Latest

ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ; ಹನುಮಂತನ ಬಾಲದಂತೆ ಬೆಳೆಯುತ್ತಿದೆ ಆರೋಪಿಗಳ ಸಂಖ್ಯೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಪಿಟಿಸಿಎಲ್ ಪರೀಕ್ಷಾ ಅಕ್ರಮದ ಮತ್ತೋರ್ವ ಆರೋಪಿಯನ್ನು ಗೋಕಾಕ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಭೀಮಪ್ಪ ಸಿದ್ದಪ್ಪ ಗುದಿಗೊಪ್ಪ ( 30) ಬಂಧಿತ ಆರೋಪಿ. ಈತನನ್ನು ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ವಿದ್ಯಾರ್ಥಿಗಳಿಗೆ ಕೊಟ್ಟ ಆರೋಪ, ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಲು ಹಣ ಕೊಟ್ಟ ಆರೋಪದ ಮೇಲೆ ಬಂಧಿಸಲಾಗಿದೆ.

Home add -Advt

ಬಂಧಿತ ಆರೋಪಿಯಿಂದ 6 ಮೊಬೈಲ್, ಒಂದು ಲ್ಯಾಪ್ ಟಾಪ್, ಮೂರು ಎಲೆಕ್ಟ್ರಾನಿಕ್ ಸಲಕರಣೆಗಳು ಹಾಗೂ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಗೋಕಾಕ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದಾರೆ.

ಬಗೆದಷ್ಟೂ ಆಳ:

ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ ಪ್ರಕರಣ ಬಗೆದಷ್ಟೂ ಆಳವಾಗುತ್ತಲೇ ಸಾಗಿದೆ. ಪೊಲೀಸರು ತನಿಖೆ ನಡೆಸಿದಷ್ಟೂ ಪ್ರಕರಣದಲ್ಲಿ ಮತ್ತಷ್ಟು ಜನ ಒಳಗೊಂಡಿರುವುದು ಪತ್ತೆಯಾಗುತ್ತಿದೆ. ಈಗಾಗಲೇ ಪ್ರಕರಣದಲ್ಲಿ 22 ಜನರನ್ನು ಬಂಧಿಸಲಾಗಿತ್ತು. ಬುಧವಾರ ಬಂಧಿಸಿದ ಆರೋಪಿ ಸೇರಿ ಬಂಧಿತ ಆರೋಪಿಗಳ ಸಂಖ್ಯೆ 23 ಕ್ಕೆ ಏರಿದೆ.

Breaking News: ಬೆಳಗಾವಿ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ, ಸಹಾಯಕ ನಿರ್ದೇಶಕ ಲೋಕಾಯುಕ್ತ ಬಲೆಗೆ

https://pragati.taskdun.com/latest/joint-director-assistant-director-of-belgaum-industries-centre-traped-by-lokayukta-bale/

Related Articles

Back to top button