Belagavi NewsBelgaum NewsHealthKarnataka News

*ಹೃದ್ರೋಗಿಗೆ ವಿಶ್ವದಲ್ಲಿಯೇ ಮೊದಲಬಾರಿ ಪಾಲಿಮರ ವಾಲ್ವ್ ಅಳವಡಿಕೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ KLE ವೈದ್ಯರು*

ಪ್ರಗತಿವಾಹಿನಿ ಸುದ್ದಿ: ಹೃದಯ ರೋಗದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಪರೀಕ್ಷಿಸಿದಾಗ ಆತನ ಹೃದಯದ ವಾಲ್ವ (ಕವಾಟ)ವು ಹಾಳಾಗಿರುವದು ಕಂಡುಬಂದಿತು. ಆತನಿಗೆ ಶಸ್ತ್ರಚಿಕಿತ್ಸೆ ಮೂಲಕ ಅಮೇರಿಕ ಮೂಲದ ಫೊಲ್ಡಾಕ್ಸ ಕಂಪಣಿಯು ಅಭಿವೃದ್ದಿಪಡಿಸಿದ, ಭಾರತದ ಡಾಲ್ಪಿನ್ ಲೈಫ್ ಸೈನ್ಸ್ ತಯಾರಿಸಿದ ಅತ್ಯಾಧುನಿಕ ತಂತ್ರಜ್ಞಾನದ ಪಾಲಿಮರ ಹೃದಯ ಮೈಟ್ರಲ್ ವಾಲ್ವ( ಕವಾಟ)ವನ್ನು ಅಳವಡಿಸುವಲ್ಲಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದಯ ಶಸ್ತ್ರಚಿಕಿತ್ಸಾ (ಕಾರ್ಡಿಯೋ ವೆಸ್ಕ್ಯುಯಲರ ಥೊರಾಸಿಕ್ ಸರ್ಜರಿ) ವಿಭಾಗದ ಹಿರಿಯ ತಜ್ಞವೈದ್ಯರಾದ ಡಾ. ಮೋಹನ ಗಾನ ಅವರು ಯಶಸ್ವಿಯಾಗಿದ್ದಾರೆ.


ಪಾಲಿಮರನಿಂದ ತಯಾರಿಸಿದ ಮೈಟ್ರಲ್ ವಾಲ್ವ್ ಅನ್ನು ವಾಣಿಜ್ಯ ಬಳಕೆಗೆ ಪ್ರಥಮವಾಗಿ ಬಿಡುಗಡೆಗೊಳಿಸಿದ್ದು, ವಿಶ್ವದಲ್ಲಿಯೇ ಪ್ರಥಮವಾಗಿ ಪಾಲಿಮರ ವಾಲ್ವ್ ಅನ್ನು ರೋಗಿಗೆ ಅಳವಡಿಸುವಲ್ಲಿ ಯಶಸ್ವಿಯಾಗಿದೆ. ಈ ವಿಧಾನವು ಈ ಭಾಗದ ರೋಗಿಗಳಿಗೆ ವರದಾನವಾಗಿದ್ದು, ಮುಂದಿನ ಪೀಳಿಗೆಗೆ ಬದಲಿ ಆಯ್ಕೆಗಳ ಅವಕಾಶವನ್ನು ತೆರೆದಿದೆ. ಪಾಲಿಮರನಿಂದ ತಯಾರಿಸಿದ ಈ ವಾಲ್ವ ಸುಧಾರಿತವಾಗಿದ್ದು, ದೀರ್ಘಕಾಲಿನ ಬಾಳಿಕೆ ಬರುತ್ತದೆ. ಮುಖ್ಯವಾಗಿ ರ್ಯುಮ್ಯಾಟಿಕ್ ಹೃದಯ ಖಾಯಿಲೆಯಿಂದ ಬಳಲುತ್ತಿರುವವರಿಗೆ ಇದು ವರದಾನವಾಗಲಿದ್ದು, ಕೈಗೆಟಕುವ ದರದಲ್ಲಿ ಲಭ್ಯವಿರಲಿದೆ.


ಈ ಸಂಶೋಧನೆಯಿಂದ ಕವಾಟ ಬದಲಿ ಮಾಡಿದಾಗ, ರಕ್ತವನ್ನು ತೆಳುಗೊಳಿಸುವ ಔಷಧಿಯನ್ನು ಜೀವಿತಾವಧಿಯವರೆಗೆ ತೆಗೆದುಕೊಳ್ಳುವ ಅವಶ್ಯಕತೆ ಇರುವದಿಲ್ಲ. ಈ ಸಂಶೋಧನೆಯಲ್ಲಿ ಹೃದಯ ಶಸ್ತ್ರಚಿಕಿತ್ತ್ಸಾ ವಿಭಾಗದ ತಜ್ಞವೈದ್ಯರು ಭಾಗವಹಿಸಿದ್ದು, ಕವಾಟವನ್ನು ಅಳವಡಿಸಲು ಇನ್ನಿತರ ಹೃದಯ ಶಸ್ತ್ರಚಿಕಿತ್ತ್ಸಕರಿಗೆ ತರಬೇತಿ ನೀಡಬಹುದು.

Home add -Advt


ಫೋಲ್ಡ್ಯಾಕ್ಸ್ನ ಕಾರ್ಯನಿರ್ವಾಹಕ ಅಧ್ಯಕ್ಷ ಕೆನ್ ಚಾರ್ಹಟ್ ಅವರು, “ಭಾರತವು ಹೃದಯರಕ್ತನಾಳದ ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿದ್ದು, ಈ ಸಂಶೋಧನೆಯ ಪರಿಣಾಮವನ್ನು ರೋಗಿಗಳಿಗೆ ತಲುಪಿಸಲು ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದೊAದಿಗೆ ಪಾಲುದಾರಾಗಿದ್ದೇವೆ. ಈ ಭಾಗದಲ್ಲಿ ಈ ಪಾಲಿಮರ ವಾಲ್ವ್ (ಕವಾಟ) ಬದಲಾಯಿಸಿದ ಪ್ರಥಮ ಆಸ್ಪತ್ರೆ ಇದಾಗಿದ್ದು, ಮುಂಬರುವ ದಿನಗಳಲ್ಲಿ ರೋಗಿಗಳಿಗೆ ಇದು ವರದಾನವಾಗಲಿದೆ ಎಂದು ಹೇಳಿದ್ದಾರೆ.


ಶಸ್ತ್ರಚಿಕಿತ್ಸೆ ನಡೆಸಿ ವಾಲ್ವ (ಕವಾಟ) ಬದಲಾಯಿಸುವಲ್ಲಿ ಯಶಸ್ವಿಯಾಗಿರುವ ಹಿರಿಯ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ಮೋಹನ ಗಾನ ಅವರಿಗೆ ಡಾ. ದರ್ಶನ್ ಡಿ.ಎಸ್., ಡಾ. ಗಣಂಜಯ್ ಸಾಳ್ವೆ, ಡಾ. ಅಭಿಷೇಕ್ ಪ್ರಭು, ಡಾ. ಪಾರ್ಶ್ವನಾಥ್ ಪಾಟೀಲ್ ಮತ್ತು ಡಾ. ರಣಜಿತ್ ನಾಯಕ್, ಅರವಳಿಕೆ ತಜ್ಞವೈದ್ಯರಾದ ಡಾ. ಶರಣಗೌಡ ಪಾಟೀಲ್, ಹಿರಿಯ ಹೃದ್ರೋಗ ತಜ್ಞವೈದ್ಯರಾದ ಡಾ. ಸುರೇಶ ಪಟ್ಟೇದ, ಡಾ. ಸಂಜಯ್ ಪೋರವಾಲ ಸೇರಿದಂತೆ ಹೃದ್ರೋಗ ವಿಭಾಗದ ಸಂಪೂರ್ಣ ತಜ್ಞವೈದ್ಯರು ಸಹಕಾರ ನೀಡಿದರು.


ಯಶಸ್ವಿ ಶಸ್ತçಚಿಕಿತ್ಸೆ ನೆರವೇರಿಸಿದ ಹೃದಯ ಶಸ್ತçಚಿಕಿತ್ಸಾ ವಿಭಾಗದ ತಜ್ಞವೈದ್ಯರಾದ ಡಾ. ಮೋಹನ ಗಾನ ಹಾಗೂ ಅವರ ತಂಡವನ್ನು ಕೆಎಲ್ಇ ಸಂಸ್ಥೆಯ ಕರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು ಅಭಿನಂದಿಸಿದ್ದಾರೆ.

KLES Dr. Prabhakar Kore Hospital Marks Milestone with First Commercial Implant of Polymer-Based TRIA™ Mitral Valve

KLES Hospital & Medical Research Centre, in collaboration with distinguished cardiac surgeon Dr. Mohan D. Gan, has successfully performed the hospital’s first commercial implant of the TRIA™ Mitral Valve — the world’s first approved polymer heart valve, developed by U.S.-based Foldax® and manufactured in India by Dolphin Life Science LLP. This landmark procedure brings next-generation valve replacement options to patients in Belagavi, promising improved durability and reduced patient burden, especially for those affected by rheumatic heart disease.
“This innovation represents a new era in heart valve replacement — one where patients may receive a longer-lasting solution without the lifelong need for blood thinners,” said Dr. Mohan D. Gan, HOD, CVTS JNMC Medical College, and Senior Cardiothoracic Surgeon at KLES Hospital.
The team of CVTS department, was an early participant in the clinical trial program, certified through the Foldax Evolve™ Training & Certification Program and he is authorized to implant the valve in commercial practice as well as mentor other surgeons.
Ken Charhut, Executive Chairman of Foldax, added: “India continues to lead in cardiovascular innovation. We are proud to partner with KLES Hospital and the visionary surgeons in the department of Cardiac Surgery to bring this breakthrough to patients.”
This successful implantation was made possible by the dedicated efforts of the entire Cardiac Surgery Team, including Dr. Darshan D.S., Dr. Gananjay Salve, Dr. Abhishek Prabhu, Dr. Parishwanath Patil, and Dr. Ranajit Naik, with anaesthesia support from Dr.
Sharanagouda Patil, Head of Cardiac Anaesthesia and his team.
During the period of trial, the evaluation of the patients and support was given by Senior Cardiologist Dr. Sanjay Porwal, Dr. Suresh Patted and entire team of Department of Cardiology.
Dr. Prabhakar Kore, Chairman of the KLE Society, and Rtd. Col. Dr. Dayanand, Medical Director of Dr. Prabhakar Kore Hospital, congratulated Dr. Mohan Gan and the team on this remarkable achievement.
About KLES Dr. Prabhakar Kore Hospital & Medical Research Centre
KLES Hospital & Medical Research Centre is a 2000-bed, state-of-the-art facility founded under the vision of Dr. Prabhakar Kore. The hospital combines advanced infrastructure with compassionate care, offering services across specialties and super specialties, including 30 operating theatres and over 300 consultants.

Related Articles

Back to top button