Latest

ಕೋಡಿ ಶ್ರೀಗಳು ಹೇಳಿದ ಸ್ಪೋಟಕ ಭವಿಷ್ಯವೇನು ?

ಪ್ರಗತಿ ವಾಹಿನಿ ಸುದ್ದಿ, ಹಾಸನ:  ಕೋಡಿ ಮಠದ ಶ್ರೀಗಳ ಭವಿಷ್ಯ ರಾಜ್ಯದ ಜನರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತದೆ. ಅವರ ಭವಿಷ್ಯ ಎಂದೂ ಸುಳ್ಳಾಗುವುದಿಲ್ಲ ಎನ್ನುವ ನಂಬಿಕೆಯೂ ಬಹಳಷ್ಟು ಜನರಲ್ಲಿದೆ. 
ಇದೀಗ ಕೋಡಿಮಠದ ಶ್ರೀಗಳು ಭಯಾನಕ ಭವಿಷ್ಯವೊಂದನ್ನು ನುಡಿದಿದ್ದಾರೆ.
  ವಿಶ್ವಕ್ಕೆ ಇನ್ನು ಮೂರೇ ತಿಂಗಳಲ್ಲಿ ಭಾರೀ ಕಂಟಕ ಉಂಟಾಗುವ ಸಾಧ್ಯತೆ ಇದೆ ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
  ಈ ಕಂಟಕ ಸಂಘರ್ಷಗಳ ರೂಪದಲ್ಲಿ, ಭೂ ಕಂಪ ಅಥವಾ ಪ್ರಾಕೃತಿಕ ವಿಕೋಪಗಳ ರೂಪದಲ್ಲಿ ಇರಬಹುದು. ಬಾಂಬ್ ಸ್ಪೋಟಗಳು, ಯುದ್ಧ ಸೇರಿದಂತೆ ಹಲವು ಕಂಟಕಗಳು ಎದುರಾಗಲಿವೆ ಎಂದು ಶ್ರೀಗಳು ಹೇಳಿದ್ದಾರೆ.
  ಅಲ್ಲದೆ ಭಾರತ ದೇಶಕ್ಕು ಕೆಲವು ಪ್ರತ್ಯೇಕವಾದ ಕಂಟಕಗಳು ಇವೆ ಎಂದು ಕೋಡಿ ಶ್ರೀಗಳು ಹೇಳಿದ್ದಾರೆ. ಕಂಟಕಗಳಿಂದಾಗಿ ಜನ ಸ್ವ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುತ್ತಾರೆ. ದೈಹಿಕ ಅನಾರೋಗ್ಯವೂ ಬಹಳಷ್ಟು ಜನರಿಗೆ ಉಂಟಾಗಲಿದೆ ಎಂದು ಶ್ರೀಗಳು ಹೇಳಿದ್ದಾರೆ.
https://pragati.taskdun.com/latest/ovaisyquestions-are-bsf-jawanseating-biritaniand-sleepingat-the-borders/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button