ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ಒಂದು ಬೈಕ್ ನಲ್ಲಿ ಇಬ್ಬರು, ಮೂವರು ಹೆಚ್ಚು ಎಂದರೆ ನಾಲ್ಕು ಜನರು ಪ್ರಾಯಣಿಸುವುದನ್ನು ನೋಡಿರಬಹುದು. ಆದರೆ ಒಂದೇ ಬೈಕ್ ನಲ್ಲಿ ಬರೋಬ್ಬರಿ 9 ಜನರು ರಾಜಾರೋಷವಾಗಿ ಹೆಲ್ಮೆಟ್ ಕೂಡ ಇಲ್ಲದೇ ಸವಾರಿ ನಡೆಸಿರುವ ಘಟನೆ ಕೊಪ್ಪಳ ಜಿಲ್ಲೆಯ ಗಿಣಿಗೇರಾ ಗ್ರಾಮದಲ್ಲಿ ನಡೆದಿದೆ.
ಗಿಣಿಗೇರಾದಿಂದ ಗಂಗಾವತಿ ಕಡೆಗೆ ತೆರಳುತ್ತಿದ್ದ ಕುಟುಂಬದ 9 ಜನರು ಒಂದೇ ಬೈಕ್ ನಲ್ಲಿ ಪ್ರಯಾಣಿಸಿದ್ದಾರೆ. 5 ಮಕ್ಕಳು, ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಒಂದೇ ಬೈಕ್ ನಲ್ಲಿ ಪ್ರಯಾಣಿಸಿದ್ದು, ಸ್ಥಳೀಯರು ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗಿದ್ದು, ಇದನ್ನು ಬೈಕ್ ಸವಾರನ ಹುಚ್ಚಾಟ ಎನ್ನಬೇಕೋ, ಬೈಕ್ ನಲ್ಲಿದ್ದ ನಾಲ್ವರು ಹಿರಿಯರ ಬೇಜವಾಬ್ದಾರಿ ಎನ್ನಬೇಕೋ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸುವುದಿಲ್ಲ: ಆಪ್ ಸಿಎಂ ಅಭ್ಯರ್ಥಿ ಘೋಷಣೆ, CM ಪ್ರಮಾಣವಚನ ಸ್ಥಳ ಎಲ್ಲಿ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ