ಕೆಎಲ್ಎಸ್ ಜಿಐಟಿ -ಡಸಾಲ್ಟ್ ಸಿಸ್ಟಮ್ಸ್ ಸೆಂಟರ್ ಆಫ್ ಎಕ್ಸಲೆನ್ಸ್ ಒಡಂಬಡಿಕೆ ಪತ್ರಕ್ಕೆ ಸಹಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೆಎಲ್‌ಎಸ್ ಗೊಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬೆಳಗಾವಿಯಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನೆ ಮತ್ತು ಒಡಂಬಡಿಕೆ ಪತ್ರಕ್ಕೆ ಸಹಿ ಸಮಾರಂಭ 15 ನೇ ಸೆಪ್ಟೆಂಬರ್, 2023 ರಂದು ನಡೆಯಿತು.
ಡಸಾಲ್ಟ್ ಸಿಸ್ಟಮ್ಸ್ ಪ್ರೈ. ಲಿಮಿಟೆಡ್ನ , ತನುಜ್ ಮಿತ್ತಲ್, ಹಿರಿಯ ನಿರ್ದೇಶಕರು: ಮಾರಾಟ, ಗ್ರಾಹಕ ಪ್ರಕ್ರಿಯೆ ಮತ್ತು ಅನಂತ್ ಮಂಡಗಿ, ಅಧ್ಯಕ್ಷರು, ಕರ್ನಾಟಕ ಲಾ ಸೊಸೈಟಿ, ಬೆಳಗಾವಿ ಅವರು ಉದ್ಘಾಟಿಸಿದರು.
ರಾಜೀವ್ ಅರಮಡ್ಕ, ಭಾರತ ಸಾರ್ವಜನಿಕ ಸೇವೆಗಳ ಮಾರಾಟ ನಿರ್ದೇಶಕ, ಡಸಾಲ್ಟ್ ಸಿಸ್ಟಮ್ಸ್ ಇಂಡಿಯಾ ಪ್ರೈ. ಲಿಮಿಟೆಡ್. ಕೆಎಲ್‌ಎಸ್ ಛೇರ್ಮನ್, ಪ್ರದೀಪ್ ಸಾವ್ಕರ್ ಮತ್ತು ಕಾರ್ಯದರ್ಶಿಗಳು, ಜಿಸಿ ಛೇರ್ಮನ್ ರು; ಆಡಳಿತ ಮಂಡಳಿಯ ಸದಸ್ಯರು , ಕೆಎಲ್‌ಎಸ್ ಜಿಐಟಿ ಪ್ರಾಂಶುಪಾಲರು ; ಈ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಈ ಸೆಂಟರ್ ಆಫ್ ಎಕ್ಸಲೆನ್ಸ್, ಸಂಶೋಧನೆ ಮತ್ತು ಅಭಿವೃದ್ಧಿ, ತರಬೇತಿ ಮತ್ತು ಜ್ಞಾನ ಪ್ರಸರಣ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಈ ಕೇಂದ್ರವು ಡಸಾಲ್ಟ್ ಸಿಸ್ಟಮ್ಸ್‌ನಿಂದ ಅತ್ಯಾಧುನಿಕ ಸಾಫ್ಟ್‌ವೇರ್ ಮತ್ತು ತಂತ್ರಜ್ಞಾನವನ್ನು ಹೊಂದಿದ್ದು, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಅತ್ಯಾಧುನಿಕ ಉಪಕರಣಗಳು ಮತ್ತು ಸಂಪನ್ಮೂಲಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ. ನೈಜ-ಪ್ರಪಂಚದ ಎಂಜಿನಿಯರಿಂಗ್ ಸವಾಲುಗಳನ್ನು ಎದುರಿಸಬಹುದಾದ ನಾವೀನ್ಯತೆ ಮತ್ತು ಸಂಶೋಧನೆಯನ್ನು ಉತ್ತೇಜಿಸುತ್ತದೆ.
ತನುಜ್ ಮಿತ್ತಲ್ ಅವರು ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿ, ಕೆಎಲ್‌ಎಸ್ ಜಿಐಟಿಯು ಈ ಪ್ರದೇಶದ ಪ್ರಮುಖ ಎಂಜಿನಿಯರಿಂಗ್ ಶಿಕ್ಷಣದ ಮಹಾವಿದ್ಯಾಲಯವಾಗಿದೆ. ಇಂದಿನ ಅತ್ಯಂತ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ವಿ ವೃತ್ತಿಜೀವನಕ್ಕಾಗಿ ಭವಿಷ್ಯದ ಇಂಜಿನಿಯರಿಂಗ್ ಗಳನ್ನು ಸಿದ್ಧಪಡಿಸುವ, ಉದ್ಯಮ-ಸಂಬಂಧಿತ ಯೋಜನೆಗಳಲ್ಲಿ ವಿದ್ಯಾರ್ಥಿಗಳು ಪ್ರಾಯೋಗಿಕ ಅನುಭವ ಮತ್ತು ಪರಿಸರ ವ್ಯವಸ್ಥೆಯನ್ನು ಈ ಕೇಂದ್ರ ವು ನೀಡಲಿದೆ ಎಂದು ಅಭಿಪ್ರಾಯಪಟ್ಟರು.
ರಾಜೀವ್ ಅರಮಡ್ಕ, ಈ ಹೃದಯಭಾಗದಲ್ಲಿ ಉತ್ಕೃಷ್ಟತೆಯ ಕೇಂದ್ರದ ಸ್ಥಾಪನೆಯಾಗಿದೆ, ಇದು ಸಂಶೋಧನೆ ಮತ್ತು ಅಭಿವೃದ್ಧಿ, ತರಬೇತಿ ಮತ್ತು ಜ್ಞಾನ ಪ್ರಸರಣಕ್ಕೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಸುಸ್ಥಿರ ಎಂಜಿನಿಯರಿಂಗ್ ಅಭ್ಯಾಸಗಳನ್ನು ಉತ್ತೇಜಿಸುವ ಮತ್ತು ಹಸಿರು ಭವಿಷ್ಯಕ್ಕೆ ಕೊಡುಗೆ ನೀಡುವ ಯೋಜನೆಗಳಲ್ಲಿ ನಾವು ಸಹಕರಿಸುತ್ತೇವೆ ಎಂದು ತಿಳಿಸಿದರು.
ಕೆಎಲ್‌ಎಸ್ ಸಂಸ್ಥೆಯ ಚೇರ್ಮನ್ ರಾದ ಪಿ.ಎಸ್. ಸಾವಕಾರ, 44 ವರ್ಷಗಳಿಂದ ತಾಂತ್ರಿಕ ಜ್ಞಾನವನ್ನು ಬೆಳೆಸುವ ತನ್ನ ಪರಂಪರೆಯನ್ನು ಜಿಐಟಿ ಮುಂದುವರಿಸಿದೆ ಮತ್ತು ಅನೇಕ ಪುರಸ್ಕಾರಗಳನ್ನು ತರುವಲ್ಲಿ ಶ್ರಮಿಸಿದೆ ಎಂದು ಹೇಳಿದರು. ಕೆಎಲ್‌ಎಸ್ ಜಿಐಟಿ ಯೊಂದಿಗೆ ಪಾಲುದಾರಿಕೆಗಾಗಿ ಡಸಾಲ್ಟ್ ಸಿಸ್ಟಮ್ಸ್ ನ ಅಧಿಕಾರಿಗಳಿಗೆ ತಮ್ಮ ಸಂತೋಷ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಹಾಗೆಯೇ, ಕೆಎಲ್‌ಎಸ್ ಜಿಐಟಿ ಸತತ ಎರಡನೇ ಬಾರಿ ನ್ಯಾಕ್ ಎ+ ಮಾನ್ಯತೆಯನ್ನು ಪಡೆಯಿತು. ಸಂಸ್ಥೆಯು ಮುಂದಿನ ಹತ್ತು ವರ್ಷಗಳವರೆಗೆ ಸ್ವಾಯತ್ತತೆಯ ಸ್ಥಿತಿಯನ್ನು ವಿಸ್ತರಿಸಿದೆ. ಜಿಐಟಿ ಯು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಜೊತೆಗೆ ಖಗೋಳ ಭೌತಶಾಸ್ತ್ರದ ಕೇಂದ್ರವನ್ನು ಸ್ಥಾಪಿಸಿದ ಬಗ್ಗೆ ಪ್ರಸ್ತಾಪಿಸಿದರು.
ಜಿಐಟಿ ಈ ಎರಡು ಹಿಂದಿನ ವರ್ಷಗಳಲ್ಲಿ ಅತೀ ಹೆಚ್ಚಿನ ಕ್ಯಾಂಪಸ್ ಆಫರ್ ಗಳು ವಿದ್ಯಾರ್ಥಿಗಳಿಗೆ ದೊರಕಿದ್ದು , ಅತೀ ಹೆಚ್ಚಿನ 51 ಲಕ್ಷ ರು ಫಾಲೋ ಆಲ್ಟೊ ನೆಟ್ವರ್ಕ್ ಇಂದ ದೊರೆತಿದ್ದು , ಮಹಾವಿದ್ಯಾಲಯದ ಶೈಕ್ಷಣಿಕ ಸಾಧನೆಯ ಕೈ ಗನ್ನಡಿಯಾಗಿದೆ.
ಕರ್ನಾಟಕದ ಈ ಭಾಗಕ್ಕೆ ಸಂಶೋಧನಾ ಕೇಂದ್ರವನ್ನು ತರುವಲ್ಲಿ, ಯುವ ಸಂಶೋಧಕರಿಗೆ ಅನುಕೂಲವಾಗುವಂತೆ, ಜಿಐಟಿ ಅನೇಕ ಶ್ರೇಷ್ಠ ಕೇಂದ್ರಗಳನ್ನು ಸ್ಥಾಪಿಸಲು ಉತ್ಸುಕವಾಗಿದೆ:
- ಮಾನವರಹಿತ ವೈಮಾನಿಕ ವಾಹನ ಪ್ರಯೋಗಾಲಯದ ಸ್ಥಾಪನೆ. (UAV ಲ್ಯಾಬ್.): ಕೆಎಲ್‌ಎಸ್ ಜಿಐಟಿ ಯ ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗವು ವಿವಿಧ UAV ಗಳನ್ನು ವಿನ್ಯಾಸಗೊಳಿಸುವ, ಅನುಕರಿಸುವ, ತಯಾರಿಸುವ ಮತ್ತು ಪರೀಕ್ಷಿಸುವ ಸಾಮರ್ಥ್ಯದೊಂದಿಗೆ UAV ಲ್ಯಾಬ್ ಅನ್ನು ಸ್ಥಾಪಿಸಲು ಯೋಜಿಸುತ್ತಿದೆ.
- ಎಲೆಕ್ಟ್ರಿಕಲ್ ವೆಹಿಕಲ್ ಸೆಂಟರ್ ಆಫ್ ಕಾಂಪಿಟೆನ್ಸಿ (ಇವಿ–ಸಿಒಸಿ) ಡೆಸಿಬೆಲ್ಸ್ ಲ್ಯಾಬ್ ಪ್ರೈ.ಲಿ. ಲಿಮಿಟೆಡ್, ಬೆಂಗಳೂರು ಸಹಯೋಗದೊಂದಿಗೆ ಕೋರ್ಸ್‌ಗಳು, ಡಿಪ್ಲೊಮಾ ಕಾರ್ಯಕ್ರಮಗಳು, ಪ್ರಾಯೋಗಿಕ ಸಿಮ್ಯುಲೇಶನ್ ಮತ್ತು ಹಾರ್ಡ್‌ವೇರ್ ಲ್ಯಾಬ್‌ಗಳು ಮತ್ತು ಇ-ಲರ್ನಿಂಗ್ ವಿಷಯ ಸೇರಿದಂತೆ EV ಯಲ್ಲಿ ವ್ಯಾಪಕವಾದ ಶೈಕ್ಷಣಿಕ ಕಾರ್ಯಕ್ರಮಗಳನ್ನು ನೀಡುತ್ತದೆ. ಈ ಕೊಡುಗೆಗಳು ವಿದ್ಯಾರ್ಥಿಗಳು, ಪದವೀಧರರು, ಅಧ್ಯಾಪಕರು ಮತ್ತು ಉದ್ಯಮ ವೃತ್ತಿಪರರಿಗೆ ಹ್ಯಾಂಡ್ಸ್-ಆನ್ ತರಬೇತಿಯನ್ನು ನೀಡಲಿದೆ.
- ಸೈಬರ್ ಸೆಕ್ಯೂರಿಟಿ ಉತ್ಕೃಷ್ಟತೆಯ ಕೇಂದ್ರ : ಈ ಡಿಜಿಟಲ್ ಯುಗದಲ್ಲಿ ಸೈಬರ್ ಉಲ್ಲಂಘನೆಗಳನ್ನು ನಿಭಾಯಿಸಲು ಅಗತ್ಯವಿರುವ ಕೌಶಲ್ಯ ಮತ್ತು ಪರಿಣತಿಯನ್ನು ಪಡೆಯಲು ಸೈಬರ್ ಭದ್ರತೆಯಲ್ಲಿ ಕೆಎಲ್‌ಎಸ್ ಜಿಐಟಿ ಶ್ರೇಷ್ಠತೆಯ ಕೇಂದ್ರ ದಿಂದ ಸಾಧ್ಯವಾಗುತ್ತದೆ.
- ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್: ಕೆಎಲ್‌ಎಸ್‌ಜಿಐಟಿ AI ನಲ್ಲಿ ಉತ್ಕೃಷ್ಟತೆಯ ಕೇಂದ್ರವನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು ಈಗಾಗಲೇ ಹುಬ್ಬಳ್ಳಿಯ ಡಾಕೆಟ್ರನ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ಕೆಎಲ್‌ಎಸ್ ಜಿಐಟಿ ಸಂಶೋಧನಾ ಚಟುವಟಿಕೆಗಳಿಗಾಗಿ ವಿವಿಧ ಸರ್ಕಾರಿ ಸಂಸ್ಥೆಗಳಿಂದ ಹಣವನ್ನು ಪ್ರಾಯೋಜಕತ್ವ ಪಡೆಯಲು ಮುನ್ನುಡಿ ಇಟ್ಟಿದ್ದು , ಇನ್ಕ್ಯುಬೇಷನ್ ಸೆಂಟರ್ ಗಳನ್ನೂ ನಮ್ಮ ಈ ಕ್ಯಾಂಪಸ್ ನಲ್ಲಿ ಪ್ರೋತ್ಸಾಹಿಸಿದ್ದೇವೆ . ಕ್ರೀಡಾ ಸೌಲಭ್ಯಗಳನ್ನು ಪೂರೈಸಲು, ಜಿಐಟಿಯು ₹ 5 ಕೋಟಿ ವೆಚ್ಚದ ಕ್ರೀಡಾ ಕೇಂದ್ರದೊಂದಿಗೆ ಬರುತ್ತಿದೆ, ಈ ಸೌಲಭ್ಯವನ್ನು ಕರ್ನಾಟಕ ಲಾ ಸೊಸೈಟಿಯ ಸಿಸ್ಟರ್ ಇನ್‌ಸ್ಟಿಟ್ಯೂಟ್‌ಗಳು ಬಳಸಿಕೊಳ್ಳಬಹುದು ಎಂದು ತಿಳಿಸಿದರು.
ಸಂಯೋಜಕ ಪ್ರೊ.ಪ್ರಸನ್ನ ಡಿ ಕುಲಕರ್ಣಿ ಗಣ್ಯರನ್ನು ಸ್ವಾಗತಿಸಿದರು.
ಆಧುನಿಕ ಇಂಜಿನಿಯರಿಂಗ್ ಪಠ್ಯ ಕ್ರಮಕ್ಕೆ ಸಹಕಾರಿಯಾಗುವ, ಸಂಶೋಧನಾ ಚಟುವಟಿಕೆಗಳನ್ನು, ಕರ್ನಾಟಕದ ಈ ಭಾಗದಲ್ಲಿ ತೆರೆಯುವ ವಿಶಿಷ್ಟವಾದ ಒಂದು ಶ್ರೇಷ್ಠತೆಯ ಕೇಂದ್ರವನ್ನು ಸ್ಥಾಪಿಸುವ ಪ್ರಯತ್ನವನ್ನು ಕೆಎಲ್‌ಎಸ್ ಪದಾಧಿಕಾರಿಗಳು ಮತ್ತು ಸದಸ್ಯರು ಶ್ಲಾಘಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ