Kannada NewsLatest

KPTCL ನೇಮಕಾತಿ ಅಕ್ರಮ; ಕಿಂಗ್ ಪಿನ್ ಸೇರಿ 20 ಆರೋಪಿಗಳಿಗೆ ಜಾಮೀನು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಪಿಟಿಸಿ ಎಲ್ ಕಿರಿಯ ಸಹಾಯಕ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಸೇರಿದಂತೆ ಎಲ್ಲಾ 20 ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ 2ನೇ ಜೆ ಎಂಎಫ್ ಸಿ ಕೋರ್ಟ್ ಆದೇಶ ನೀಡಿದೆ.

ಪ್ರಮುಖ ಆರೋಪಿ ಸಂಜು ಭಂಡಾರಿ ಸೇರಿದಂತೆ ಎಲ್ಲಾ 20 ಆರೋಪಿಗಳಿಗೂ ಜಾಮೀನು ನೀಡಲಾಗಿದೆ.

ಆ.7ರಂದು ಗೋಕಾಕ್ ನ ಜಿ ಎಸ್ ಎಸ್ ಪರೀಕ್ಷಾ ಕೇಂದ್ರದಲ್ಲಿ ಕೆ ಪಿ ಟಿಸಿ ಎಲ್ ಪರೀಕ್ಷೆ ನಡೆದಿತ್ತು. ಸ್ಮಾರ್ಟ್ ವಾಚ್ ಬಳಸಿ ಕೆಲ ಅಭ್ಯರ್ಥಿಗಳು ಅಕ್ರಮ ನಡೆಸಿದ್ದಾಗಿ ತಿಳಿದುಬಂದಿತ್ತು.

ಪ್ರಕರಣಸಂಬಂಧ ಗೋಕಾಕ್ ಪೊಲೀಸರು ಸಿದ್ಧಪ್ಪ ಮದಿಹಳ್ಳಿ ಎಂಬಾತನನ್ನು ಆ.10ರಂದು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಆತ ಸ್ಮಾರ್ಟ್ ಫೋನ್ ಬಳಸಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದ. ಅಕ್ರಮದ ಪ್ರಮುಖ ಆರೋಪಿ ಸಂಜು ಭಂಡಾರಿ ಸೇರಿ ಅಕ್ರಮದಲ್ಲಿ ಭಾಗಿಯಾಗಿದ್ದ 20 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೀಗ ಎಲ್ಲಾ ಆರೋಪಿಗಳಿಗೂ ಜಾಮೀನು ಮಂಜೂರಾಗಿದೆ.

Home add -Advt

ಮತ್ತೊಂದು ಬಸ್ ಭೀಕರ ಅಪಘಾತ; ನಾಲ್ವರ ದುರ್ಮರಣ

https://pragati.taskdun.com/latest/bustruckaccident4-death15-injuerd/

Related Articles

Back to top button