ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ಲಾ ಸೊಸೈಟಿಯ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಳಗಾವಿಯ ಸಾಂಸ್ಕೃತಿಕ ಉತ್ಸವ “ಔರಾ-2023” ಕಾರ್ಯಕ್ರಮವನ್ನು 16 ರಿಂದ 18 ಮಾರ್ಚ್ 2023 ರವರೆಗೆ “ಸಂಸ್ಕೃತಿಗಳ ಸಮಾಗಮ” ಎನ್ನುವ ಘೋಷ ವಾಕ್ಯದೊಂದಿಗೆ ಅನಾವರಣ ಗೊಳಿಸಲಾಗುವುದು.
ವಿದ್ಯಾರ್ಥಿಗಳು ಅವರ ವೈವಿಧ್ಯಮಯ ಕೌಶಲ್ಯಗಳನ್ನು ಪ್ರದರ್ಶಿಸಲು, ಇದು ಒಂದು ಉತ್ತಮವಾದ ರಾಷ್ಟೀಯ ವೇದಿಕೆಯನ್ನು ಒದಗಿಸಲಿದೆ. ಮೂರು ದಿನಗಳ ಈ ಸಾಂಸ್ಕೃತಿಕ ಸ್ಪರ್ಧಾ ಉತ್ಸವದಲ್ಲಿ ನೃತ್ಯ, ಸಾಹಿತ್ಯ, ಸಂಗೀತ, ಔರಾಸ್ ಗಾಟ್ ಟ್ಯಾಲೆಂಟ್, ಇ-ಗೇಮಿಂಗ್, ಫೈನ್ ಆರ್ಟ್ಸ್, ಡ್ರಾಮಾ, ಶೌರ್ಯ ವ್ಯೂಹ 2.0, ಫ್ಯಾಶನ್ ಶೋ, ಮಿಸ್ಟರ್ ಅಂಡ್ ಮಿಸ್ ಔರಾ, ರಸಪ್ರಶ್ನೆ, ಮತ್ತು ಇತರ 40 ಕ್ಕೂ ಹೆಚ್ಚು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ಎಂಬಿಬಿಎಸ , ಮ್ಯಾನೇಜ್ಮೆಂಟ್ , ಇಂಜಿನಿಯರಿಂಗ್ ಹಾಗೂ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಔರಾ- 2023 ಕೌಶಲ್ಯ ಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಇದರಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾದಿಂದ 75 ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಈ ಹಿಂದಿನ ಔರಾದ ಆವೃತ್ತಿಗಳಲ್ಲಿ, ಪ್ರಸಿದ್ಧ ಬಾಲಿವುಡ್ ಗಾಯಕರು ಕೆ.ಕೆ. , ಸುನಿಧಿ ಚೌಹಾನ್, ಫರ್ಹಾನ್ ಅಕ್ತರ್, ಶಂಕರ್ ಮಹಾದೇವನ್, ವಿಶಾಲ್-ಶೇಖರ್, ಅಮಿತ್ ತ್ರಿವೇದಿ, ಅರ್ಮಾನ್ ಮಲಿಕ್ ಮತ್ತು ನೀತಿ ಮೋಹನ್ ರಂತಹ ಖ್ಯಾತ ಬಾಲಿವುಡ್ನ ಹಿನ್ನೆಲೆ ಗಾಯಕರು ಲೈವ್ ಗಾಯನ ಪ್ರದರ್ಶನಗಳನ್ನು ನೀಡುವ ಮೂಲಕ ಮನರಂಜನೆ ನೀಡಿದ್ದಾರೆ.
ಕೆಎಲ್ಎಸ್ ಜಿಐಟಿ ನಡೆಸುತ್ತಿರುವ ಒಂಬತ್ತನೇ ಆವೃತ್ತಿಯ “ಔರಾ” ದಲ್ಲಿ 18 ಮಾರ್ಚ್ 2023 ರಂದು ಸಂಜೆ 6.30 ಗಂಟೆಗೆ ಕೆಎಲ್ಎಸ್ ಜಿಐಟಿ ಕಾಲೇಜು ಮೈದಾನದಲ್ಲಿ ಬಾಲಿವುಡ್ನ ಖ್ಯಾತ ಹಿನ್ನೆಲೆ ಗಾಯಕರಾದ ಬೆನ್ನಿ ದಯಾಲ್ ಈ ವರ್ಷದ ಲೈವ್ ಗಾಯನ ಪ್ರದರ್ಶನ ನೀಡಲಿದ್ದಾರೆ . ಈ ಮೂರು ದಿನಗಳ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ 5000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲು ನೋಂದಾಯಿಸಿದ್ದಾರೆ .
ಕೆಎಲ್ಎಸ್ ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಗೆ ಉತ್ತಮ-ಗುಣಮಟ್ಟದ ಶಿಕ್ಷಣವನ್ನು ನೀಡುವುದರೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹ-ಪಠ್ಯೇತರ, ಪಠ್ಯೇತರ ಚಟುವಟಿಕೆಗಳನ್ನೂ ಬೆಂಬಲಿಸುತ್ತಿದೆ.
ಈ ಔರಾ ಉತ್ಸವದ ಲೈವ್ ಗಾಯನ ಪ್ರದರ್ಶನವನ್ನು ಗೌರವಾನ್ವಿತ ಅತಿಥಿಗಳು, ಗಣ್ಯರು, ಪ್ರತಿನಿಧಿಗಳು, ಮತ್ತು ಕೆಎಲ್ಎಸ್ ಆಡಳಿತ ಮಂಡಳಿಯ ಸದಸ್ಯರು ವೀಕ್ಷಿಸಲಿದ್ದಾರೆ.
ಪ್ರಗತಿವಾಹಿನಿ ಈ ಕಾರ್ಯಕ್ರಮದ ಮೀಡಿಯಾ ಪಾರ್ಟ್ನರ್ ಆಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ