Kannada NewsKarnataka NewsLatest

ಗೋಕಾಕಲ್ಲಿ ಆರೋಗ್ಯ ಹಸ್ತಕ್ಕೆ ಸತೀಶ್ ಜಾರಕಿಹೊಳಿ ಚಾಲನೆ

ಪ್ರಗತಿವಾಹಿನಿ ಸುದ್ದಿ, ಗೋಕಾಕ: ಕೋವಿಡ್-೧೯ ಮಹಾಮಾರಿ ದೊಡ್ಡ ರೋಗವೇನಲ್ಲ, ಧೈರ್ಯದಿಂದ ಮುಂಜಾಗೃತೆ ವಹಿಸಿ ಚಿಕಿತ್ಸೆ ಪಡೆದರೇ ಗುಣಮುಖರಾಗುತ್ತಾರೆಂದು ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಬುಧವಾರದಂದು ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಕಾಂಗ್ರೇಸ್ ಪಕ್ಷ ರಾಜ್ಯಾಧ್ಯಂತ್ಯ ಹಮ್ಮಿಕೊಂಡ ಆರೋಗ್ಯ ಹಸ್ತ ಕಾರ್ಯಕ್ರಮದಡಿ ತರಬೇತಿ ಪಡೆದ ಕಾಂಗ್ರೇಸ್ ಕಾರ್ಯಕರ್ತರಿಗೆ ಕೋರೋನಾ ಸೋಂಕು ತಪಾಸಣಾ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.
ಕೊರೋನಾ ವೈರಸ್‌ಕ್ಕಿಂತ ಭಯಾನಕ ರೋಗಗಳು ಈ ಹಿಂದೆಯು ಬಂದಿವೆ. ಜನರು ದಿನನಿತ್ಯ ಅಪಘಾತ, ಕ್ಯಾನ್ಸರ್, ಹೃದಯಘಾತದಂತಹ ಹಲವಾರು ರೋಗಗಳಿಂದ ಮರಣ ಹೊಂದುತ್ತಲೆ ಇದ್ದಾರೆ. ಕೋರೋನಾ ರೋಗವನ್ನು ಕಡಿಮೆ ವೆಚ್ಚದ ಚಿಕಿತ್ಸೆಯಿಂದ ಗುಣಪಡಿಸಬಹುದು, ೩-೪ ಲಕ್ಷ ರೂಗಳ ದುಭಾರಿ ವೆಚ್ಚದ ಚಿಕಿತ್ಸೆಯ ಅವಶ್ಯಕತೆ ಇರುವದಿಲ್ಲ. ಜನತೆ ಯಾವುದೇ ಉಹಾಪೋಹಗಳಿಗೆ ಹೆದರದೇ ಧೈರ್ಯದಿಂದ ಈ ರೋಗದ ಹೋರಾಡುವಂತೆ ಸಲಹೆ ನೀಡಿದರು.
ಗೋಕಾಕ ಮತಕ್ಷೇತ್ರದ ಗ್ರಾಮ ಪಂಚಾಯತಿ, ನಗರ-ಪಟ್ಟಣಗಳಲ್ಲಿ ವಾರ್ಡವಾರು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿಗೆ ಸುರಕ್ಷಾ ಕಿಟ್, ಆಮ್ಲಜನಕ ಹಾಗೂ ಉಷ್ಣಾಂಶದ ತಪಾಸಣಾ ಉಪಕರಣಗಳನ್ನು ನೀಡಲಾಗಿದ್ದು ಅವರು ಪ್ರತಿ ಮನೆ-ಮನೆಗಳಿಗೆ ತೆರಳಿ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆಯ ಮಾರ್ಗದರ್ಶನವನ್ನು ನೀಡಿ ಮನೋಸ್ಥೈರ್ಯ ತುಂಬುವ ಕಾರ್ಯವನ್ನು ಮಾಡಲಿದ್ದಾರೆ. ಅವಶ್ಯಕತೆಯಿರುವ ಸೋಂಕಿತರಿಗೆ ಆಮ್ಮಜನಕದ ಪೂರೈಕೆಯನ್ನು ಮಾಡಲಾಗುತ್ತಿದ್ದು ಜನತೆ ಸಹಕರಿಸಿ ಇವುಗಳ ಉಪಯೋಗ ಪಡೆದು ಕೋರೋನಾದಿಂದ ಮುಕ್ತರಾಗಲು ಶ್ರಮಿಸೋಣವೆಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ನಗರ ಹಾಗೂ ಗ್ರಾಮೀಣ ಘಟಕದ ಅಧ್ಯಕ್ಷರಾದ ಝಾಕೀರ ನದಾಫ, ಪ್ರಕಾಶ ಡಾಂಗೆ, ರಿಯಾಜ ಚೌಗಲಾ, ವಿವೇಕ ಜತ್ತಿ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ರಾಮಗಾನಟ್ಟಿ, ಮುನ್ನಾ ಖತೀಬ ಸೇರಿದಂತೆ ಅನೇಕರು ಇದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button