*ಪರೀಕ್ಷೆ ನಡೆಯುತ್ತಿದ್ದರೂ ಅವಧಿಗೂ ಮೊದಲೇ ಶಾಲೆಗೆ ಬೀಗ; ಶಿಕ್ಷಕರಿಗೆ ನೋಟೀಸ್ ಜಾರಿ*
ಪ್ರಗತಿವಾಹಿನಿ ಸುದ್ದಿ: ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಕೊಡಲ ಹಂಗರಗಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದಾಗ ಮಧ್ಯಾಹ್ನ ಶಾಲೆಗೆ ಬೀಗ ಹಾಕಿರುವುದನ್ನು ಕಂಡು ಅಧಿಕಾರಿಗಳಗೇ ದಂಗಾದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಕಾರಣ ಕೇಳಿ ಶಿಕ್ಷಕರಿಗೆ ನೋಟೀಸ್ ಜಾರಿ ಮಾಡಲಾಗಿದೆ.
ಮುಖ್ಯ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಕಲಬುರಗಿ ರವರು ಚುನಾವಣಾ ಕಾರ್ಯದ ನಿಮಿತ್ಯ ದಿನಾಂಕ : 26.03.2024 ರಂದು ಸಮಯ ಮಧ್ಯಾಹ್ನ 2 : 45 ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ & ಸರಕಾರಿ ಪ್ರೌಢ ಶಾಲೆ ಕೊಡಲ ಹಂಗರಗಾ ತಾ। ಆಳಂದ ಜಿ ಕಲಬುರಗಿ ಶಾಲೆಯ ಮತಗಟ್ಟೆಗೆ ಬೇಟಿ ನೀಡಿದಾಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ & ಸರಕಾರಿ ಪ್ರೌಢ ಶಾಲೆ ಕೊಡಲ ಹಂಗರಗಾ ಈ ಎರಡು ಶಾಲೆಗೆ ಮಧ್ಯಾಹ್ನವೆ ಬೀಗ ಹಾಕಲಾಗಿತ್ತು.
ದಿನಾಂಕ 26.03.2024ರಂದು 5 ನೇ ಮತ್ತು 8 ನೇ ತರಗತಿ ಬೋರ್ಡ್ ಪರೀಕ್ಷೆಗಳು ನಡೆಯುತ್ತಿದ್ದು ಹಾಗೂ 9 ನೇ ತರಗತಿಯ ಬೋರ್ಡ್ ಪರೀಕ್ಷೆಗಳು ನಡೆಯುತ್ತಿದ್ದು ಶಾಲೆಯ ಸಮಯದ ಅವಧಿ ಮಧ್ಯಾಹ್ನ 4 : 30 ರ ವರೆಗೆ ಇದ್ದು ಆದಾಗ್ಯೂ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಚುನಾವಣಾ ಕಾರ್ಯದ ನಿಮಿತ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ & ಸರಕಾರಿ ಪ್ರೌಢ ಶಾಲೆ ಕೊಡಲ ಹಂಗರಗಾ ಶಾಲೆಯ ಮತಗಟ್ಟೆಗೆ ಬೇಟಿ ನೀಡಿದಾಗ ಶಾಲೆಗೆ ಬೀಗ ಹಾಕಿ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಮೇಲಾಧಿಕಾರಿಗಳು ಮುಜುಗರಕ್ಕೆ ಒಳಗಾಗುವಂತಾಗಿದೆ. ಈ ಕರ್ತವ್ಯಲೋಪ ಬೇಜವಾಬ್ದಾರಿಯ ಬಗ್ಗೆ ಪತ್ರ ಮುಟ್ಟಿದ 12 ಗಂಟೆಯೋಳಗೆ ಸೂಕ್ತ ದಾಖಲಾತಿಗಳೊಂದಿಗೆ ಉತ್ತರ ಸಲ್ಲಿಸಲು ತಿಳಿಸಲಾಗಿದೆ.
ಒಂದು ವೇಳೆ ಉತ್ತರ ಸಲ್ಲಿಸದೆ ಇದ್ದಲ್ಲಿ ಹೇಳುವುದು ಏನು ಇಲ್ಲವೆಂದು ತಿಳಿದು ನಿಯಮಾನುಸಾರ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತಿದೆ ಎಂದು ಶಿಕ್ಷಕರಿಗೆ ನೋಟಿಸ್ ನಲ್ಲಿ ಸೂಚಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ