*ಪ್ರವಾಹದಲ್ಲಿ ಕೊಚ್ಚಿ ಹೋದರೂ ಬಚಾವ್ ಆಗಿ ಜೀವರಕ್ಷಣೆಗಾಗಿ ರಾತ್ರಿಯಿಡಿ ಮರವೇರಿ ಕುಳಿತ ವ್ಯಕ್ತಿ*
ಪ್ರಗತಿವಾಹಿನಿ ಸುದ್ದಿ; ಕೊಲ್ಲಾಪುರ: ಮಹಾರಾಷ್ಟ್ರದಾದ್ಯಂತ ಧಾರಾಕಾರ ಮಳೆಯಿಂದಾಗಿ ನದಿಗಳು ಪ್ರವಾಹದಂತೆ ಅಬ್ಬರ್ಸುತ್ತಿದ್ದು, ನದಿ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ ಪವಾಡದ ರೀತಿಯಲ್ಲಿ ಪಾರಾದ ಘಟನೆ ಕೊಲ್ಲಾಪುರ-ಸಾಂಗ್ಲಿ ಗಡಿಭಾಗದಲ್ಲಿ ನಡೆದಿದೆ.
ಕೊಲ್ಹಾಪುರ-ಸಾಂಗ್ಲಿ ಜಿಲ್ಲೆಯ ಗಡಿಭಾಗದ ಮಾಂಗ್ಲೆ-ಕಾಖೆ ಸೇತುವೆ ಬಳಿ ಗುರುವಾರ ರಾತ್ರಿ 9 ಪ್ರವಾಹದ ನೀರಿನಲ್ಲಿ ಕಾಲು ಜಾರಿ ಬಿದ್ದ ವ್ಯಕ್ತಿ ಲದೇವಾಡಿ ಗ್ರಾಮದ ಬಜರಂಗ ಖಾಮಕರ್ (58) ಪ್ರವಾದ ಮಧ್ಯೆ ಮರಕ್ಕೆ ಸಿಲುಕಿ ರಾತ್ರಿಯೆಲ್ಲ ಮರದಲ್ಲೇ ಕಾಲಕಳೆದಿದ್ದಾರೆ.
ಪ್ರವಾಹದ ನೀರಿನಲ್ಲಿ ಸುಮಾರು 700 ಮೀಟರ್ ನಷ್ಟು ಕೊಚ್ಚಿ ಹೋದ ಭಜರಂಗ, ವಾರಣಾ ನದಿಯ ಮಧ್ಯದಲ್ಲಿರುವ ಮರಕ್ಕೆ ಅಪ್ಪಳಿಸಿದ್ದರು. ಈ ವೇಳೆ ಮರದ ಕೊಂಬೆಗಳ ನ್ನು ಹಿಡಿದು ಮರವೇರಿ ಕುಳಿತು ಸಹಾಯಕ್ಕಾಗಿ ಮೊರೆ ಇಟಿದ್ದಾರೆ.
ರಾತ್ರಿ ಸಹಾಯಕ್ಕಾಗಿ ಕೂಗಿದರೂ ಯಾರೂ ಬರಲಿಲ್ಲ. ಬೆಳಗಾಗುವವರೆಗೂ ಮರದ ಕೊಂಬೆ ಮೇಲೆಯೇ ಕುಳಿತು ಜೀವಭಯದಲ್ಲೇ ಕಾಲಕಳೆದಿದ್ದಾರೆ. ಬೆಳಗ್ಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದವರನ್ನು ಕಂಡು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಈ ವೇಳೆ ಹೊಲದಲ್ಲಿರುವ ಜನರು ಕೊಲ್ಹಾಪುರ ಹಾಗೂ ಸಾಂಗ್ಲಿ ಜಿಲ್ಲಾ ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಬಳಿಕ ಎನ್‌ಡಿಆರ್‌ಎಫ್ ತಂಡ ಬೋಟ್ ಸಾಹಯದಿಂದ ಭಜರಂಗನನ್ನು ರಕ್ಷಿಸಿದೆ.
ಬಜರಂಗನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಆರೋಗ್ಯವಾಗಿರುವುದಾಗಿ ವೈದ್ಯರು ಹೇಳಿದ ಬಳಿಕ ಮನೆಗೆ ಕಳುಹಿಸಿದ್ದಾರೆ.
ಈ ಸಂದರ್ಭದಲ್ಲಿ ಶಿರಾಳಾ ತಹಸೀಲ್ದಾರ್ ಶ್ಯಾಮಲಾ ಖೋತ್ ಪಾಟೀಲ್, ಪನ್ಹಾಳಾ ತಹಸೀಲ್ದಾರ್ ಮಾಧವಿ ಶಿಂಧೆ ಜಾಧವ, ಶಿರಾಳಾ ಪೊಲೀಸ್ ನಿರೀಕ್ಷಕ ಸಿದ್ಧೇಶ್ವರ ಜಂಗಮ, ಕೋಡೋಲಿ ಪೊಲೀಸ್ ಠಾಣೆ ಪಿಎಸ್ ಐ ಶೀತಲಕುಮಾರ ದೋಯಿಜಡ ಉಪಸ್ಥಿರಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ