Kannada NewsKarnataka NewsLatest

*ಇಂದು KPSC ಗೆಜೆಟೆಡ್ ಪ್ರೊಬೇಷನರ್ ಪೂರ್ವಭಾವಿ ಪರೀಕ್ಷೆ*: *1.47 ಲಕ್ಷ ಅಭ್ಯರ್ಥಿಗಳು ಭಾಗಿ*: *ಎಕ್ಸಾಂ ಸೆಂಟರ್ ಗಳಲ್ಲಿ ಬಿಗಿ ಭದ್ರತೆ*

ಪ್ರಗತಿವಾಹಿನಿ ಸುದ್ದಿ: ಸಾಲು ಸಾಲು ಕೆಪಿಎಸ್ ಸಿ ಹಗರಣದ ನಡುವೆ ಇಂದು ಇಂದು ರಾಜ್ಯದಲ್ಲಿ ಕೆಎಎಸ್‌ ಸಿಗೆಜೆಟೆಡ್ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆ ನಡೆಯಲಿದೆ. 319 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಪೂರ್ವಭಾವಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.

ಅಕ್ರಮಗಳನ್ನು ತಡೆಯಲು ಹೊಸ ಹೊಸ ನಿಯಮಗಳನ್ನು ಕೆಪಿಎಸ್‌ಸಿ ಜಾರಿಗೆ ತಂದಿದೆ. ಹೊಸ ಸುಧಾರಣಾ ಕ್ರಮಗಳ ನಡುವೆ ಪರೀಕ್ಷೆಗೆ ತಯಾರಿ ನಡೆದಿದೆ. 1.47 ಲಕ್ಷ ಅಭ್ಯರ್ಥಿಗಳ ಪೂರ್ವಭಾವಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಪರೀಕ್ಷೆ ನಡೆಯೋ ಜಿಲ್ಲಾ ಕೇಂದ್ರಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಡಿಸಿ- ಎಸ್ಪಿಗಳ ನೇತೃತ್ವದಲ್ಲಿ ಭದ್ರತೆ, ಪರೀಕ್ಷಾ ವ್ಯವಸ್ಥೆ ಮಾನಿಟರ್ ಮಾಡಲಾಗುತ್ತದೆ.

ಗೆಜೆಟೆಡ್ ಪ್ರೊಬೇಷನರಿ ಒಟ್ಟು ಹುದ್ದೆಗಳು- 319
ಇದರಲ್ಲಿ 202 ಗ್ರೂಪ್ ಬಿ ಹಾಗೂ 117 ಗ್ರೂಪ್ ಎ ಹುದ್ದೆಗಳು.
ಪ್ರಿಲಿಮ್ಸ್ ಗೆ ನೋಂದಣಿ ಆಗಿರೋ ಅಭ್ಯರ್ಥಿಗಳು-1.47 ಲಕ್ಷ
91,238 ಪುರುಷರು ಮತ್ತು 53,074 ಮಹಿಳೆಯರು

ಪರೀಕ್ಷಾ ಕೇಂದ್ರಗಳು – ಒಟ್ಟು 345 – ಕಲಬುರಗಿ, ರಾಯಚೂರು, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಬೆಳಗಾವಿ, ಉತ್ತರಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಹಾಸನ, ದಾವಣಗೆರೆ, ತುಮಕೂರು, ಮೈಸೂರು, ಬೆಂಗಳೂರು ನಗರಗಳಲ್ಲಿ ಪರೀಕ್ಷೆ ನಡೆಯುತ್ತಿದೆ.

ಬೆಳಿಗ್ಗೆ 10:00 ರಿಂದ 12:00 ರವರೆಗೆ ಪತ್ರಿಕೆ-1. ಮಧ್ಯಾಹ್ನ 02:00 ರಿಂದ 04:00 ರವರೆಗೆ ಪತ್ರಿಕೆ-2 ನಡೆಯಲಿದೆ.
.ಪ್ರತಿ ಪತ್ರಿಕೆಗೆ 100 ಪ್ರಶ್ನೆಗಳು 200 ಅಂಕಗಳು. ಎರಡೂ ಪತ್ರಿಕೆಗಳು ಸೇರಿ ಒಟ್ಟು 2,94,134 OMR ಹಾಳೆಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ.

ಪರೀಕ್ಷಾ ಹೊಸ ನಿಯಮ:

.ಪರೀಕ್ಷಾ ಕೇಂದ್ರದ ಆವರಣದಲ್ಲಿ ಯಾವುದೇ ಅನಧಿಕೃತ ವ್ಯಕ್ತಿಯ ಪ್ರವೇಶಕ್ಕೆ ಅವಕಾಶ ಇಲ್ಲ.
.ಪ್ರವೇಶಕ್ಕೆ ಅನುಮತಿ ಇರುವ ವ್ಯಕ್ತಿಯೂ ಭದ್ರತಾ ತಪಾಸಣೆಗೆ ಒಳಪಡಬೇಕು.
.ಮಾರ್ಗಸೂಚಿಯನ್ವಯ ಅನುಮತಿಸಿದ ವಸ್ತುಗಳನ್ನು ಮಾತ್ರ ಅವರು ತರಬಹುದು.
.ಯಾವುದೇ ಕಾರಣಕ್ಕೂ ಅಭ್ಯರ್ಥಿಗಳು ಮೊಬೈಲ್‌ನೊಂದಿಗೆ ಪರೀಕ್ಷಾ ಕೇಂದ್ರ ಪ್ರವೇಶಿಸುವಂತಿಲ್ಲ.
.ಅಂತಹ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು.

.ಇದೇ ಮೊದಲ ಬಾರಿಗೆ ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಇಬ್ಬರು ಮೇಲ್ವಿಚಾರಕರ ನಿಯೋಜನೆ.
.ಅವರಲ್ಲಿ ಒಬ್ಬರು ಕಡ್ಡಾಯವಾಗಿ ಸರ್ಕಾರಿ ಕಾಲೇಜು ಸಿಬ್ಬಂದಿಯಾಗಿರಬೇಕು.
.ಅಭ್ಯರ್ಥಿಗಳು ಪರೀಕ್ಷಾ ಕೊಠಡಿ ಪರೀಕ್ಷಿಸಿದ ನಂತರ ಮತ್ತೊಮ್ಮೆ ತಪಾಸಣೆ ನಡೆಸುವುದು ಹಾಗೂ ಪರೀಕ್ಷಾ ಕೊಠಡಿಯಲ್ಲಿ ಕಟ್ಟೆಚ್ಚರಿಕೆ ವಹಿಸಲು ಇಬ್ಬರು ಮೇಲ್ವಿಚಾರಕರ ನಿಯೋಜನೆ ಮಾಡಲಾಗುತ್ತಿದೆ.

.ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳ ಭಾಗವಹಿಸುವಿಕೆ ತಡೆಯಲು ಕ್ರಮ.
.ಪರೀಕ್ಷಾ ಕೇಂದ್ರದಲ್ಲಿ ಅವ್ಯವಹಾರಕ್ಕೆ ಅವಕಾಶ ನೀಡಿರುವುದು ಕಂಡು ಬಂದರೆ ಅಂತಹ ಖಾಸಗಿ ಕಾಲೇಜುಗಳ ಪರವಾನಿಗೆ ರದ್ದು.
.ಪರೀಕ್ಷಾ ಅಕ್ರಮಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ.
. ಮೊದಲ ಬಾರಿಗೆ 5 ಆಯ್ಕೆಗಳ ಪದ್ಧತಿ ಜಾರಿ.

.ಅಭ್ಯರ್ಥಿಗೆ ಉತ್ತರ ಗೊತ್ತಿಲ್ಲದಿದ್ದರೆ 5ನೇ ಆಯ್ಕೆಯನ್ನು ಕಡ್ಡಾಯವಾಗಿ ಗುರುತು ಮಾಡಬೇಕು.
.ಯಾವುದೇ ಪ್ರಶ್ನೆಗೆ ಉತ್ತರ ಖಾಲಿ ಬಿಡುವಂತಿಲ್ಲ.

.ಪ್ರತಿ OMR ಹಾಳೆ ವ್ಯವಸ್ಥೆ. ಒಂದು ಪ್ರತಿ ಅಭ್ಯರ್ಥಿಗೆ, ಒಂದು KPSC ಮೌಲ್ಯಮಾಪನಕ್ಕೆ ಮತ್ತು ಮೂರನೆಯದು ಜಿಲ್ಲಾಧಿಕಾರಿ/KPSC ಸ್ಟ್ರಾಂಗ್ ರೂಮಲ್ಲಿ ಸುರಕ್ಷಿತವಾಗಿಡಲಾಗುವುದು.
.ಆ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು.
.ಎಲ್ಲಾ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಮತ್ತು ಮೊಬೈಲ್ ಜಾಮರ್ ಗಳ ಅಳವಡಿಕೆ.
. ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳೇ ಜಾಮರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೃಢೀಕರಿಸಬೇಕು.

.ಪ್ರತಿ ಪರೀಕ್ಷಾ ಕೊಠಡಿಗೆ ಇಬ್ಬರು ಮೇಲ್ವಿಚಾರಕರನ್ನು ನಿಯೋಜನೆ.ಗುರುತಿನ ಚೀಟಿ ಪರಿಶೀಲನೆ, ತಪಾಸಣೆ ಮತ್ತು ಕೊಠಡಿಯ ಹಿಂಭಾಗದಿಂದ ನಿಗಾ ವಹಿಸಲು ಇಬ್ಬರು ಮೇಲ್ವಿಚಾರಕರ ನೇಮಕ.
.ಪರೀಕ್ಷಾ ದಿನದಂದೇ ಅಪ್ಲೋಡ್ ಮಾಡುವ ಮಹತ್ವದ ನಿರ್ಧಾರ.
.ಪಾರದರ್ಶಕತೆಗಾಗಿ ಪರೀಕ್ಷೆ ನಡೆದ ದಿನದಂದೇ ಎಲ್ಲಾ ಸ್ಕ್ಯಾನ್ ಮಾಡಿದ OMR ಪ್ರತಿಗಳನ್ನುKPSC ವೆಬ್‌ಸೈಟ್‌ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅಪ್ಲೋಡ್ ಮಾಡಲಾಗುವುದು.

.12 ಜಿಲ್ಲೆಗಳಲ್ಲಿ ಒಎಂಆರ್ ಹಾಳೆ ಸ್ಕ್ಯಾನ್ ಮಾಡಲು ವ್ಯವಸ್ಥೆ.
.ಮುಂದಿನ ಪರೀಕ್ಷೆಗಳಿಗೆ ನಕಲಿ ಅಭ್ಯರ್ಥಿಗಳ ತಡೆಗೆ ಇ-ಆಡಳಿತ ಇಲಾಖೆಯ ಮೂಲಕ ಪರೀಕ್ಷಾ ಕೇಂದ್ರಗಳಲ್ಲಿ ಆಧಾರ್ ಆಧಾರಿತ ಗುರುತು ಪರಿಶೀಲನೆ ವ್ಯವಸ್ಥೆ.

Related Articles

Back to top button