Latest

ಯುವತಿಯರನ್ನು ಚುಡಾಯಿಸಿದ ಯುಕರಿಗೆ ಬಸ್ ನಲ್ಲೇ ಹಿಗ್ಗಾ ಮುಗ್ಗಾ ಥಳಿತ

ಪ್ರಗತಿವಾಹಿನಿ ಸುದ್ದಿ; ಕೋಲಾರ: ಬಸ್ ನಲ್ಲಿ ಯುವತಿಯರನ್ನು ಚುಡಾಯಿಸುತ್ತಿದ್ದ ಯುವಕರನ್ನು ಹಿಡಿದು ಪ್ರಯಾಣಿಕರು ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ಗ್ರಾಮದ ಬಳಿ ನಡೆದಿದೆ.

ಯುವತಿಯರನ್ನು ಪೀಡಿಸುತ್ತಿದ್ದ ಯುವಕನನ್ನು ಹಿಡಿದು ಸಾರಿಗೆ ಬಸ್ ನಲ್ಲೇ ಥಳಿಸಿದ್ದಾರೆ. ಬಾಬು ಹಾಗೂ ಇನ್ನೋರ್ವ ಯುವಕ ಸದಾ ಯುವತಿಯರನ್ನು ಚುಡಾಯಿಸುತ್ತಾ, ಕಿರುಕುಳ ನೀಡುತ್ತಿದ್ದರು. ಯುವಕರಿಗೆ ತಾಡಿಗೋಳ್ ಗ್ರಾಮಸ್ಥರು ಸಾಕಷ್ಟು ಬಾರಿ ಎಚ್ಚರಿಸಿದ್ದಾರೆ. ಆದಾಗ್ಯೂ ಯುವತಿಯರ ಬೆನ್ನು ಬಿದ್ದಿದ್ದರು.

Home add -Advt

ಯುವಕರ ಕಾಟಕ್ಕೆ ಬೇಸತ್ತ ಗ್ರಾಮಸ್ಥರು ತೋಡಿಗೋಳ್ ನಿಂದ ಶ್ರೀನಿವಾಸಪುರಕ್ಕೆ ಹೋಗುತ್ತಿದ್ದ ಬಸ್ ನಲ್ಲಿ ಇದ್ದ ಯುವಕರಿಬ್ಬರನ್ನು ಹಿಡಿದು, ಧರ್ಮದೇಟು ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭರ್ತಿ ಪ್ರಕ್ರಿಯೆ ಆರಂಭ

Related Articles

Back to top button