Kannada NewsKarnataka NewsLatest

ಕೃಷ್ಣಾ ನದಿ: 48 ಗಂಟೆ ನಂತರ ಅಪಾಯದ ಮುನ್ಸೂಚನೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – 48 ಗಂಟೆ ನಂತರ ಕಲ್ಲೋಳ ಬ್ಯಾರೇಜ್ ನಿಂದ 2.75 ಲಕ್ಷ ಕ್ಯುಸೆಕ್ಸ್ ನೀರು ಬಿಡುವ ಮುನ್ಸೂಚನೆಯನ್ನು ನೀಡಲಾಗಿದ್ದು, ಇದು ನದಿ ಪಾತ್ರದಲ್ಲಿ ಭಾರಿ ಪ್ರವಾದ ಎಚ್ಚರಿಕೆಯಾಗಲಿದೆ.

ಸಧ್ಯಕ್ಕೆ ಕೃಷ್ಣಾ ನದಿಯ ಒಟ್ಟೂ ಹರಿವು 1,21,081 ಕ್ಯುಸೆಕ್ಸ್ ಇದ್ದು ಇದರಿಂದ ಅಂತಹ ದೊಡ್ಡ ಪ್ರಮಾಣದ ಅಪಾಯವಿಲ್ಲ. ಆದರೆ 48 ಗಂಟೆ ನಂತರ 2,75,000 ಕ್ಯುಸೆಕ್ಸ್ ನೀರನ್ನು ಕಲ್ಲೋಳ ಬ್ಯಾರೇಜ್ ನಿಂದ ಹೊರಬಿಡುವ ಮುನ್ಸೂಚನೆ ನೀಡಲಾಗಿದೆ. ಇದು ನದಿ ಪಾತ್ರದಲ್ಲಿ ದೊಡ್ಡ ಸಮಸ್ಯೆಯನ್ನು ತಂದೊಡ್ಡಲಿದೆ.

ಇಂದು ಬೆಳಗ್ಗೆ 8 ಗಂಟೆ ವೇಳೆಗೆ ಕೊಯ್ನಾ ಜಲಾಶಯದಿಂದ  55,958 ಕ್ಯುಸೆಕ್ಸ್, ಕನ್ಹೇರಿಯಿಂದ 7118, ವಾರ್ಣಾದಿಂದ 14486,  ದೂಧಗಂಗಾದಿಂದ 12950,  ರಾಧಾನಗರಿಯಿಂದ 7112, Tulashi _884 Kasari _ 1750 Dhom Balkewadi _3316 urmodi _ 4330 Dhom _ 1094 Tarali _ 4500 Gurheghar _ 3080 Uttarmand _262 Kadvi _2519 Kumbhi _650 pat agaon _ 1072 ಕ್ಯುಸೆಕ್ಸ್ ನೀರು ಕೃಷ್ಣಾ ನದಿ ಸೇರುತ್ತಿದೆ.

ಇಂದು ಬೆಳಗ್ಗೆ 9 ಗಂಟೆಗೆ ಆಲಮಟ್ಟಿ ಜಲಾಶಯದ ಮಟ್ಟ 518.77 ಮೀಟರ್. ಇನ್ಫ್ಲೋ  129722 ಕ್ಯುಸೆತಕ್ಸ್, ಔಟ್ ಪ್ಲೋ  250000 ಕ್ಯುಸೆಕ್ಸ್.  ಆಲಮಟ್ಟಿ ಜಲಾಶಯದಲ್ಲಿ 110.285 ಟಿಎಮ್ ಸಿ ಸಂಗ್ರಹವಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button