Latest

ಲಾಕ್ ಡೌನ್ ಸಂಕಷ್ಟಕ್ಕೆ ಮಗುವನ್ನೇ ಮಾರಿದ ಪೋಷಕರು

ಪ್ರಗತಿವಾಹಿನಿ ಸುದ್ದಿ; ಕೋಲ್ಕತ್ತಾ: ಲಾಕ್ ಡೌನ್ ತಂದ ಸಂಕಷ್ಟದಿಂದಾಗಿ ಕೆಲಸ, ಕಳೆದುಕೊಂಡು ಮಗುವಿಗೆ ಊಟವನ್ನೂ ಕೊಡಿಸಲಾಗದೇ ಕೇವಲ ಮೂರು ಸಾವಿರ ರೂ ಗೆ ತಂದೆ-ತಾಯಿಗಳು ಮಗುವನ್ನೇ ಮಾರಾಟ ಮಾಡಿರುವ ಘಟನೆ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪೋರ್ ಜಿಲ್ಲೆಯಲ್ಲಿ ನಡೆದಿದೆ.

ಬಾಪನ್ ಧಾರಾ ಮತ್ತು ತಾಪ್ಸಿ ಮಗುವನ್ನು ಮಾರಿದ ತಂದೆ-ತಾಯಿ. ತಾಯಿ ಮನೆ ಕೆಲಸ ಮಾಡುತ್ತಿದ್ದಳು. ತಂದೆ ದೈನಂದಿನ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಕೊರೊನಾ ಲಾಕ್‍ಡೌನ್ ನಿಂದಾಗಿ ದಂಪತಿ ಕಳೆದ ಮೂರು ತಿಂಗಳಿನಿಂದ ನಿರುದ್ಯೋಗಿಗಳಾಗಿದ್ದರು. ಇದರಿಂದ ಊಟಕ್ಕೂ ಗತಿಯಿರಲಿಲ್ಲ. ಅಲ್ಲದೇ ಮಗುವಿಗೆ ಹಾಲುಣಿಸಲು ಕೂಡ ಸಾಧ್ಯವಾಗದೇ ಪರದಾಡುತ್ತಿದ್ದರು ಎಂದು ತಿಳಿದು ಬಂದಿದೆ. ಹಾಗಾಗಿ ಹೌರಾದಲ್ಲಿರುವ ದೂರದ ಸಂಬಂಧಿಕರಿಗೆ ಮಗುವನ್ನು ಮಾರಿದ್ದಾರೆ.

ತಾಪ್ಸಿ ಮನೆಯಲ್ಲಿ ಮಗುವಿನ ಅಳುವಿನ ಶಬ್ದ ಕೇಳುತ್ತಿರಲಿಲ್ಲ. ಅಲ್ಲದೇ ಮಗು ಕೂಡ ಕಾಣುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ನೆರೆಯವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ತನಿಖೆ ಮಾಡಿದಾಗ ದಂಪತಿಯ ದೂರದ ಸಂಬಂಧಿಕರ ಮನೆಯಲ್ಲಿ ಮಗುವಿರುವುದು ಪತ್ತೆಯಾಗಿದೆ. ಅವರಿಂದ ಮಗುವನ್ನು ವಶಪಡಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಮಗುವಿನ ಪೋಷಕರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸಂದೀಪ್ ಕುಮಾರ್ ಬೋಸ್ ತಿಳಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button