Belagavi NewsBelgaum NewsKannada NewsKarnataka NewsLatest

*ಕೆಎಲ್‌ಎಸ್ ಜಿಐಟಿಯಲ್ಲಿ ಗಾನ ಸುಧೆ ಹರಿಸಿದ ಪದ್ಮಶ್ರೀ ಪಂಡಿತ ವೆಂಕಟೇಶ್ ಕುಮಾರ್*

ಪ್ರಗತಿವಾಹಿನಿ ಸುದ್ದಿ: ಕೆಎಲ್‌ಎಸ್ ಜಿಐಟಿ, ಬೆಳಗಾವಿ ಮತ್ತು ಮುರ್ಕುಂಬಿ ಇತಿಹಾಸ ಉಪಕ್ರಮ ಹಾಗೂ ಬನಯನ್ ಟ್ರೀ ಇವರ ಸಹಯೋಗದೊಂದಿಗೆ, 07 ಏಪ್ರಿಲ್ 2024 ರಂದು, ಜಿಐಟಿಯ ಸಿಲ್ವರ್ ಜುಬಿಲಿ ಸಭಾಂಗಣದಲ್ಲಿ, ಪದ್ಮಶ್ರೀ ಡಾ. ಎಂ.ವೆಂಕಟೇಶ್ ಕುಮಾರ್ ಅವರಿಂದ ಶಾಸ್ತ್ರೀಯ ಗಾಯನ ಕಾರ್ಯಕ್ರಮವನ್ನು ಆಯೋಜಿಸಿತ್ತು.


ವಿದ್ಯಾ ಮುರುಕುಂಬಿ, ಶ್ರೀ ರಾಮ್ ಭಂಢಾರಿ, ಬಾನ್ಯನ್ ಟ್ರೀ ಪ್ರಮುಖರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಡಾ. ಎಂ. ವೆಂಕಟೇಶ್ ಕುಮಾರ್ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ “ಕೈಸೆ ನಿಂದ್ ನಾ ಆವೆ”, ಪಾಯೋಜಿ ಮೈನೆ ರಾಮ್ ಲಖನ್ ಧನ್ ಪಾಯೋ, “ಭೀಹರ್, ಮಂದಾರ ಮುಂತಾದ ಶಾಸ್ತ್ರೀಯ ರಾಗ, ವಚನಗಳು ಮತ್ತು ದೇವರನಾಮಗಳನ್ನು ಹಾಡಿ ಪ್ರೇಕ್ಷಕರನ್ನು ರಾಗದಲ್ಲಿ ತೇಲಿಸಿದರು.ಅವರಿಗೆ ತಬಲಾದಲ್ಲಿ ಪ್ರತಿಭಾವಂತ ಕಲಾವಿದ ಶ್ರೀಧರ ಮಾಂಡ್ರೆ, ಹಾರ್ಮೋನಿಯಂನಲ್ಲಿ ಸಾರಂಗ್ ಕುಲಕರ್ಣಿ ಜೊತೆಗೂಡಿದರು.
ಹೆಸರಾಂತ ಕಲಾವಿದ ಪಂಡಿತ್ ರವಿ ಚಾರಿಯವರ ಸಿತಾರ ವಾದನದಲ್ಲಿ ವಿವಿಧ ರಾಗ ಗಳನ್ನು ನುಡಿಸಿ ಪ್ರೇಕ್ಷಕರ ಮನ ಸೆಳೆದರು. ಇವರಿಗೆ ತಬಲಾದಲ್ಲಿ ಶ್ರೀರಾಜ್ ತಾಮನ್ಕರ್ ಜೊತೆ ನೀಡಿದರು .


ಜಿಐಟಿ ಚೇರಮನ್ ರಾದ ಶ್ರೀ ರಾಜೇಂದ್ರ ಬೆಳಗಾಂವ್ಕರ್ ಸ್ವಾಗತಿಸಿ, ಕಲಾವಿದರನ್ನು ಸನ್ಮಾನಿಸಿದರು. ಕೆಎಲ್‌ಎಸ್ ಆಡಳಿತ ಮಂಡಳಿ ಸದಸ್ಯರು ಹಾಗೂ ಪರಿವಾರದವರು , ಮಹಾವಿದ್ಯಾಲಯದ ಅಧ್ಯಾಪಕರು , ವಿದ್ಯಾರ್ಥಿಗಳು, ಸುಮಾರು 400 ಕ್ಕೂ ಹೆಚ್ಚು ಸಂಗೀತ ಪ್ರೇಮಿಗಳು ಉಪಸ್ಥಿತರಿದ್ದರು.

Related Articles

Back to top button