Latest

ಪ್ರೇಯಸಿಯ ಮೇಲೆ ಪ್ರಿಯಕರನ ಅನುಮಾನ; ಕೋಪದ ಬರದಲ್ಲಿ ಹತ್ಯೆ

ಪ್ರಗತಿವಾಹಿನಿ ಸುದ್ದಿ; ಕೋಲಾರ: ತಾನು ಪ್ರೀತಿಸುತ್ತಿದ್ದ ಯುವತಿ ಬೇರೊಬ್ಬನೊಂದಿಗೆ ಸಂಪರ್ಕ ಹೊಂದಿದ್ದಾಳೆ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಯುವಕ ತನ್ನ ಪ್ರೇಯಸಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಹೊಸಪಾಳ್ಯದಲ್ಲಿ ಈ ದುರ್ಘಟನೆ ನಡೆದಿದ್ದು, ಪ್ರಿಯಾಂಕಾ (19) ಮೃತ ಯುವತಿ. ಪ್ರೀಯಾಂಕಾಳನ್ನು ಆಂಧ್ರ ಮೂಲದ ರಾಜೇಶ್ ಎಂಬಾತ ಪ್ರೀತಿಸುತ್ತಿದ್ದ. ಆದರೆ ತಾನು ಪ್ರೀತಿಸಿದ ಯುವತಿಯನ್ನು ಅನುಮಾನದಿಂದ ನೋಡುತ್ತಿದ್ದ. ತನ್ನ ಯುವತಿ ಬೇರೊಬ್ಬನ ಜೊತೆ ಸಂಪರ್ಕದಲ್ಲಿದ್ದಾಳೆ ಎಂಬ ಶಂಕೆ ಮೇರೆಗೆ ಆಕೆಯನ್ನು ಹತ್ಯೆ ಮಾಡಿದ್ದಾನೆ.

Home add -Advt

ಸಧ್ಯ ಆರೋಪಿ ರಾಜೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

Related Articles

Back to top button