ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಈ ವರೆಗೂ ಹೆಸರನ್ನು ಅಂತಿಮಗೊಳಿಸಲಾಗಿಲ್ಲ. ನಾಯಕನ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ನಾಯಕರ ಜತೆ ಹೈಕಮಾಂಡ್ ಚರ್ಚೆ ಮುಂದುವರೆಸಿದೆ. ಡಿ.ಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಸಾಧ್ಯತೆಯಿದ್ದು, ನಾಲ್ಕು ಕಾರ್ಯಾಧ್ಯಕ್ಷರ ಹೆಸರನ್ನು ಫೈನಲ್ ಮಾಡುವತ್ತ ಚರ್ಚೆಗಳು ನಡೆದಿವೆ.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಕೆಪಿಸಿಸಿಗೆ ಯಾರೇ ಅಧ್ಯಕ್ಷರಾದರೂ ಅವರು ನಮ್ಮವರೇ. ಡಿ.ಕೆ ಶಿವಕುಮಾರ್ ಅಧ್ಯಕ್ಷರಾದರೆ ಅವರ ಪರ ಕೆಲಸ ಮಾಡುತ್ತೇವೆ. ಹೈಕಮಾಂಡ್ ನಿರ್ಧಾರವನ್ನು ಒಪ್ಪಲೇ ಬೇಕಾಗುತ್ತೆ ಎಂದರು.
ನನಗೆ ಕಾರ್ಯಾಧ್ಯಕ್ಷ ಹುದ್ದೆ ಕೊಟ್ರೆ ನಿಭಾಯಿಸುತ್ತೇನೆ. ಪಕ್ಷ ಬೆಳೀಬೇಕು ಸಂಘಟನೆಯಾಗಬೇಕು ಎಂಬುದಷ್ಟೇ ನಮ್ಮ ಉದ್ದೇಶ. ಇನ್ನು ಯಾವುದೇ ಪಕ್ಷದಲ್ಲಿ ಗುಂಪುಗಾರಿಕೆ ಎಂಬುದು ಸಾಮಾನ್ಯ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಡಿ.ಕೆ ಶಿವಾಕುಮಾರ್ ಅವರಿಗೆ ನೀಡಿದರೂ ಪರವಾಗಿಲ್ಲ ಆದರೆ ನಾಲ್ಕು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ ಎನ್ನಾಲಾಗಿದೆ. ಅಲ್ಲದೇ ಸಿಎಲ್ ಪಿ ನಾಯಕ ಸ್ಥಾನವನ್ನು ಎಂ ಬಿ ಪಾಟೀಲ್ ಗೆ ನೀಡಬೇಕು. ವಿಪಕ್ಷ ನಾಯಕ ಸ್ಥಾನದಲ್ಲಿ ಮಾತ್ರ ತಾವು ಮುಂದುವರೆಯುವುದಾಗಿ ಹೈಕಾಮಾಂಡ್ ಬಳಿ ಸಿದ್ದರಾಮಯ್ಯ ತಿಳಿಸಿದ್ದಾರೆ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ