Belagavi NewsBelgaum NewsKannada NewsKarnataka NewsLatest

ಸಾರ್ಥಕ 40 ವರ್ಷ ಪೂರ್ಣಗೊಳಿಸಿದ ಕೋರೆ: ಮೇ 18ರಂದು ಸಂಭ್ರಮಾಚರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಮೇ 16ಕ್ಕೆ 40 ವರ್ಷಗಳನ್ನು ಪೂರ್ಣಗೊಳಿಸಿದ ಡಾ.ಪ್ರಭಾಕರ ಕೋರೆಯವರಿಗೆ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ ಅವರು ಸಮಸ್ತ ಸಿಬ್ಬಂದಿಯೊಂದಿಗೆ ಹೂಗೂಚ್ಛ ನೀಡಿ ಅಭಿನಂದಿಸಿದರು.  

16 ಮೇ 1984 ರಂದು ಕಾರ್ಯಾಧ್ಯಕ್ಷರಾಗಿ ಕೆಎಲ್‌ಇ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದ ಡಾ.ಕೋರೆಯವರು ಸಂಸ್ಥೆಯನ್ನು ಜಾಗತಿಕವಾಗಿ ವಿಸ್ತರಿಸುವ ಮೂಲಕ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. 38ರಷ್ಟಿದ್ದ ಅಂಗಸಂಸ್ಥೆಗಳ ಸಂಖ್ಯೆಯನ್ನು ಇಂದು 310ಕ್ಕೆ ಕೊಂಡ್ಯೊಯ್ದ ಕೀರ್ತಿ ಡಾ.ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ.

Home add -Advt

ಅವರ ಈ ಅವಿಸ್ಮರಣೀಯ ಸೇವೆಯ ಸಂಭ್ರಮಾಚರಣೆಯನ್ನು ಕೆಎಲ್‌ಇ ಆಡಳಿತ ಮಂಡಳಿ ಹಾಗೂ ಸಮಸ್ತ ಕೆಎಲ್‌ಇ ಪರಿವಾರ ಇದೇ ಶನಿವಾರ 18 ಮೇ, 2024 ರಂದು  ಸಂಜೆ 5.30 ಕ್ಕೆ ಜೆ.ಎನ್‌. ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದೆ.

Related Articles

Back to top button