Karnataka News

*ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ: ಪ್ರಮುಖ ಆರೋಪಿಯ ಬಂಧನ*

ಪ್ರಗತಿ ವಾಹಿನಿ ಸುದ್ದಿ, ಗೋಕಾಕ:
ಕೆಪಿಟಿಸಿಎಲ್ (KPTCL) ಪರೀಕ್ಷಾ ಅಕ್ರಮದ ಆರೋಪಿಗಳನ್ನು ಒಬ್ಬರಾದ ಮೇಲೊಬ್ಬರಂತೆ ಗೋಕಾಕ ಪೊಲೀಸರು ಹೆಡೆಮುರಿ ಕಟ್ಟುತ್ತಿದ್ದಾರೆ. ಆ ಮೂಲಕ ಕಾನೂನಿನ ಕೈಗಳು ಬಲಿಷ್ಠ ಎಂಬುದನ್ನು ಸಾಬೀತು ಮಾಡಿದ್ದಾರೆ.

ಈ ಅಕ್ರಮದಲ್ಲಿ ಭಾಗಿಯಾಗಿ ಪರಾರಿಯಾಗಿದ್ದ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಗೋಕಾಕ್ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಯಬಾಗ ತಾಲೂಕಿನ ಕೊಳಿಗುಡ್ಡದ ಸೋಮನಗೌಡ ಶಂಕರ ಪಾಟೀಲ್ (36) ಬಂಧಿತ ಆರೋಪಿ.

 

ಈತನು ಕೆಪಿಟಿಸಿಎಲ್ ಜ್ಯೂನಿಯರ್ ಅಸಿಸ್ಟೆಂಟ್ ಪರೀಕ್ಷೆಯ ವೇಳೆ ಆರೋಪಿಗಳಾದ ಗದಗ ಮುನ್ಸಿಪಲ್ ಪಿಯು ಕಾಲೇಜಿನ ಉಪ ಪ್ರಾಂಶುಪಾಲ ಮಾರುತಿ ಸೋನಾವಣೆ ಮತ್ತು ಅವರ ಮಗ ಸಮೀತ್ ಕುಮಾರ ಸೋನಾವಣೆ ಅವರಿಗೆ ಇತರ ಆರೋಪಿಗಳಿಂದ ಪಡೆದುಕೊಂಡಿದ್ದ 7 ಲಕ್ಷ ಹಣದಲ್ಲಿ 4.50 ಲಕ್ಷ ರೂ. ಹಣ ಕೊಟ್ಟಿದ್ದ.

 

ಅಲ್ಲದೇ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವ ಸಲುವಾಗಿ ಒಂದು ಸಿಮ್ ಕಾರ್ಡ್ ಕೊಟ್ಟಿದ್ದ. ಬಳಿಕ ಪರೀಕ್ಷೆಯ ದಿನ ವಾಟ್ಸಾಪ್ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿಸಿ, ಎಲೆಕ್ಟ್ರಾನಿಕ್ ಡಿವೈಸ್ ಪಡೆದಿದ್ದ ಆರೋಪಿಗಳಿಗೆ ತಲುಪಿಸವಂತೆ ಮಾಡಿದ್ದ. ಈ ಮೂಲಕ ಅಕ್ರಮ ನಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.

ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಈಗ ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದಾನೆ.

ಎಚ್ಚರವಿರಲಿ, ಮಹಾಜನ್ ವರದಿ ಜಾರಿಯಾದರೆ ಲಾಭ ಮಹಾರಾಷ್ಟ್ರಕ್ಕೇ! ನಾವು ಏನೇನು ಕಳೆದುಕೊಳ್ಳುತ್ತೇವೆ ಗೊತ್ತೇ?

https://pragati.taskdun.com/implimentation-of-mahajan-commission-report-is-profitable-for-maharashtra-only/

ಗಡಿ ಕಿಚ್ಚು: ತಟಸ್ಥ ಸಮಿತಿ ರಚಿಸಲು ಉಭಯ ರಾಜ್ಯಗಳಿಗೆ ಅಮಿತ್ ಶಾ ಸೂಚನೆ

https://pragati.taskdun.com/border-dispute-karnataka-maharashtra-cms-meeting-begins-under-the-mediation-of-amit-shah/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button