ಗೋಕಾಕ್ : ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ – ಎಲೆಕ್ಟ್ರಾನಿಕ್ ಚಿಪ್ ಅಳವಡಿಸಿದ್ದ ಬನಿಯನ್ ಒದಗಿಸುತ್ತಿದ್ದ ಆರೋಪಿಯ ಬಂಧನ
![](https://pragativahini.com/wp-content/uploads/2022/09/1-KPTCL.jpg)
ಪ್ರಗತಿ ವಾಹಿನಿ ಸುದ್ದಿ ಗೋಕಾಕ – ಕೆಪಿಟಿಸಿಎಲ್ ಜ್ಯೂನಿಯರ್ ಅಸಿಸ್ಟಂಟ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ವಿವಿಧ ಎಲೆಕ್ಟ್ರಾನಿಕ್ ಉಪಕರಣಗಳನ್ನು ಅಕ್ರಮವಾಗಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಮಾರಾಟ ಮಡುತ್ತಿದ್ದ.
ಅಷ್ಟೇ ಅಲ್ಲ, ಜಾಮರ್ ಅಳವಡಿಸಿದ್ದರೂ ಕಾರ್ಯ ನಿರ್ವಹಿಸುವ ಉಪಕರಣಗಳು, ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಅಳವಡಿಸಿದ್ದ ಬನಿಯನ್‌ಗಳನ್ನೂ ಈತ ಅಭ್ಯರ್ಥಿಗಳಿಗೆ ಪೂರೈಸುತ್ತಿದ್ದ!
ಬೆಂಗಳೂರಿನ ಎಸ್‌ಪಿ ರಸ್ತೆಯ ಸ್ಕೈ ಜೋನ್ ಅಂಗಡಿಯ ಮಾಲೀಕ, ದೇವಸಂದ್ರದ ಮೊಹಮ್ಮದ ಅಜೀಮುದ್ದಿನ್ ಬಂಧಿತ ಆರೋಪಿ. ಜಾಮರ್ ಅಳವಡಿಸಿದ್ದರೂ ಸಹ ಕಾರ್ಯ ನಿರ್ವಹಿಸಬಲ್ಲ, ಇಲೆಕ್ಟ್ರಾನಿಕ್ ಉಪಕರಣಗಳನ್ನು ಅಳವಡಿಸಿದ ಬನಿಯನ್‌ಗಳನ್ನು ಈತ ತಯಾರಿಸುತ್ತಿದ್ದ. ಈ ಹಿಂದೆ ರಾಜ್ಯ ಸರಕಾರದಿಂದ ವಿವಿಧ ಹುದ್ದೆಗಳ ಪರೀಕ್ಷೆಯ ವೇಳೆ ನಡೆದ ಪರೀಕ್ಷಾ ಅಕ್ರಮಗಳಲ್ಲಿಯೂ ಈತ ಇಲೆಕ್ಟ್ರಾನಿಕ್ ಉಪಕರಣಗಳನ್ನು ಅಭ್ಯರ್ಥಿಗಳಿಗೆ ಮಾರಾಟ ಮಾಡಿದ್ದ ಎಂದು ತನಿಖೆಯ ವೇಳೆ ತಿಳಿದುಬಂದಿದೆ.
ಆರೋಪಿಯಿಂದಒಟ್ಟು ಸುಮಾರು ೯.೮೫ ಲಕ್ಷ ರೂ. ಮೌಲ್ಯದ ರೂಪಾಯಿ ಮೌಲ್ಯದ ಆಟೋಮ್ಯಾಟಿಕ್ ಎಲೆಕ್ಟ್ರಾನಿಕ್ ಡಿವೈಸ್, ಆನ್ ಎಂಡ್ ಆಫ್ ಬಟನ್ ಇರುವ ಎಲೆಕ್ಟ್ರಾನಿಕ್ ಡಿವೈಸ್, ಜಿಪಿಎಸ್ ಅಟೋಮೆಟಿಕ್ ಎಲೆಕ್ಟ್ರಾನಿಕ್ ಡಿವೈಸ್, ಎಲೆಕ್ಟ್ರಾನಿಕ್ ಇಯರ್‌ಪೀಸ್, ಮ್ಯಾಗ್ನೆಟಿಕ್ ಇಯರ್ ಪೀಸ್, ಕೊರಳಿಗೆ ಧರಿಸುವ ಆಟೋಮ್ಯಾಟಿಕ್ ಎಲೆಕ್ಟ್ರಾನಿಕ್ ಡಿವೈಸ್, ಎಲೆಕ್ಟ್ರಾನಿಕ್ ಡಿವೈಸ್ ಅಳವಡಿಸರುವ ಬನಿಯನ್‌ಗಳು, ವಾಕಿಟಾಕಿಗಳು, ವಾಕಿಟಾಕಿ ಚಾರ್ಜರಗಳು, ಮಾಡಿಪೈ ಮಾಡಿದ ವಾಕಿಟಾಕಿಗಳು, ಜಾಮರ್ ಅಳವಡಿಸಿದ್ದರೂ ಸಹ ಪರೀಕ್ಷಾ ಕೇಂದ್ರದಲ್ಲಿ ಒಯ್ದು ಉಪಯೋಗಿಸುತ್ತಿದ್ದ ಹೆಡ್‌ಫೋನ್ ಜಾಕ್ ಜೋಡಿಸಿರುವ ಬನಿಯನ್‌ಗಳು ಇತ್ಯಾದಿಗಳನ್ನು ಪ್ರಕರಣದ ತನಿಖಾಧಿಕಾರಿ ಡಿವೈಎಸ್‌ಪಿ ವೀರೇಶ ದೊಡಮನಿ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
https://pragati.taskdun.com/latest/belagavi-ready-for-ganesha-murthy-procession/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ