ಪ್ರಗತಿವಾಹಿನಿ ಸುದ್ದಿ: ಅಂಗನವಾಡಿ ಮೇಲ್ಛಾವಣಿ ಕಾಂಕ್ರಿಟ್ ಬಿದ್ದು 4 ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮೆಹಬೂಬ ನಗರದಲ್ಲಿ ನಡೆದಿದೆ.
ಮಕ್ಕಳು ಅಂಗನವಾಡಿಯಲ್ಲಿ ಪಾಠ ಕೇಳುತ್ತ ಕುಳಿತಿದ್ದ ವೇಳೆ ಏಕಾಏಕಿ ಮೇಲ್ಛಾವಣಿಯ ಸೀಲಿಂಗ್ ಬಿದ್ದಿದೆ. ನಾಲ್ಕು ಮಕ್ಕಳು ಗಾಯಗೊಂಡಿದ್ದಾರೆ. ಅಮನ್, ಮನ್ವಿತ್, ಮರ್ದನ್, ಸುರಕ್ಷಾ ಗಾಯಗೊಂಡಿರುವ ಮಕ್ಕಳು.
ಗಾಯಾಳು ಮಕ್ಕಳನ್ನು ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ