Latest

ಪತಿ ಉಳುಮೆ ಮಾಡುತ್ತಿದ್ದಾಗ ರೋಟರ್ ಗೆ ಸಿಲುಕಿದ ಪತ್ನಿ; ತುಂಡು ತುಂಡಾದ ಮಹಿಳೆ ದೇಹ

ಪ್ರಗತಿವಾಹಿನಿ ಸುದ್ದಿ; ಕೋಲಾರ: ಉಳುಮೆ ಮಾಡುವಾಗ ಟ್ರ್ಯಾಕ್ಟರ್ ರೋಟರ್ ಗೆ ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಕೋಲಾರದ ಕಲ್ವಮಂಜಲಿ ಗ್ರಾಮದಲ್ಲಿ ನಡೆದಿದೆ.

33 ವರ್ಷದ ಸೌಮ್ಯ ಮೃತ ಮಹಿಳೆ. ತಮ್ಮದೇ ಹೊಲದಲ್ಲಿ ಪತಿ ರಾಜೇಶ್ ಉಳುಮೆ ಮಾಡುತ್ತಿದ್ದಾಗ ಈ ಭೀಕರ ಗಹ್ಟನೆ ನಡೆದಿದ್ದು, ಸೌಮ್ಯ ದೇಹ ಆಕಸ್ಮಿಕವಾಗಿ ರೋಟರ್ ಗೆ ಸಿಲುಕಿದೆ. ದೇಹ ಛಿದ್ರ ಛಿದ್ರಗೊಂಡಿದೆ.

ಕೃಷಿ ಯಂತ್ರ ಧಾರೆಯಿಂದ ಬಾಡಿಗೆ ಪಡೆದುಕೊಂಡು ರಾಜೇಶ್ ತನ್ನ ಹೊಲದಲ್ಲಿಯೇ ಸ್ವತ: ರೋಟರ್ ನಲ್ಲಿ ಉಳುಮೆ ಮಾಡುತ್ತಿದ್ದರು. ಈ ವೇಳೆ ಈ ದುರಂತ ಸಂಭವಿಸಿದೆ. ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಾಡಿಕೆಗೂ ಮೊದಲೇ ಮುಂಗಾರು ಆರಂಭ; ರಾಜ್ಯದಲ್ಲಿಯೂ ಇಂದಿನಿಂದ ಭಾರಿ ಮಳೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button