*ಶ್ರೀ ಸಿದ್ಧಲಿಂಗ ಮಹಾರಾಜರು ಶ್ರೀ ಯಲ್ಲಾಲಿಂಗ ಪ್ರಭು ಮಹಾರಾಜರ ಶ್ರಾವಣ ಮಾಸದ ಜಾತ್ರಾ ಮಹೋತ್ಸವ*

ಪ್ರಗತಿವಾಹಿನಿ ಸುದ್ದಿ: ರಾಯಬಾಗ ತಾಲೂಕಿನ ಸುಕ್ಷೇತ್ರ ಕೋಳಿಗುಡ್ಡ ಗ್ರಾಮದಲ್ಲಿ ಶುಕ್ರವಾರ ದಿನಾಂಕ: 15/08/2025 ರಂದು ಶ್ರೀ ಸಿದ್ಧಲಿಂಗ ಮಹಾರಾಜರು ಶ್ರೀ ಯಲ್ಲಾಲಿಂಗ ಪ್ರಭು ಮಹಾರಾಜರ ಶ್ರಾವಣ ಮಾಸದ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಡಾ. ಮುರಘರಾಜೇಂದ್ರ ಸ್ವಾಮಿಜಿ ಇವರಿಗೆ ಶ್ರೀಮಠದ ಭಕ್ತರಿಂದ ಪಾದಪೂಜೆ ನೆರವೇರಿತು.
ನಂತರ ಬಂಗಾರದ ಕಿರೀಟಧಾರಣೆ ಹಾಗೂ ಬೆಳ್ಳಿ ಪಲ್ಲಕ್ಕಿ ಉತ್ಸವ, ಗ್ರಾಮದಲ್ಲಿ ವಿವಿಧ ವಾಧ್ಯ ಮೇಳದೊಂದಿಗೆ ವಿಜೃಂಬಣೆಯಿಂದ ಜರುಗಿತು. ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಉತ್ಸವಕ್ಕೆ ಚಾಲನೆ ನೀಡಿದರು. ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠದಿಂದ ಪ್ರಾರಂಭವಾಗಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಹಾದು ಹಾರೂಗೇರಿ – ಅಥಣಿ ಮಾರ್ಗದ ರಸ್ತೆಯಿಂದ ಶ್ರೀ ಕಾಳಿಕಾಭುವನೇಶ್ವರಿ ದ್ವಾರದ ಮುಖಾಂತರವಾಗಿ ಮರಳಿ ಶ್ರೀ ಯಲ್ಲಾಲಿಂಗರ ಬೃಹನ್ಮಠಕ್ಕೆ ಆಗಮಿಸಿತು.
ಮುಗಳಖೋಡ-ಜಿಡಗಾ ಕೋಳಿಗುಡ್ಡ ಮಠದ ಪೀಠಾಧಿಪತಿಗಳಾದ ಡಾ. ಮುರಘರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ಮಾಡುವ ಮೂಲಕ ಕೋಳಿಗುಡ್ಡ ಹಾಗೂ ಸುತ್ತಮುತ್ತಲಿನ ಶ್ರೀಮಠದ ಭಕ್ತರಿಗೆ ಆಶೀರ್ವಾದ ನಿಡಿದರು. ಈ ಸಂದರ್ಭದಲ್ಲಿ ಬಸಯ್ಯಾ ಸ್ವಾಮಿಜಿ ಹಾಗೂ ಅಪ್ಪಣಗೌಡ ಪಾಟೀಲ, ಅಪ್ಪಾಸಾಬ ಗುರವ, ಹೊನ್ನಪ್ಪ ನರಗಟ್ಟಿ, ಮಲ್ಲನಗೌಡ ಪಾಟೀಲ, ರವಿಶಂಕರ ನರಗಟ್ಟಿ, ಗುರುರಾಜ ಮಠಪತಿ, ರುದ್ರಗೌಡ ಪಾಟೀಲ, ಚಂದ್ರಪ್ಪ ಬಾಗಿ, ಗ್ರಾ.ಪಂ ಅಧ್ಯಕ್ಷ ಶರಣಪ್ಪಗೌಡ ಪಾಟೀಲ, ಬಸಗೌಡ ಪಾಟೀಲ, ನಾಗಪ್ಪ ನರಗಟ್ಟಿ, ಕುಮಾರಗೌಡ ಪಾಟೀಲ ದರೂರ ಸೇರಿದಂತೆ ಸುತ್ತ ಮುತ್ತಲಿನ ಸಹಸ್ರಾರು ಭಕ್ತರು ಇದ್ದರು. ಆಗಮಿಸಿದ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನ ಕಲ್ಪಿಸಲಾಗಿತ್ತು.