ್ದರು ಪ್ರಧಾನ ವ್ಯವಸ್ಥಾಪಕರಾದ ದೇವೇಂದ್ರ ಕರೋಶಿ ಪ್ರಾಸ್ತಾವಿಕ ಸ್ವಾಗತಿಸಿ ಸುನಂದಾ ಮಗದುಮ್ ನಿರೂಪಿಸಿ ವಂದಿಸಿದರು.

ಈ ವೇಳೆ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಡಾ ಪ್ರಭಾಕರ್ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ವತಿಯಿಂದ ಜಗದಿಶ ಕವಟಗಿಮಠ ಅವರನ್ನು ಸನ್ಮಾನಿಸಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button