ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ಪೊಲೀಸ್ ಪೇದೆಯೊಬ್ಬ ವಿದವೆಯನ್ನು ಪ್ರೀತಿಸಿ, ವಿವಾಹವಾಗುವುದಾಗಿ ನಂಬಿಸಿ ಆಕೆಗೆ ಮೂರು ಬಾರಿ ಗರ್ಭಪಾತ ಮಾಡಿ ಈಗ ಕೈಕೊಟ್ಟಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳದ ಮುನಿರಾಬಾದ್ ನಲ್ಲಿ ಐಆರ್ ಬಿ ಪೊಲೀಸ್ ಆಗಿರುವ ಯಮನೂರಪ್ಪ, ವಿದವೆಯನ್ನು ಪ್ರೀತಿಸಿ, ಆಕೆಯನ್ನು ವಿವಾಹವಾಗುವುದಾಗಿ ನಂಬಿಸಿ 5 ವರ್ಷಗಳ ಕಾಲ ಲಿವಿನ್ ಟುಗೆದರ್ ಸಂಬಂಧವಿಟ್ಟುಕೊಂಡು 5 ವರ್ಷಗಳಲ್ಲಿ ಮೂರು ಬಾರಿ ಆಕೆಗೆ ಗರ್ಭಪಾತ ಮಾಡಿಸಿದ್ದಾನೆ. ಈಗ ಮತ್ತೊಮ್ಮೆ ಮಹಿಳೆ ಗರ್ಭಿಣಿಯಾಗಿದ್ದು, ಈ ಬಾರಿ ಗರ್ಭಪಾತಕ್ಕೆ ಒಪ್ಪಿಲ್ಲ, ಮದುವೆಯಾಗುವಂತೆ ಮಹಿಳೆ ಹಠ ಹಿಡಿದಿದ್ದಾಳೆ.
ಇದರಿಂದ ಪೊಲೀಸನ ಪ್ರೀತಿಯ ನಾಟಕ ಬಯಲಾಗಿದ್ದು, ಮಹಿಳೆಗೆ ಕೈಕೊಟ್ಟು ನಾಪತ್ತೆಯಾಗಿದ್ದಾನೆ. ಬಟ್ಟೆ ಅಂಗಡಿ ನಡೆಸುತ್ತಿದ್ದ ಮಹಿಳೆಗೆ ಪತಿ ಸಾವನ್ನಪ್ಪಿದ್ದ. ಎರಡನೆ ಮದುವೆಯಾಗಿತ್ತಾದರೂ ಅದು ವಿಚ್ಛೇಧನವಾಗಿತ್ತು. ಬಟ್ಟೆ ಅಂಗಡಿ ನಡೆಸಿ ಜೀವನ ಸಾಗಿಸುತ್ತಿದ್ದ ಮಹಿಳೆಗೆ ಪೊಲೀಸ್ ಯಮನೂರಪ್ಪ ಪರಿಚಯವಾಗಿದ್ದು, ಮದುವೆಯಾಗುವುದಾಗಿ ನಂಬಿಸಿ 5 ವರ್ಷ ಜೊತೆಗಿದ್ದು, ಈಗ ಆತ ಎಸ್ಕೇಪ್ ಆಗಿದ್ದಾನೆ. ಮಹಿಳೆ ಎಸ್ ಪಿ ಕಚೇರಿಗೆ ದೂರು ನೀಡಿದ್ದಾಳೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ