Kannada NewsLatest

 ಕೆಎಲ್‍ಎಸ್ ಸಂಸ್ಥೆಯಿಂದ ಆರ್ ಸಿಯು ಕುಲಪತಿ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 
 ತಮ್ಮ ಆಡಳಿತಾವಧಿಯಲ್ಲಿ ರಾಣಿ  ಚನ್ನಮ್ಮ ವಿಶ್ವವಿದ್ಯಾಲಯದ ಬೆಳವಣಿಗೆಗೆ   ನೀಡಿದ ಕೊಡುಗೆಗಾಗಿ ಕರ್ನಾಟಕ ಕಾನೂನು ಸಂಸ್ಥೆಯ ಅಧ್ಯಕ್ಷ  ಎಂ.ಆರ್. ಕುಲಕರ್ಣಿ ಅವರು  ಪ್ರೊ. ಎಸ್.ಬಿ. ಹೊಸಮನಿ ಅವರನ್ನು ಸನ್ಮಾನಿಸಿದರು.
ಈ ವೇಳೆ ಕಾರ್ಯದರ್ಶಿ  ಪ್ರಕಾಶ ಬಡಕುಂದ್ರಿ, ಗೋಗಟೆ ವಾಣಿಜ್ಯ ಮಹಾವಿದ್ಯಾಲಯ ಆಡಳಿತ ಮಂಡಳಿಯ ಚೇರಮನ್‍  ವಿ.ಎಂ. ದೇಶಪಾಂಡೆ ಹಾಗೂ ಕೆಎಲ್‍ಎಸ್ ಐಎಂಇಆರ್ ಚೇರಮನ್   ರಾಜೇಂದ್ರ ಬೆಳಗಾವಕರ ಇದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹೊಸಮನಿ, ತಮ್ಮ ಆಡಳಿತಾವಧಿಯಲ್ಲಿ ವಿಶ್ವವಿದ್ಯಾಲಯದ ಬೆಳವಣಿಗೆಗಾಗಿ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಈ ಭಾಗದ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ ಕೆಎಲ್‍ಎಸ್ ಸಂಸ್ಥೆ ನೀಡಿದ ಸಹಕಾರ ಸ್ಮರಿಸಿದರು. ಜೊತೆಗೆ ಕೆಎಲ್‍ಎಸ್ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಬೆಳಗಾವಿಯ ಬ್ರ್ಯಾಂಡ್ ಅಂಬ್ಯಾಸಿಡರ್ ಗಳಾಗಿ ಹೊರಹೊಮ್ಮುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
 ಎಂ.ಆರ್. ಕುಲಕರ್ಣಿ ಮಾತನಾಡಿ, ಕೆಎಲ್‍ಎಸ್ ಸಂಸ್ಥೆಗೆ  ಕುಲಪತಿಗಳ ಸಹಕಾರ ಹಾಗೂ ಬೆಂಬಲವನ್ನು ಸ್ಮರಿಸಿದರು. ಅಲ್ಲದೇ ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.
ಕೆಎಲ್‍ಎಸ್ ಐಎಂಇಆರ್ ನಿರ್ದೇಶಕ ಡಾ. ಅತುಲ್ ದೇಶಪಾಂಡೆ  ಸ್ವಾಗತಿಸಿ , ಕೆಎಲ್‍ಎಸ್ ಸಂಸ್ಥೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ, ಸನ್ಮಾನಿಸಲು ಹೆಮ್ಮೆ ಪಡುತ್ತದೆ ಎಂದರು. ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ ಎಚ್.ಎಚ್. ವೀರಾಪುರ ವಂದಿಸಿದರು.
 ಸರೋಜಿನಿ ಹೊಸಮನಿ, ಕೆಎಲ್‍ಎಸ್ ಆಡಳಿತ ಮಂಡಳಿ ಸದಸ್ಯರು, ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ಉಪಸ್ಥಿತರಿದ್ದರು. ಪ್ರೊ. ಅಜಯ ಜಮನಾನಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button