Latest

ಕೆಎಲ್ಎಸ್ ಜಿಐಟಿ ವಿದ್ಯಾರ್ಥಿಗಳ ಸಂಶೋಧನಾ ಪ್ರಬಂಧ ಬಾರ್ಕ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಆಯ್ಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಂಬಯಿಯ ಅಣುಶಕ್ತಿನಗರದಲ್ಲಿ ಭಾಬಾ ಪರಮಾಣು ಸಂಶೋಧನೆ ಕೇಂದ್ರ (ಬಾರ್ಕ್) ವತಿಯಿಂದ ಆಯೋಜಿಸಿದ್ದ ಎಲೆಕ್ಟ್ರೋ ಕೆಮಿಸ್ಟ್ರಿಯ ಅಂತಾರಾಷ್ಟ್ರೀಯ ಸಮ್ಮೇಳನ, 2023ರಲ್ಲಿ ಇಲ್ಲಿನ ಕೆಎಲ್ಎಸ್ ಜಿಐಟಿ ವಿದ್ಯಾರ್ಥಿಗಳ ಸಂಶೋಧನಾ ಪ್ರಬಂಧ ಆಯ್ಕೆಯಾಗಿದೆ.

ಕೈಗಾರಿಕೆ, ಆರೋಗ್ಯ ಮತ್ತು ಪರಿಸರಕ್ಕಾಗಿ  ವಿಶ್ಲೇಷಣಾತ್ಮಕ ರಸಾಯನ ಶಾಸ್ತ್ರ ವಿಭಾಗ,  ಇಂಡಿಯನ್ ಸೊಸೈಟಿ ಫಾರ್ ಎಲೆಕ್ಟ್ರೋ ಅನಾಲಿಟಿಕಲ್ ಕೆಮಿಸ್ಟ್ರಿಆಶ್ರಯದಲ್ಲಿಡಿ ಎ ಇ ಕನ್ವೆನ್ಷನ್ ಸೆಂಟರ್ ನಲ್ಲಿ ಫೆಬ್ರವರಿ 7 ರಿಂದ 11ರವರೆಗೆ   ಸಮ್ಮೇಳನ ನಡೆಯಿತು.

ಜಿಐಟಿಯ ನ್ಯಾನೋ-ಕ್ಲಬ್‌ನ 5 ನೇ ಸೆಮಿಸ್ಟರ್ ನ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗದ ಬಿಇ ವಿದ್ಯಾರ್ಥಿಗಳಾದ   ಹೃಷಿಕೇಶ, ಜೆ.ಮೋಹನ್, ಸೌರಭ ಜೋಶಿ, ಸಂಚಿ ಭಸ್ಮೆ, ಮಧುಮಿತಾ ವಿ.ಗೌಡರ್ ಮತ್ತು ಮೃಣಾಲಿನಿ ಕುಲಕರ್ಣಿ ಅವರು ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ನ್ಯಾನೋ ಸೆಂಟರ್ ಸಂಯೋಜಕ ಡಾ. ರವಿರಾಜ್ಎಂ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ “ಮಾಡಿಫೈಡ್ ಸೆನ್ಸರ್ಸ್ ಫಾರ್ ಎಲೆಕ್ಟ್ರೋಡ್ ಅಪ್ಲಿಕೇಶನ್ಸ್’ ಕುರಿತು ಸಲ್ಲಿಸಿದ ಆರು ವೈಜ್ಞಾನಿಕ  ಸಂಶೋಧನಾ  ಪ್ರಬಂಧಗಳು ಸಮ್ಮೇಳನದಲ್ಲಿ ಆಯ್ಕೆಯಾದವು.

ಬಾರ್ಕ್, ಐಐಟಿ, ಎನ್ಐಟಿ, ರಾಷ್ಟೀಯ ವಿಶ್ವವಿದ್ಯಾನಿಲಯಗಳು, ಪೋರ್ಚುಗಲ್, ದಕ್ಷಿಣಕೊರಿಯಾ, ದಕ್ಷಿಣ ಆಫ್ರಿಕಾ ಮತ್ತು ಯುನೈಟೆಡ್ ಕಿಂಗ್‌ಡಮ್‌ನಿಂದ ಸುಮಾರು 400 ಪ್ರಭಂದಗಳನ್ನು ಪ್ರಸ್ತುತಪಡಿಸಿದರು.

ಕೆಎಲ್‌ಎಸ್ ಜಿಐಟಿಯ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಜ್ಞಾನಿಗಳೊಂದಿಗೆ ಸಂವಹನ ನಡೆಸಲು ಇದು ಅತ್ಯುತ್ತಮ ಅವಕಾಶ ನೀಡಿತು.

ಪ್ರಾಚಾರ್ಯ ಡಾ.ಜಯಂತ ಕೆ. ಕಿತ್ತೂರು, ಜಿಐಟಿ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ, ಮತ್ತು ಕೆಎಲ್‌ಎಸ್ ಆಡಳಿತ ಮಂಡಳಿ ಸದಸ್ಯರು ಈ ಸಾಧನೆ ಮಾಡಿದ  ವಿದ್ಯಾರ್ಥಿಗಳು ಮತ್ತು ಪ್ರೊ.ರವಿರಾಜ್ಎಂ.ಕುಲಕರ್ಣಿ ಅವರನ್ನುಅಭಿನಂದಿಸಿದ್ದಾರೆ.

ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ: ಅಪಾರ ಹಾನಿ

https://pragati.taskdun.com/cylinder-explosion-in-shop-immense-damage/

*ಕಲುಷಿತ ನೀರು ದುರಂತ; ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡು ತನಿಖೆಗೆ ಆದೇಶಿಸಿದ ಲೋಕಾಯುಕ್ತ*

https://pragati.taskdun.com/yadagiricontaminated-waterthree-deathslokayukta/

*ಕಾಡ್ಗಿಚ್ಚು ನಂದಿಸಲು ಹೋಗಿ ಗಾಯಗೊಂಡಿದ್ದ ಫಾರೆಸ್ಟ್ ಗಾರ್ಡ್ ಸಾವು*

https://pragati.taskdun.com/hasanasakaleshapurawildfireforest-guard-death/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button