Latest

ಮರ್ಮಾಂಗಕ್ಕೆ ಗುದ್ದಿ ಅಣ್ಣನ ಮಗನನ್ನೇ ಕೊಂದ ಹಂತಕರು

ಪ್ರಗತಿವಾಹಿನಿ ಸುದ್ದಿ; ಮಡಿಕೇರಿ: ಮುಕ್ಕಾಲು ಎಕರೆ ಕಾಫಿ ತೋಟಕ್ಕಾಗಿ ಅಣ್ಣನ ಮಗ ವಿಕಾಲಂಗನನ್ನು ಹತ್ಯೆಗೈದು, ಸಹಜಸಾವೆಂದು ಬಿಂಬಿಸಿದ್ದ ಮೂವರು ಹಂತಕರನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ.

ವಿರಾಜಪೇಟೆಯ ತಾಲೂಕಿನ ಕಳತ್ಮಾಡು ಗ್ರಾಮದಲ್ಲಿ ವಿಕಲಚೇತನ ಉದಯ್ ಕುಮಾರ್ (56) ಕೊಲೆಯಾದ ದುರ್ದೈವಿ. ಆಸ್ತಿ ಆಸೆಗಾಗಿ ಚಿಕ್ಕಪ್ಪ ಸುಂದರ, ಆತನ ಪುತ್ರ ಸಂದೀಪ್ ಹಾಗೂ ಸಂದೀಪ್ ಸ್ನೇಹಿತ ಸುಲೈಮಾನ್ ಎಂಬುವವರು ಉದಯ್ ಕುಮಾರ್ ಮರ್ಮಾಂಗಕ್ಕೆ ಗುದ್ದಿ ಹತ್ಯೆ ಮಾಡಿದ್ದರು.

ಕೊಲೆಗೂ ಮುನ್ನ ಕಂಠಪೂರ್ತಿ ಮಧ್ಯ ಕುಡಿಸಿದ್ದ ಆರೋಪಿಗಳು 50ಕ್ಕೂ ಹೆಚ್ಚು ಬಾರಿ ಮರ್ಮಾಂಗಕ್ಕೆ ಗುದ್ದಿ, ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿದ್ದರು. ಕೊಲೆ ಬಳಿಕ ಶವವನ್ನು ಮರಳಿ ಮನೆಗೆ ತಂದು ಇಟ್ಟಿದ್ದರು. ಬಳಿಕ ಮರುದಿನ ಸಹಜ ಸಾವೆಂದು ಬಿಂಬಿಸಿ ಅಂತ್ಯಸಂಸ್ಕಾರ ಮಾಡುವ ನಾಟಕಮಾಡಿದ್ದರು.

ಆದರೆ ಮರ್ಮಾಂಗದಲ್ಲಿ ರಕ್ತ ಸೋರಿಕೆ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಅನುಮಾನ ಮೂಡಿತ್ತು. ಇದೇ ಕಾರಣಕ್ಕೆ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಪ್ರಾಥಮಿಕ ತನಿಖೆಯಲ್ಲಿ ಕೊಲೆ ಪ್ರಕರಣ ಬಯಲಾಗಿತ್ತು. ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಅಣ್ಣನ ಮಗನನ್ನೇ ಹತ್ಯೆ ಮಾಡಿರುವುದು ಗೊತ್ತಾಗಿದೆ. ಇದೀಗ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Home add -Advt

 ಮಲ್ಲೇಶಿ ಆರ್. ಬಾಳೋಜಿ ನಿಧನ

Related Articles

Back to top button